Bhagyavantharu Serial: ಅಂದು ಅಣ್ಣಾವ್ರ ‘ಭಾಗ್ಯವಂತರು’ ಸಿನಿಮಾ, ಇಂದು ಸೀರಿಯಲ್! ಎಲ್ಲಿ? ಯಾವಾಗ ಗೊತ್ತಾ? | | ACTPnews

bhagyavantharu kannada serial sun udaya tv tanvi rao suchendra prasad updates


ಭಾಗ್ಯವಂತರು ಸೀರಿಯಲ್

ಭಾಗ್ಯವಂತರು ಸೀರಿಯಲ್ ಅಪ್ಪ ಮತ್ತು ಮಗಳ ಕತೆಯನ್ನ ಹೊಂದಿದೆ. ಮಗಳು ಇಲ್ಲಿ ಫಸ್ಟ್ ರಾಂಕ್ ನೋಡಿ. ಅಪ್ಪ ಅಂತೂ ಫಸ್ಟ್ ಕ್ಲಾಸ್ ಬಿಡಿ.

ಜುಲೈ-6 ರಿಂದ ಪ್ರಸಾರ

(ಚಿತ್ರ ಕೃಪೆ: ಸನ್ ಉದಯ ಇನ್‌ಸ್ಟಾಗ್ರಾಮ್)

ಇವರ ಬಾಂಧವ್ಯದ ಕತೆಯಲ್ಲಿ ಜನನಿ ಪಾತ್ರವನ್ನ ನಟಿ ತನ್ವಿ ರಾವ್ ಮಾಡಿದ್ದಾರೆ. ಅಪ್ಪ ಶ್ಯಾಮ್‌ ಸುಂದರ್ ಪಾತ್ರದಲ್ಲಿ ಸುಚೇಂದ್ರ ಪ್ರಸಾದ್ ಅಭಿನಯಿಸಿದ್ದಾರೆ.

ಸಿನಿಮಾಕ್ಕೂ ಇದಕ್ಕೂ ಲಿಂಕ್ ಇಲ್ಲ

ಆದರೆ, 50 ವರ್ಷದ ಹಿಂದೆ ಬಂದ ರಾಜಕುಮಾರ್ ಅವರ ಭಾಗ್ಯವಂತರು ಚಿತ್ರಕ್ಕೂ ಈ ಸೀರಿಯಲ್‌ಗೂ ಏನು ಲಿಂಕ್ ಇಲ್ವೇ ಇಲ್ಲ. ಇಲ್ಲಿ ಹೆಸರು ಮಾತ್ರ ಇದೆ . ಕತೆ ವಿಚಾರದಲ್ಲಿ ಇಲ್ಲಿ ಬೇರೆ ಸ್ಟೋರಿನೇ ಇದೆ.

ಸೀರಿಯಲ್ ಕಥಾಹಂದರ ಏನು

ಮಗಳು ಜನನಿ ಅಪ್ಪನ ಕನಸನ್ನ ಈಡೇರಿಸೊಕೆ ಶಿಕ್ಷಣ ಮುಂದುವರೆಸುತ್ತಾಳೆ. ಭವಿಷ್ಯದಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ ಆಗ್ಬೇಕು ಅನ್ನೋದು ಈಕೆಯ ಕನಸಾಗಿರುತ್ತದೆ.

ಆದರೆ, ಅಪ್ಪ ಈ ಮಗಳ ಉತ್ತಮ ಭವಿಷ್ಯಕ್ಕಾಗಿಯೇ ಮಂಡ್ಯದ ಶ್ರೀಮಂತ ಕುಟುಂಬದ ಶಕ್ತಿಗೆ ಮದುವೆ ಮಾಡಿಕೊಡ್ತಾರೆ. ಈಗಾಗಲೇ ಈ ಮನೆಯಲ್ಲಿ ಮೂವರು ಡಬಲ್ ಡಿಗ್ರಿ ಮಾಡಿರೋ ಸೊಸೆಯಂದಿರು ಇರ್ತಾರೆ. ಈ ಮನೆಗೆ ಜನನಿ ಸೊಸೆಯಾಗಿಯೇ ಹೋಗ್ತಾಳೆ.

ಜನನಿಗೆ ಇರೋ ಸವಾಲೇನು

ಆದರೆ, ಜನನಿ ಇಲ್ಲಿ ಸೊಸೆ ಆಗಿ ಕಾಲಿಟ್ಟ ಮೇಲೆ ಸವಾಲುಗಳೂ ಇರುತ್ತವೆ. ಗಂಡನ ಮನೆ ಹಾಗೂ ತಾನು ಮಾಡುವ ಕೆಲಸವನ್ನು ಈಕೆ ಸರಿಯಾಗಿಯೇ ಮುನ್ನಡೆಸಿಕೊಂಡು ಹೋಗುವ ಸವಾಲೇ ಅದಾಗಿರುತ್ತದೆ.

bhagyavantharu kannada serial sun udaya tv tanvi rao suchendra prasad updates

ಜುಲೈ-6 ರಿಂದ ಪ್ರಸಾರ

(ಚಿತ್ರ ಕೃಪೆ: ಸನ್ ಉದಯ ಇನ್‌ಸ್ಟಾಗ್ರಾಮ್)

ಆದರೆ, ಈ ಸವಾಲಿನಲ್ಲಿ ಜನನಿ ಹೇಗೆ ಯಶಸ್ವಿಯಾಗುತ್ತಾಳೆ ಅನ್ನೋದೇ ಸೀರಿಯಲ್‌ನ ಕಥಾ ಹಂದರವಾಗಿದೆ. ಈ ಸೀರಿಯಲ್‌ನ ಪ್ರೋಮೋ ಈಗಾಗಲೆ ರಿಲೀಸ್ ಆಗಿದೆ. ಪ್ರಸಾರದ ದಿನ ಮತ್ತು ಸಮಯ ಎರಡೂ ಗೊತ್ತಾಗಿದೆ.

ಜುಲೈ-6 ರಿಂದ ಪ್ರಸಾರ

ಭಾಗ್ಯವಂತರು ಸೀರಿಯಲ್ ಜುಲೈ-6 ರಿಂದ ಶುರು ಆಗುತ್ತಿದೆ. ಸನ್ ಉದಯ ಅಲ್ಲಿ ರಾತ್ರಿ 7.30 ಕ್ಕೆ ಸೋಮವಾರದಿಂದ ಪ್ರಸಾರ ಆಗುತ್ತಿದೆ.

ಈ ಸೀರಿಯಲ್ ಅಲ್ಲಿ ತನ್ವಿ ರಾವ್, ಸುಚೇಂದ್ರ ಪ್ರಸಾದ್, ಆರ್.ಕೆ.ಚಂದನ್, ಶೋಭರಾಜ್ ಪ್ರಮುಖ ಪಾತ್ರದಲ್ಲಿಯೇ ನಟಿಸುತ್ತಿದ್ದಾರೆ. ಶ್ರೀವಾಯು, ಮಧುಸಾಗರ, ಸುರೇಶ್ ರೈ, ಶಾಲನಿ, ಸಮೀಕ್ಷಾ, ಧನ್ಯಾ, ವರ್ಷಾ, ಲಕ್ಷ್ಮೀ ಹೆಗ್ಡೆ, ರಿಷಾ, ವಿಠಲ್ ಕಾಮತ್, ಪ್ರಕೃತಿ ಪಾಟೀಲ್ ಮತ್ತು ಜಯಲಕ್ಷ್ಮೀ ಪಟೇಲ್ ಇಲ್ಲಿ ಅಭಿನಯಿಸುತ್ತಿದ್ದಾರೆ.

ಕತೆ ಚಿತ್ರಕತೆ ಯಾರದ್ದು

ಈ ಸೀರಿಯಲ್‌ಗೆ ಶುಭ್ರ ಪುತ್ರಕಳ ಕತೆ ಮತ್ತು ಚಿತ್ರಕತೆ ಮಾಡಿದ್ದಾರೆ. ಸುಮಾ ಶಿಂಗ್ನಳ್ಳಿ ಅವರು ಡೈಲಾಗ್ ಬರೆದಿದ್ದಾರೆ. ಗೌತಮ್ ಕೃಷ್ಣ ಈ ಸೀರಿಯಲ್‌ಗೆ ಕ್ಯಾಮರಾವರ್ಕ್ ಮಾಡುತ್ತಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed