Bhavantara Movie: ಭಾವಾಂತರ ಇದು ಯಾವ ರೀತಿ ಸಿನಿಮಾ ಗೊತ್ತಾ; ಟೀಸರ್ ಪಕ್ಕಾ ಶಾಕ್ ಕೊಡುತ್ತದೆ! | | ACTPnews

ಭಾವಾಂತರ ಇದು ಯಾವ ರೀತಿ ಸಿನಿಮಾ ಗೊತ್ತಾ; ಟೀಸರ್ ಪಕ್ಕಾ ಶಾಕ್ ಕೊಡುತ್ತದೆ!


Last Updated:

ಕನ್ನಡದಲ್ಲಿ ಭಾವಾಂತರ ಅನ್ನುವ ಸಿನಿಮಾ ರೆಡಿ ಆಗಿದೆ. ಈ ಚಿತ್ರದ ಟೀಸರೇ ನಿಮಗೆ ವಿಭಿನ್ನ ಅನುಭವ ಕೊಡುತ್ತದೆ. ಇದರಲ್ಲಿರೋ ವಿಷಯ ಕಾಲ್ಪನಿಕ ಅಲ್ವೇ ಅಲ್ಲ. ಇದು ನೈಜ ಘಟನೆಯನ್ನ ಆಧರಿಸಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.

ಭಾವಾಂತರ ಇದು ಯಾವ ರೀತಿ ಸಿನಿಮಾ ಗೊತ್ತಾ; ಟೀಸರ್ ಪಕ್ಕಾ ಶಾಕ್ ಕೊಡುತ್ತದೆ!
ಭಾವಾಂತರ ಇದು ಯಾವ ರೀತಿ ಸಿನಿಮಾ ಗೊತ್ತಾ; ಟೀಸರ್ ಪಕ್ಕಾ ಶಾಕ್ ಕೊಡುತ್ತದೆ!

ನಾನು ಮಾಧವ..ಇವಳು ರಾಧಾ.. ನನಗೆ ರಾಧಾ ಅಂದ್ರೆ ತುಂಬಾ ಇಷ್ಟ. ಆದರೆ, ನಂದು ಪ್ರೀತಿ ಅಲ್ಲ. ನಾನು ರಾಧನ ಜೊತೆ ಇರೋದು ಅವಳ ತರಾನೆ ಆಗೋಣ ಅಂತ. ಈ ಲೈನ್‌ಗಳೇ ಸಾಕು. ಇಡೀ ಚಿತ್ರದ (Movie) ಚಿತ್ರಣ ಕಟ್ಟಿಕೊಡುತ್ತವೆ. ಮ್ಯೂಸಿಕ್ ಡೈರೆಕ್ಟರ್ ಕಾರ್ತಿಕ್ ಶರ್ಮಾ (Karthik Sharma) ಈ ಚಿತ್ರದಲ್ಲಿ ಮಾಧವನ ಪಾತ್ರ ಮಾಡಿದ್ದಾರೆ. ತನ್ವಿ ರಾವ್ (Tanvi Rao) ಈ ಸಿನಿಮಾದಲ್ಲಿ ಮಾಧವನ ರಾಧಾ ಆಗಿದ್ದಾರೆ. ಇವರ ಈ ಚಿತ್ರದಲ್ಲಿರೋ ಕತೆ ಕಾಲ್ಪನಿಕ ಕತೆ ಅಲ್ಲ. ಇದು ನೈಜ ಘಟನೆ ಆಧರಿಸಿದ ಕತೇನೆ (True Incident Story) ಆಗಿದೆ. ಈ ಸಿನಿಮಾದ ಇನ್ನಷ್ಟು ವಿವರ ಇಲ್ಲಿದೆ ಓದಿ.

ಭಾವಾಂತರ ಸಿನಿಮಾ

ಕನ್ನಡದ ಈ ಚಿತ್ರದಲ್ಲಿ ಗಂಡು ಹೆಣ್ಣಾಗುವ ಕತೆ ಇದೆ. ಗಂಡಿನ ದೇಹದ ಒಳಗೆ ಹಣ್ಣಿನ ಮನಸ್ಸು ಇರೋ ಸ್ಟೋರಿ ಇದೆ. ಇದು ಈಗಾಗಲೇ ಹೇಳಿದಂತೆ ಕಾಲ್ಪನಿಕ ಕತೆ ಅಲ್ವೇ ಇಲ್ಲ.

Tanvi Rao Karthik Sharma Bhavantara Movie Teaser Release

ಈ ರೀತಿ ಅದೆಷ್ಟೋ ಜನ

ಇಲ್ಲಿರೋದು ನೈಜ ಘಟನೆನೇ ಆಗಿದೆ. ಚಿತ್ರದ ಮ್ಯೂಸಿಕ್ ಡೈರೆಕ್ಟರ್ ಕಾರ್ತಿಕ್ ಶರ್ಮಾ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಕತೆ ಮತ್ತು ಚಿತ್ರಕತೆಯನ್ನು ಬರೆದುಕೊಂಡಿದ್ದಾರೆ. ಇವರೇ ಹೀರೋ’ಯಿ’ನ್ ಕೂಡ ಆಗಿದ್ದಾರೆ.

ಶೂಟಿಂಗ್ ಪೂರ್ಣ

ಭಾವಾಂತರ ಸಿನಿಮಾದ ಶೂಟಿಂಗ್ ಪೂರ್ಣ ಆಗಿದೆ. ಶೂಟಿಂಗ್ ನಂತರದ ಕೆಲಸವು ನಡೀತಿದೆ. ಇದರ ಮಧ್ಯೆ ಸಿನಿಮಾದ ಒಂದು ಟೀಸರ್ ಬಿಟ್ಟಿದ್ದಾರೆ.

ಆದರೆ, ಮಾಧವ ಹೇಳುವಂತೆ ಇಲ್ಲಿ ರಾಧಾ ಮೇಲೆ ಮಾಧವನಿಗೆ ಪ್ರೀತಿ-ಗೀತಿ ಏನೂ ಇಲ್ಲ. ರಾಧಾಳ ರೀತಿನೇ ಆಗ್ಬೇಕು ಅಂತ ಮಾಧವ ಯೋಚನೆ ಮಾಡ್ತಾನೇ ಇರ್ತಾರೆ.

ಈ ರೀತಿ ಅದೆಷ್ಟೋ ಜನ

ಗಂಡಾಗಿ ಹುಟ್ಟಿ ಹೆಣ್ಣಿನ ಭಾವನೆಗಳನ್ನ ಇಟ್ಟುಕೊಡಿರೋ ಅದೆಷ್ಟೋ ಜನರಿದ್ದಾರೆ. ಇವರ ಹಾರ್ಮೋನ್‌ಗಳಲ್ಲಿ ಏನೋ ಒಂದು ವ್ಯತ್ಯಾಸ ಇರುತ್ತದೆ.

Tanvi Rao Karthik Sharma Bhavantara Movie Teaser Release

ಆದಷ್ಟು ಬೇಗ ರಿಲೀಸ್

ಇದರಿಂದ ಈ ರೀತಿಯ ಗಂಡು ಮಕ್ಕಳು ಇರ್ತಾರೆ ಅನ್ನುವ ವಿಷಯವು ತಿಳಿಯುತ್ತದೆ. ಹಾಗೆ ಡೈರೆಕ್ಟರ್ ಕಾರ್ತಿಕ್ ಶರ್ಮಾ ಇಲ್ಲಿ ಇಂತಹದ್ದೇ ಒಂದು ಕತೆ ಹೇಳುತ್ತಿದ್ದಾರೆ. ಇದಕ್ಕೆ ಭಾವಾಂತರ ಅಂತ ಸುಂದರವಾದ ಹೆಸರು ಇಟ್ಟಿದ್ದಾರೆ. ಇದರ ಟೀಸರ್ ಹೆಚ್ಚು ಗಮನ ಸೆಳೆಯುತ್ತಿದೆ.

ಹೊಂಬಾಳೆ ಸಂಸ್ಥೆ

ಈ ಚಿತ್ರದ ಆಡಿಯೋವನ್ನ ಹೊಂಬಾಳೆ ಮ್ಯೂಸಿಕ್ ಖರೀದಿಸಿದೆ. ಈ ವಿಷಯವನ್ನ ಚಿತ್ರ ತಂಡವೇ ಅಧಿಕೃತವಾಗಿ ಹೇಳಿಕೊಂಡಿದೆ. ಇದರ ಜೊತೆಗೆ ಈ ಸಿನಿಮಾ ವಿಶೇಷವಾಗಿಯೆ ಇದೆ.

ಈ ಒಂದು ಭರವಸೆಯನ್ನ ಚಿತ್ರದ ಟೀಸರ್ ಮೂಡಿಸುತ್ತಿದೆ. ತನ್ವಿ ರಾವ್ ಅವರ ಅಭಿನಯ ಇಲ್ಲಿ ಪ್ಲಸ್ ಅನಿಸುತ್ತದೆ. ಕಾರ್ತಿಕ್ ಶರ್ಮಾ ನಟನೆನೂ ಹೇಳಿಕೊಳ್ಳುವಂತೆ ಇದೆ.

ಆದಷ್ಟು ಬೇಗ ರಿಲೀಸ್

ಭಾವಾಂತರ ಚಿತ್ರ ಆದಷ್ಟು ಬೇಗ ರಿಲೀಸ್ ಆಗುತ್ತದೆ. ಆದರೆ, ಯಾವಾಗ ಅನ್ನುವ ಡೇಟ್ ಮಾತ್ರ ಇನ್ನಷ್ಟೆ ರಿವೀಲ್ ಆಗಬೇಕಿದೆ. ಈ ಚಿತ್ರದಲ್ಲಿ ತನ್ವಿ ರಾವ್ ಹಾಗೂ ಕಾರ್ತಿಕ್ ಶರ್ಮಾ ಅಲ್ಲದೆ ಇನ್ನೂ ಅನೇಕರು ನಟಿಸಿದ್ದಾರೆ.

ಈ ಚಿತ್ರದಲ್ಲಿ ವೇದ ರಾವ್, ಭಾನು,ಪ್ರಣವ್ ಶ್ರೀಧರ್, ಶ್ರೀವೈಷ್ಣವ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಸಾಗರ್ ಅತ್ದ್ಕರ್ ಕ್ಯಾಮರಾವರ್ಕ್ ಮಾಡಿದ್ದಾರೆ. ಈ ಚಿತ್ರದ ಪೋಸ್ಟರ್ ಹಾಗೂ ಟೀಸರ್ ಭರವಸೆ ಮೂಡಿಸುತ್ತಿವೆ. ಒಂದು ರೀತಿ ಅವಾರ್ಡ್ ಪಡೆಯೋ ಸಿನಿಮಾ ತರವೇ ಇದು ಕಾಣಿಸುತ್ತಿದೆ ಅಂತಲೂ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed