Last Updated:
ಬೆಂಗಳೂರಿನ ಔಟರ್ ರಿಂಗ್ ರೋಡ್ ರೂಪುರೇಷೆಗಳು ಬದಲಾವಣೆ ಆಗಲಿದೆ. ಸಿಲ್ಕ್ ಬೋರ್ಡ್ನಿಂದ ಕೆಆರ್ ಪುರಂ ವರೆಗೂ ಸುಮಾರು 378 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ಆರಂಭವಾಗಿದೆ. ಇದರಿಂದ ಪ್ರತಿದಿನ ಸುಮಾರು 8 ಲಕ್ಷ ಮಂದಿ ವಾಹನ ಸವಾರರಿಗೆ ಟ್ರಾಫಿಕ್ ಸಂಕಷ್ಟ ಶುರುವಾಗಲಿದೆ.
ಬೆಂಗಳೂರು: ರಾಜಧಾನಿ ಬೆಂಗಳೂರು (Begaluru Traffic) ಈಗಾಗಲೇ ಟ್ರಾಫಿಕ್ ಸಮಸ್ಯೆಯಿಂದ ಬೆಂದು ಹೋಗಿದೆ. ಸಣ್ಣ ಪ್ರಮಾಣದಲ್ಲಿ ಮಳೆಯಾದರೇ ಸಾಕು ನಗರದ ಪ್ರಮುಖ ರಸ್ತೆಗಳಲ್ಲಿ ವಾಹನಗಳು (Outer Ring Road) ನಿಂತಲ್ಲೇ ನಿಂತು ಎದುರಿಸು ಬಿಡುತ್ತವೆ. ಇಂತಹ ಸಂದರ್ಭದಲ್ಲಿ ಬೆಂಗಳೂರಿನ ಅತ್ಯಂತ ಬ್ಯುಸಿ ಔಟರ್ ರಿಂಗ್ ರೋಡ್ನಲ್ಲಿ ಮಹತ್ವದ ಅಭಿವೃದ್ಧಿ ಕಾಮಗಾರಿ ಆರಂಭವಾಗಲಿದ್ದು (Development Work), ಇದರ ಪರಿಣಾಮ ಈ ಮಾರ್ಗದಲ್ಲಿ ಟ್ರಾಫಿಕ್ ಕಿರಿಕಿರಿ ಡಬಲ್ ಆಗುವ ಸಾಧ್ಯತೆ ಇದೆ. ಹೌದು, ಬೆಂಗಳೂರಿನ ಔಟರ್ ರಿಂಗ್ ರೋಡ್‌ನ ಪ್ರಮುಖ ಭಾಗವಾಗಿರುವ ಸಿಲ್ಕ್ ಬೋರ್ಡ್ ಹಾಗೂ ಕೆಆರ್ ಪುರ ನಡುವಿನ (Silk Board and KR Puram) 17.1 ಕಿಮೀ ಭಾಗದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾರ್ಯ ಆರಂಭವಾಗಲಿದೆ.
ಪ್ರಮುಖವಾಗಿ ಸಿಲ್ಕ್ ಬೋರ್ಡ್, ಅಗರ, ಐಬ್ಲೂರ್, ಮಾರತಹಳ್ಳಿ ಹಾಗೂ ಕೆಆರ್ ಪುರ ಮಾರ್ಗದಲ್ಲಿ ಟ್ರಾಫಿಕ್ ಸಮಸ್ಯೆ ಎದುರಾಗಲಿದೆ. ಸುಮಾರು 378 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಆಗಲಿದೆ. ಈ ಮಾರ್ಗದಲ್ಲಿ ಸುಮಾರು 450 ಐಟಿ ಕಂಪನಿಗಳು, 23 ಟೆಕ್ ಪಾರ್ಕ್ ಗಳು ಇದ್ದು, ಸುಮಾರು 8 ಲಕ್ಷ ಉದ್ಯೋಗಿಗಳು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಜಿಬಿಎ ಅಧಿಕಾರಿಗಳು ಈ ಯೋಜನೆಗೆ ಅಂದಾಜು ಒಂದು ವರ್ಷ ಸಮಯ ಬೇಕಾಗಿದೆ ಎಂದಿದ್ದು, ಆದರೆ 09 ತಿಂಗಳಿನಲ್ಲಿ ಕಾಮಗಾರಿ ಮುಗಿಸುವ ಪ್ರಯತ್ನವನ್ನು ಮಾಡ್ತಿದ್ದಾರೆ.
ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದ್ದು, ಇದರಿಂದ ಸಿಲ್ಕ್ ಬೋರ್ಡ್ ಜಂಕ್ಷನ್, ಎಚ್ಎಸ್ಆರ್ ಲೇಔಟ್ ಜಂಕ್ಷನ್, ಅಗರ ಜಂಕ್ಷನ್, ಐಬ್ಲೂರ್ ಜಂಕ್ಷನ್, ಮಾರತಹಳ್ಳಿ ಜಂಕ್ಷನ್, ಕೆಆರ್ ಪುರ ಭಾಗದಲ್ಲಿ ಎಫೆಕ್ಟ್ ಆಗಲಿದೆ. ಈಗಾಗಲೇ ಈ ಮಾರ್ಗದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಿದ್ದು, ಪೀಕ್ ಅವರ್ ಗಳಲ್ಲಿ ಸಂಚಾರ ಸಮಯ ಡಬಲ್ ಆಗುವ ನಿರೀಕ್ಷೆ ಇದೆ. ಅದರಲ್ಲೂ ತಜ್ಞರು ಅನ್ವಯ, ಸಿಲ್ಕ್ ಬೋರ್ಡ್ ಹಾಗು ಮಾರತಹಳ್ಳಿ ಭಾಗದಲ್ಲಿ ಅತ್ಯಧಿಕ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆ ಇದೆ.
ಈ ಮಾರ್ಗದಲ್ಲಿ ಮೆಟ್ರೋ ಕಾಮಗಾರಿಯೂ ನಡೆಯುತ್ತಿದೆ. ಆದ್ದರಿಂದ ಸರ್ಜಾಪುರ ರಸ್ತೆ, ಇಂಟರ್ ಮೀಡಿಯಟ್ ರಿಂಗ್ ರೋಡ್, ಹೊಸೂರು ರಸ್ತೆ ಕಾರಿಡಾರ್, ಮೆಟ್ರೋ ಹಾಗೂ ಪೀಡರ್ ಬಸ್ ಸೇರಿದಂತೆ ಒಳನಗರದ ಲಿಂಕ್ ರಸ್ತೆಗಳನ್ನು ಬಳಕೆ ಮಾಡಿಕೊಳ್ಳಲು ತಜ್ಞರು ಸಲಹೆ ನೀಡಿದ್ದಾರೆ. ಅಲ್ಲದೇ ಸಾರ್ವಜನಿಕರ ಸಾರಿಗೆ ಬಳಕೆ ಮಾಡಲು ಹೇಳಿದ್ದಾರೆ.
ಈ ಮಾರ್ಗದಲ್ಲಿ ಕಾಮಗಾರಿ ಆರಂಭವಾದರೆ ಪ್ರಸ್ತುತ ತೆಗೆದುಕೊಳ್ಳುತ್ತಿರುವ 45 ನಿಮಿಷಗಳ ಪ್ರಯಾಣ ಅವಧಿಯೂ 90 ನಿಮಿಷಕ್ಕಿಂತ ಹೆಚ್ಚಾಗಬಹುದು. ಅಲ್ಲದೇ, ಪೀಕ್ ಅವರ್ ಗಳಲ್ಲಿ ಒಂದು ಗಂಟೆ ತೆಗೆದುಕೊಳ್ಳುತ್ತಿರುವ ಸಮಯ ಎರಡು ಗಂಟೆಗೆ ಹೆಚ್ಚಾಗುವ ಸಾಧ್ಯತೆ ಇದೆ. ಇದು ಬೆಳಗ್ಗೆ ಆಫೀಸ್ಗೆ ಹೋಗಿ ಸಂಜೆ ಮನೆಗೆ ವಾಪಸ್ ಆಗುವ ಉದ್ಯೋಗಿಗಳಿಗೆ ಭಾರೀ ಪ್ರಮಾಣದಲ್ಲಿ ಎಫೆಕ್ಟ್ ನೀಡುವ ನಿರೀಕ್ಷೆ ಇದೆ. ಈ ಸಮಸ್ಯೆಗಳನ್ನು ತಪ್ಪಿಸಲು ಸರ್ವೀಸ್ ರಸ್ತೆಗಳನ್ನು ಅಪ್ಗ್ರೇಡ್ ಮಾಡಲಾಗುತ್ತಿದೆ.
Bangalore [Bangalore],Bangalore,Karnataka













