Bigg Boss 13: ತಾಂಡವ್ ರಾಮ್ ಮತ್ತೆ ಬಿಗ್ ಬಾಸ್ ಮನೆಗೆ? ಕಿಚ್ಚನ ಮಾತು ಕೇಳಿ ವೀಕ್ಷಕರಿಗೆ ಹೆಚ್ಚಾಯ್ತು ಕುತೂಹಲ! | | ACTPnews

News18


Last Updated:

ತಾಂಡವ್ ರಾಮ್ ನಿರ್ಗಮನ ಕೆಲ ಅಭಿಮಾನಿಗಳಿಗೆ ಬೇಸರ ತಂದಿತ್ತು. ಆದರೆ ಇದೀಗ ಈಗ ಕಿಚ್ಚ ಸುದೀಪ್ ವೇದಿಕೆ ಮೇಲೆ ನೀಡಿರುವ ಸುಳಿವು ಈ ಚರ್ಚೆಗೆ ಮತ್ತೊಂದು ತಿರುವು ನೀಡಿದೆ.

News18
News18

ಬಿಗ್ ಬಾಸ್ (Bigg Boss) ಮನೆಯಿಂದ ತಾಂಡವ್ ರಾಮ್ (Tandav Ram) ಹೊರಬಂದ ವಿಚಾರ ಕಳೆದ ಕೆಲವು ದಿನಗಳಿಂದ ವೀಕ್ಷಕರ ನಡುವೆ ಭಾರಿ ಚರ್ಚೆಗೆ ಕಾರಣವಾಗಿದೆ. ದೊಡ್ಮನೆಯೊಳಗೆ ತಮ್ಮದೇ ರೀತಿಯ ಆಟ ಹಾಗೂ ನಿಲುವಿನಿಂದ ಗಮನ ಸೆಳೆದಿದ್ದ ತಾಂಡವ್ ರಾಮ್ ನಿರ್ಗಮನ ಕೆಲ ಅಭಿಮಾನಿಗಳಿಗೆ ಬೇಸರ ತಂದಿತ್ತು. ಆದರೆ ಇದೀಗ ಈಗ ಕಿಚ್ಚ ಸುದೀಪ್ ವೇದಿಕೆ ಮೇಲೆ ನೀಡಿರುವ ಸುಳಿವು ಈ ಚರ್ಚೆಗೆ ಮತ್ತೊಂದು ತಿರುವು ನೀಡಿದೆ.

ವಾರಾಂತ್ಯದ ಸಂಚಿಕೆಯಲ್ಲಿ ತಾಂಡವ್ ರಾಮ್ ವೇದಿಕೆಗೆ ಕರೆಸಿದ ಕಿಚ್ಚ ಸುದೀಪ್, ತಾಂಡವ್ ಬಗ್ಗೆ ಮೊದಲು ಮಾತನಾಡಿದರು. ಅಷ್ಟು ಆತ್ಮವಿಶ್ವಾಸದಿಂದ ವೇದಿಕೆ ಮೇಲೆ ಬಂದಿದ್ದೀರಿ, ಆದರೆ ಕಳೆದ ವಾರ ನೀಡಿದ್ದ ಸೂಚನೆಯನ್ನು ಮರೆತು ಎಡವಟ್ಟು ಮಾಡಿಕೊಂಡಿದ್ದೀರಿ ಎಂದು ಸುದೀಪ್ ಪ್ರಶ್ನಿಸಿದ್ದಾರೆ.

ಹಾಗೆಯೇ ತಾಂಡವ್ ರಾಮ್ ಜರ್ನಿಗೆ ಸಂಬಂಧಿಸಿದ ವಿಡಿಯೋ ಪ್ರಸಾರ ಮಾಡಲು ಕಿಚ್ಚ ಸುದೀಪ್ ಮುಂದಾಗಿದ್ದಾರೆ. ಆದರೆ ಆ ವಿಡಿಯೋ ಪ್ರಸಾರವಾಗಲಿಲ್ಲ. ಇದೇ ಸಂದರ್ಭದಲ್ಲಿ ತಾಂಡವ್ ಜರ್ನಿ ಇನ್ನೂ ಪೂರ್ಣಗೊಂಡಿಲ್ಲ ಎಂಬ ಅರ್ಥದಲ್ಲಿ ಸುದೀಪ್ ಮಾತನಾಡಿರುವುದು ವೀಕ್ಷಕರ ಗಮನ ಸೆಳೆದಿದೆ.

ಮತ್ತೆ ದೊಡ್ಮನೆಗೆ ಬರ್ತಾರಾ ತಾಂಡವ್?

ತಾಂಡವ್ ರಾಮ್ ಮತ್ತೆ ಬಿಗ್ ಬಾಸ್ ಮನೆಗೆ ಪ್ರವೇಶಿಸುತ್ತಾರಾ ಎಂಬ ಪ್ರಶ್ನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಯಾವುದೇ ಅಂತಿಮ ಘೋಷಣೆ ಆಗಿರುವುದನ್ನು ಇಲ್ಲಿ ಖಚಿತಪಡಿಸಲಾಗಿಲ್ಲ.

ಇನ್ನೂ ನಿಂತುಹೋಗಿರುವ ಗಡಿಯಾರಕ್ಕೆ ಮತ್ತೆ ಜೀವ ಬರುತ್ತಾ? ಅಥವಾ ಅದನ್ನು ಗೋಡೆಯಿಂದ ಶಾಶ್ವತವಾಗಿ ತೆಗೆದುಹಾಕುವ ಸಮಯ ಬಂತಾ? ಎಂಬ ಅರ್ಥದಲ್ಲಿ ಸುದೀಪ್ ಈ ಹಿಂದೆ ನೀಡಿದ್ದ ಸುಳಿವು ಇದೀಗ ಮತ್ತೆ ಚರ್ಚೆಗೆ ಬಂದಿದೆ. ತಾಂಡವ್ ರಾಮ್ ನಿರ್ಗಮನದ ಬಳಿಕ ಈ ಮಾತುಗಳಿಗೆ ಹೊಸ ಅರ್ಥ ಸಿಗುತ್ತಿದೆಯೇ ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ.

ಒಟ್ಟಾರೆಯಾಗಿ ತಾಂಡವ್ ರಾಮ್ ಜರ್ನಿ ನಿಜಕ್ಕೂ ಮುಕ್ತಾಯವಾಗಿದೆಯೇ ಅಥವಾ ದೊಡ್ಮನೆಯಲ್ಲಿ ಮತ್ತೊಂದು ಅಧ್ಯಾಯ ಆರಂಭವಾಗಲಿದೆಯೇ ಎಂಬುದಕ್ಕೆ ಮುಂದಿನ ಸಂಚಿಕೆಗಳಲ್ಲಿ ಉತ್ತರ ಸಿಗುವ ನಿರೀಕ್ಷೆಯಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports