Last Updated:
ಕರ್ನಾಟಕ ಸರ್ಕಾರದ ELEVATE 2026 ಯೋಜನೆ ಅಡಿಯಲ್ಲಿ ಆಯ್ಕೆಯಾದ ಸ್ಟಾರ್ಟಪ್ಗಳಿಗೆ 50 ಲಕ್ಷ ಗ್ರಾಂಟ್, ನಾಲ್ಕು ಟ್ರ್ಯಾಕ್ಗಳು, ಅರ್ಜಿ ಜೂನ್ 21 2026ರವರೆಗೆ ಆನ್ಲೈನ್ನಲ್ಲಿ ಸಲ್ಲಿಕೆ
ಬೆಂಗಳೂರು: ನೀವೇನಾದರೂ ವಿಭಿನ್ನವಾದ ಹೊಸ ಬ್ಯುಸಿನೆಸ್ ಅಥವಾ ಸ್ಟಾರ್ಟಪ್ (Startup) ಶುರು ಮಾಡುವ ಕನಸು ಕಾಣುತ್ತಿದ್ದೀರಾ? ನಿಮ್ಮ ಬಳಿ ಅದ್ಭುತವಾದ ಐಡಿಯಾ (Idea) ಇದ್ದು, ಬಂಡವಾಳದ ಕೊರತೆಯಿಂದ ಪರದಾಡುತ್ತಿದ್ದೀರಾ? ಹಾಗಾದರೆ ನಿಮಗೆ ರಾಜ್ಯ ಸರ್ಕಾರದಿಂದ (State Government) ಭರ್ಜರಿ ಗುಡ್ ನ್ಯೂಸ್ (Good News) ಇಲ್ಲಿದೆ!
ಯುವ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಕರ್ನಾಟಕ ಸರ್ಕಾರದ ಇಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ ಇಲಾಖೆಯು ‘ಎಲಿವೇಟ್ 2026’ (ELEVATE 2026) ಎಂಬ ಬೃಹತ್ ಕಾರ್ಯಕ್ರಮವನ್ನು ಘೋಷಿಸಿದೆ. ಈ ಯೋಜನೆಯಡಿ ಆಯ್ಕೆಯಾಗುವ ನವೀನ ಸ್ಟಾರ್ಟಪ್ಗಳಿಗೆ ಬರೋಬ್ಬರಿ ₹50 ಲಕ್ಷಗಳವರೆಗೆ ಉಚಿತ ಗ್ರಾಂಟ್-ಇನ್-ಎಯ್ಡ್ (Grant-in-Aid) ಸಿಗಲಿದೆ! ಹಾಗಾದರೆ ಈ ಬಂಪರ್ ಆಫರ್ ಪಡೆಯಲು ಷರತ್ತುಗಳೇನು? ಅರ್ಜಿ ಸಲ್ಲಿಸುವುದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ.
- ELEVATE General: ಯಾವುದೇ ವಲಯದ ನವೀನ ಐಡಿಯಾಗಳನ್ನು ಹೊಂದಿರುವ ಎಲ್ಲಾ ಸಾಮಾನ್ಯ ಸ್ಟಾರ್ಟಪ್ಗಳಿಗೆ ಇದು ಮುಕ್ತವಾಗಿದೆ.
- UNNATI (ಉನ್ನತಿ): SC/ST ಸಮುದಾಯದ ಉದ್ಯಮಿಗಳು ಮುನ್ನಡೆಸುತ್ತಿರುವ ಸ್ಟಾರ್ಟಪ್ಗಳಿಗೆ ಮೀಸಲಾದ ವಿಶೇಷ ವಿಭಾಗ.
- SHAKTI (ಶಕ್ತಿ): ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಕೇವಲ ಮಹಿಳೆಯರ ನೇತೃತ್ವದ ಸ್ಟಾರ್ಟಪ್ಗಳಿಗೆ ಇರುವ ಅವಕಾಶ.
- ASPIRE (ಅಸ್ಪೈರ್): ಸಿಲಿಕಾನ್ ಸಿಟಿ ಮಾತ್ರವಲ್ಲದೆ, ಬೆಂಗಳೂರಿನ ಹೊರಗಿನ ಜಿಲ್ಲೆಗಳ (Beyond Bengaluru) ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳ ಸ್ಟಾರ್ಟಪ್ಗಳನ್ನು ಬೆಳೆಸಲು ಈ ವಿಭಾಗವನ್ನು ಮೀಸಲಿಡಲಾಗಿದೆ!
ನೀವು ಈ ಯೋಜನೆಯ ಲಾಭ ಪಡೆಯಬೇಕಾದರೆ ಈ ಕೆಳಗಿನ ಷರತ್ತುಗಳನ್ನು ಪೂರೈಸುವುದು ಕಡ್ಡಾಯ:
- ನಿಮ್ಮ ಕಂಪನಿಯು ಭಾರತದಲ್ಲಿ ಅಧಿಕೃತವಾಗಿ ನೋಂದಣಿಯಾಗಿರಬೇಕು (Pvt Ltd, LLP, Partnership ಇತ್ಯಾದಿ).
- ನಿಮ್ಮ ಸ್ಟಾರ್ಟಪ್ ಆರಂಭವಾಗಿ 10 ವರ್ಷಗಳ ಒಳಗಿರಬೇಕು.
- ನಿಮ್ಮ ಕಂಪನಿಯ ವಾರ್ಷಿಕ ವಹಿವಾಟು (Turnover) ₹100 ಕೋಟಿಗಿಂತ ಕಡಿಮೆ ಇರಬೇಕು.
- ಕಳೆದ 3 ವರ್ಷಗಳಲ್ಲಿ ನೀವು ಸರ್ಕಾರದ ‘ಎಲಿವೇಟ್’ ಗ್ರಾಂಟ್ ಪಡೆದಿರಬಾರದು. ನಿಮ್ಮ ತಂಡದಲ್ಲಿ ಕನಿಷ್ಠ ಇಬ್ಬರು ಸದಸ್ಯರು ಇರಲೇಬೇಕು.
ಸರ್ಕಾರದಿಂದ ಕೇವಲ ಆರ್ಥಿಕ ನೆರವು ಮಾತ್ರವಲ್ಲದೆ, ನಿಮ್ಮ ಬ್ಯುಸಿನೆಸ್ ಅನ್ನು ದೊಡ್ಡ ಮಟ್ಟಕ್ಕೆ ಬೆಳೆಸಲು ಉಚಿತ ಮೆಂಟರ್ಶಿಪ್, ತಜ್ಞರ ಮಾರ್ಗದರ್ಶನ, ಇನ್ವೆಸ್ಟರ್ಗಳ ಜೊತೆ ನೆಟ್ವರ್ಕಿಂಗ್, ಇನ್ಕ್ಯುಬೇಶನ್ ಸಪೋರ್ಟ್ ಹಾಗೂ ಸರ್ಕಾರಿ ಮಟ್ಟದಲ್ಲಿ ಮಾರುಕಟ್ಟೆ ಅವಕಾಶಗಳು ಕೂಡ ಲಭ್ಯವಾಗಲಿವೆ!
ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದ್ದು, ನಿಮ್ಮ ಪಿಚ್ ಡೆಕ್ (Pitch Deck) ಮತ್ತು ಅಗತ್ಯ ದಾಖಲೆಗಳೊಂದಿಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಅರ್ಜಿ ಸಲ್ಲಿಕೆ ಆರಂಭ: 21 ಮೇ 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21 ಜೂನ್ 2026 (ಸಂಜೆ 5:00 ಗಂಟೆಯೊಳಗೆ)
ಸಂಪರ್ಕದ ವಿವರ
Bangalore [Bangalore],Bangalore,Karnataka













