Last Updated:
ಬಿಗ್ ಬಾಸ್ ಕಿಚ್ಚ ಸುದೀಪ್ ಮತ್ತೊಂದು ಪ್ರೋಮೋ ರಿಲೀಸ್ ಆಗಿದೆ. ಇದರಲ್ಲಿ ಪ್ರಶಂಸೆಯ ಮಹಾಪೂರವೇ ಇದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಬಿಗ್ ಬಾಸ್ ಸೀಸನ್-13 (Bigg Boss Season-13) ರ ಮತ್ತೊಂದು ಪ್ರೋಮೋ (Promo) ಹೊರ ಬಂದಿದೆ. ಮೊನ್ನೆ ಕಿಚ್ಚ ಸುದೀಪ್ (Kichcha Sudeepa) ಅವರ ಒಂದು ಪ್ರೋಮೋ ರಿಲೀಸ್ ಆಗಿತ್ತು. ಇದರ ನಡುವೆ ಅಗ್ನಿಪರೀಕ್ಷೆ ಪ್ರೋಮೋ ಕೂಡ ಹೊರ ಬಂತು. ಆದರೆ, ಈಗ ಕಿಚ್ಚನ ಇನ್ನೂ ಒಂದು ಪ್ರೋಮೋ ರಿಲೀಸ್ (Promo Release) ಆಗಿದೆ. ಇದರಲ್ಲಿ ಸುದೀಪ್ ಕ್ಲೋಸ್‌ಅಪ್ ಶಾಟ್ಸ್ ಇವೆ. ಜನರ ಅಭಿಪ್ರಾಯವು ಇವೆ. ಸುದೀಪ್ ಮೊದಲ ಪ್ರೋಮೋ ನೋಡಿದ ಜನ ಏನ್ ಅಂದ್ರು ಅನ್ನೋದು ಇಲ್ಲಿದೆ. ಇದರ ವಿವರ ಇಲ್ಲಿದೆ ಓದಿ.
ಕಿಚ್ಚನ ಇನ್ನು ಒಂದು ಪ್ರೋಮೋ ಔಟ್
ಈ ಒಂದು ಹೊಸ ಲುಕ್ ಅಲ್ಲಿಯೇ ಸುದೀಪ್ ಸಖತ್ ಆಗಿಯೇ ಮಿಂಚುತ್ತಿದ್ದಾರೆ. ಒಂದು ಮನೆ, ಒಂದು ಅವಕಾಶ, ಸಾವಿರಾರು ಕನಸುಗಳು ಅಂತಲೇ ಹೇಳಿರೋದು ಎಲ್ಲರಿಗೂ ಇಷ್ಟ ಆಗಿದೆ. ಆ ರೀತಿಯ ಈ ಪ್ರೋಮೋ ನೋಡಿದವರು ಮೆಚ್ಚುಗೆಯ ಮಹಾಪೂರ ಹರಿಸಿದ್ದಾರೆ.
ಸುದೀಪ್ ಅವರ ಈ ಬಿಗ್ ಬಾಸ್ ಪ್ರೋಮೋ ನೋಡಿದವರು ಸುಮ್ನೆ ಏನೂ ಇಲ್ಲ. ಕಲರ್ಸ್ ಕನ್ನಡದ ಪೇಜ್ ಅಲ್ಲಿಯೇ ಕಾಂಪ್ಲಿಮೆಂಟ್ ಹಾಕಿದ್ದಾರೆ.
ಇವುಗಳನ್ನೆ ಈಗೀನ ಒಂದು ಪ್ರೋಮೋದಲ್ಲಿ ಬಳಕೆ ಮಾಡಲಾಗಿದೆ. ಅವು ಈ ರೀತಿ ಇವೆ. ಇನ್ಮೇಲೆ ಫುಲ್ ಹಬ್ಬ ಕಿಚ್ಚ ಬಾಸ್, ಅದೇನ್ ಸ್ಟೈಲ್ ಅಂತೀರಾ, ಲಾಸ್ಟ್ ಅಲ್ಲಿ ಬಾಸ್ ಹವಾ ಅಂದ್ರೆ ಹಾವ, ಸುದೀಪ್ ಅವರನ್ನ ಯಾರೂ ರಿಪ್ಲೇಸ್ ಮಾಡೋಕೆ ಆಗೋದೇ ಇಲ್ಲ. ಈ ರೀತಿ ಸುಮಾರು ಕಾಂಪ್ಲಿಮೆಂಟ್ಸ್ ಇವೆ.
ಮೆಚ್ಚಿದವರಿಗೆ ಥ್ಯಾಂಕ್ಸ್
ಬಿಗ್ ಬಾಸ್ ಪ್ರೋಮೋ ಮೆಚ್ಚಿದವರಿಗೆ ಥ್ಯಾಂಕ್ಸ್ ಹೇಳುವ ಕೆಲಸ ಇಲ್ಲಾಗಿದೆ. ಇದನ್ನ ಈಗೀನ ಹೊಸ ಪ್ರೋಮೋದಲ್ಲಿ ಹೇಳಲಾಗಿದೆ. “ಧನ್ಯವಾದ ಕರ್ನಾಟಕ” ಅಂತಲೇ ಪ್ರೋಮೋದಲ್ಲಿ ಬರೆಯಲಾಗಿದೆ.
ಬಿಗ್ ಬಾಸ್ ಸೀಸನ್-13 ರಲ್ಲಿ ಸಾಮಾನ್ಯ ಜನರಿಗೂ ಅವಕಾಶ ಇದೆ. ಅದಕ್ಕೇನೆ ವಿಡಿಯೋ ಕಳಿಸಿಕೊಡಿ ಅಂತಲೂ ಚಾನೆಲ್ ಹೇಳಿತ್ತು. ಆ ಪ್ರಕಾರ ಸಾಮಾನ್ಯ ಜನರ ವಿಡಿಯೋಗಳು ಬಂದಿವೆ.
ಆಗಸ್ಟ್-16 ರಂದು ಅಗ್ನಿಪರೀಕ್ಷೆ
ಹಾಗೆ ಕಳಿಸಿದ ವಿಡಿಯೋಗಳಲ್ಲಿ ಅದೆಷ್ಟು ಸೆಲೆಕ್ಟ್ ಆಗಿವೆ ಅನ್ನೋದು ರಿವೀಲ್ ಆಗಿಲ್ಲ. ಆದರೆ, ಈ ಸಾಮಾನ್ಯ ಜನರಿಗೆ ಪಕ್ಕಾ ಅಗ್ನಿಪರೀಕ್ಷೆ ಪ್ಲಾನ್ ಮಾಡಿದ್ದಾರೆ.
ಆಗಸ್ಟ್-16 ರಂದು ಅಗ್ನಿಪರೀಕ್ಷೆ ಇರುತ್ತೆ. ರಾತ್ರಿ-9 ಗಂಟೆಗ ಈ ಅಗ್ನಿಪರೀಕ್ಷೆ ಪ್ರಸಾರ ಆಗುತ್ತಿದೆ. ಇದರ ಪ್ರೋಮೋ ಕೂಡ ರಿಲೀಸ್ ಆಗಿದೆ.
ನಿಮ್ಮ ಕನಸುಗಳ ವಿಡಿಯೋ ನಮ್ಮನ್ನ ತಲುಪಿವೆ. ಈ ಕನಸುಗಳಿಗೆ ವೇದಿಕೆ ಸಜ್ಜಾಗುತ್ತಿದೆ. ಈ ಅಂತಿಮ ಪರೀಕ್ಷೆಯನ್ನ ಎದುರಿಸಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವವರು ಯಾರು ಅನ್ನುವ ಕುತೂಹಲವನ್ನು ಈ ಪ್ರೋಮೋ ಹುಟ್ಟುಹಾಕಿದೆ. ಆದರೆ, ಈ ಅಗ್ನಿಪರೀಕ್ಷೆ ಹೇಗೆ ಇರುತ್ತದೆ ಅನ್ನುವ ಪ್ರಶ್ನೆಗಳು ಇವೆ ಅಂತಲೂ ಹೇಳಬಹುದು.
Bangalore [Bangalore],Bangalore,Karnataka














