ಮಾಡರ್ನ್ ಕವಿ ಮಂಜ್ಯಾ
(ಚಿತ್ರ ಕೃಪೆ: ಕಲರ್ಸ್ ಕನ್ನಡ ಇನ್ಸ್ಟಾಗ್ರಾಮ್)
ತಾಂಡವ್ ರಾಮ್ ಕೂಡ ಸಿಟ್ಟಾಗಿದ್ದಾರೆ. ಮಂಜ್ಯಾನ್ ವರ್ತನೆಗೂ ಬೇಸರ ಪಟ್ಟಿದ್ದಾರೆ. ಮಂಜ್ಯಾ, ನಿನ್ನಿಂದ ಊಟ ಹೋಗಿದೆ. ಸ್ವಲ್ಪ ಆ ಗಿಲ್ಟ್ ಇಟ್ಟುಕೋ ಅಂತ ಹೇಳಿದ್ದಾರೆ.
ತಾಂಡವ್ ಮಾತಿಗೆ ಮಂಜುನಾಥ್ ಕೌಂಟರ್ ಕೊಟ್ಟಿದ್ದಾರೆ. ಇನ್ನೇನು ಮಾಡಲಿ? ನಾನು ಅಳ್ತಾ ಕೂತು ಬಿಡಲಾ ಅಂತಲೂ ಮಂಜ್ಯಾ ಕೇಳ್ತಾರೆ.
ದೊಡ್ಮನೆಯಲ್ಲಿ ಆಟ ನಡೀತಾನೆ ಇವೆ. ಆದರೆ, ಈ ಹಿಂದಿನ ಸೀಸನ್ ರೀತಿ ಯಾರೂ ಅಗ್ರೇಸಿವ್ ಆಗಿ ಆಡ್ತಿಲ್ಲ ಅನಿಸುತ್ತಿದೆ. ಮಂಜ್ಯಾ ಹಾಗೂ ಕಾವ್ಯ ಆಟವೇ ಅದಕ್ಕೆ ಸಾಕ್ಷಿ ಅನಿಸುತ್ತಿದೆ.
ಎದ್ದೇಳು ಮಂಜುನಾಥ; ಮಾಡರ್ನ್ ಕವಿ ಮಂಜ್ಯಾಗೆ ಬಿಗ್ ಬಾಸ್ ಹೀಗೆ ಹೇಳಿದ್ಯಾಕೆ?
(ಚಿತ್ರ ಕೃಪೆ: ಕಲರ್ಸ್ ಕನ್ನಡ ಇನ್ಸ್ಟಾಗ್ರಾಮ್)
ದೊಡ್ಮನೆಯಲ್ಲಿ ಲವ್ಲಿ ಟ್ರ್ಯಾಕ್‌ಗಳು ಇವೆ. ಕಿಚ್ಚ ಸುದೀಪ್ ‘ಸೂಪರ್ ಸಂಡೆ’ ಸಂಚಿಕೆಯಲ್ಲಿ ಇವುಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಯಶಸ್ ಮತ್ತು ಆಸಿಯಾ ಸ್ಟೋರಿ ಇಲ್ಲಿ ರಿವೀಲ್ ಆಗಿದೆ.
ಈ ಮನೆಯಲ್ಲಿ ಗಗನ್ ಒಂದು ಹಂತಕ್ಕೆ ಇದ್ದಾರೆ. ಇವರು ಸೀರಿಯಸ್ ಅನಿಸುತ್ತಾರೆ. ತಾಂಡವು ರಾಮ್ ಕ್ಯಾಪ್ಟನ್ ಆಗಿದ್ದಾರೆ. ಸಂಗೀತಾ ಸೀರಿಯಸ್ ಇದ್ದಾರೆ. ಧನುಷ್ ಮಂಜುನಾಥ್ ಕೂಡ ಹೀಗೆ ಇರೋದು.
ಆದರೆ, ಗಾನವಿ ಗೌಡ ಏನೋ ಮಾಡ್ತಾರೆ ಅನಿಸ್ತಾ ಇತ್ತು. ಅವರು ಯಾಕೋ ಫುಲ್ ಚೇಂಜ್ ಆಗಿದ್ದಾರೆ. ಆಟ ಬದಲಿಸುತ್ತೇನೆ ಅಂತ ಹೇಳಿ ತಾವೇ ಬದಲಾದಂತೆ ಇದೆ.
ಇದರ ನಡುವೆ ಕಾಮಿಡಿ ಮಾಡ್ತೀನಿ ಅಂತ ಬಂದ ಪ್ರಶಾಂತ್ ಕೂಡ ಸೈಲೆಂಟ್ ಆಗಿದ್ದಾರೆ. ಸೋನಿಕಾ ಗೌಡ ಸೀರಿಯಸ್ ಆಗಿದ್ದಾರೆ.
ಆದರೆ, ಇವರಿಗೆ ಆಡೋಕೆ ಚಾನ್ಸ್ ಸಿಕ್ಕಿಲ್ಲ ನೋಡಿ. ಇನ್ನುಳಿದಂತೆ ಬಿಗ್ ಬಾಸ್ ಸೀಸನ್-13 ಅಲ್ಲಿ ಕಿಚ್ಚನ ಸಂಚಿಕೆ ಸೂಪರ್ ಅನಿಸುತ್ತಿವೆ.













