Bengaluru: ಮನೆ ಬಾಡಿಗೆ ಜಾಸ್ತಿ ಮಾಡಲು ಈ ಸುಳ್ಳುಗಳನ್ನು ಹೇಳ್ತಾರಂತೆ ಮಾಲೀಕರು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಬಾಡಿಗೆ ಹೆಚ್ಚು ಮಾಡಲು ಕ್ರೇಜಿ ಸುಳ್ಳು (Image: dishakaaa/ Instagram)


Last Updated:

ಬೆಂಗಳೂರು ಬಾಡಿಗೆ ದರ ಏರಿಕೆಯಿಂದ ಐಟಿ ಉದ್ಯೋಗಿಗಳು ಸೇರಿದಂತೆ ಬಾಡಿಗೆದಾರರು ಸಂಕಷ್ಟ, ಇನ್‌ಸ್ಟಾದಲ್ಲಿ ದಿಶಾ ಹಂಚಿದ ವಿಡಿಯೋ ವೈರಲ್, ಮಾಲೀಕರ ಕ್ರೇಜಿ ಸುಳ್ಳು, ಹೆಚ್ಚುವರಿ 4 ಸಾವಿರ ಡಿಮ್ಯಾಂಡ್.

ಬಾಡಿಗೆ ಹೆಚ್ಚು ಮಾಡಲು ಕ್ರೇಜಿ ಸುಳ್ಳು (Image: dishakaaa/ Instagram)
ಬಾಡಿಗೆ ಹೆಚ್ಚು ಮಾಡಲು ಕ್ರೇಜಿ ಸುಳ್ಳು (Image: dishakaaa/ Instagram)

ಐಟಿ ಹಬ್ ಬೆಂಗಳೂರಿನಲ್ಲಿ (IT Hub Bengaluru) ಕೆಲಸ ಗಳಿಸೋದು ಒಂದು ಸವಾಲಾದರೆ, ಇಲ್ಲಿ ಇರೋದಕ್ಕೆ ಒಂದು ಒಳ್ಳೆಯ ಮನೆ ಹುಡುಕಿಕೊಳ್ಳುವುದು ಹಾಗೂ ಮಾಲೀಕರ ಡಿಮ್ಯಾಂಡ್ ಗಳನ್ನು ತಡೆದುಕೊಳ್ಳುವುದು ಮತ್ತೊಂದು ಸವಾಲು. ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಬಾಡಿಗೆ ದರಗಳು (Rent Price) ಆಕಾಶವನ್ನು ಮುಟ್ಟುತ್ತಿದ್ದು, ಸಾಮಾನ್ಯ ಜನರು ಮಾತ್ರವಲ್ಲ ಐಟಿ ಉದ್ಯೋಗಿಗಳು ಕೂಡ ಬಲಿಯಾಗುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ, ಮನೆಯ ಮಾಲೀಕರೊಬ್ಬರು (Landlord-Tenant Relationship) ಬಾಡಿಗೆ ಹೆಚ್ಚಳ ಮಾಡಲು ಹೇಳಿರುವ ಸುಳ್ಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ದಿಶಾ ಎಂಬ ಯುವತಿ, ತನ್ನ ಇನ್​ಸ್ಟಾದಲ್ಲಿ ವಿಡಿಯೋ ಹಂಚಿಕೊಂಡಿದ್ದು, ರಿಯಾಲಿಟಿಸ್ ಆಫ್ ಲಿವಿಂಗ್ ಇನ್ ಬೆಂಗಳೂರು (Living in Bengaluru) ಎಂದು ಬರೆದುಕೊಂಡು ತಮಗೆ ಎದುರಾದ ಕಹಿ ಅನುಭವ ಕುರಿತು ಬರೆದುಕೊಂಡಿದ್ದಾರೆ.

ಬಾಡಿಗೆ ಹೆಚ್ಚು ಮಾಡಲು ಕ್ರೇಜಿ ಸುಳ್ಳು, ಓಬರ್ ಪ್ಲ್ಯಾನ್ ಇದೆ!

ಯುವತಿ ಹಂಚಿಕೊಂಡಿರುವ ವಿವರಗಳ ಅನ್ವಯ, ಫ್ಲ್ಯಾಟ್ ಓನರ್​ ಏಕಾಏಕಿ ಬಂದು, ‘ನಮ್ಮ ಸಹೋದರ ಬೆಂಗಳೂರಿಗೆ ಶಿಫ್ಟ್ ಆಗ್ತಿದ್ದಾರೆ. ಅವನಿಗೆ ಇರಲು ಮನೆ ಬೇಕು. ಆದ್ದರಿಂದ ನೀವು ಮನೆ ಖಾಲಿ ಮಾಡ್ಬೇಕು’ ಎಂದು ಹೇಳಿದ್ದರಂತೆ. ಆದರೆ ಅಸಲಿಗೆ ವಿಚಾರಕ್ಕೆ ಬಂದರೇ, ಬಾಡಿಗೆ ಹೆಚ್ಚು ಮಾಡಲು ಓನರ್ ಈ ಡ್ರಾಮಾ ಮಾಡಿದ್ದರಂತೆ. ಕೊನೆಗೆ ಅವರನ್ನು ಅದೇ ಮನೆಯಲ್ಲಿ ಉಳಿದುಕೊಳ್ಳಲು ಬರೋಬ್ಬರಿ 4 ಸಾವಿರ ರೂಪಾಯಿ ಡಿಮ್ಯಾಂಡ್ ಮಾಡಿದ್ದರಂತೆ.

ಏಕೆಂದರೆ ಇಡೀ ಬಿಲ್ಡಿಂಗ್ ಮಾಲೀಕರದ್ದೆ ಇತ್ತು. ಅದರಲ್ಲಿದ್ದ ಎಲ್ಲಾ ಫ್ಲ್ಯಾಟ್ ಗಳು ಅವರಿಗೆ ಸೇರಿದ್ದು, ಆದರೆ ನನ್ನನ್ನು ಮಾತ್ರ ಏಕೆ ಖಾಲಿ ಮಾಡ್ಬೇಕು ಅಂತ ಒತ್ತಡ ಹಾಕಿದರು ಅಂತ ಅರ್ಥ ಆಗಿಲ್ಲ. ಬೆಂಗಳೂರು ಲ್ಯಾಂಡ್ ಲಾರ್ಡ್ಸ್ ಕೇವಲ ಹಣಕ್ಕಾಗಿ ಈ ರೀತಿ ವರ್ತಿಸುತ್ತಾರೆ. ಈ ರೀತಿ ಸುಳ್ಳು ಹೇಳುವುದು ನಿಜಕ್ಕೂ ಕ್ರೇಜಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈಗ ಅವರು ತಿಂಗಳಿಗೆ ನಾಲ್ಕು ಸಾವಿರ ರೂಪಾಯಿ ಹೆಚ್ಚುವರಿಯಾಗಿ ಪಾವತಿ ಮಾಡುತ್ತಿದ್ದಾರಂತೆ.

ಸಾಮಾಜಿಕ ಜಾಲತಾಣದಲ್ಲಿ ಕ್ಯೂನಿಂತ ಸಂತ್ರಸ್ತರು!

ವಿಡಿಯೋ ವೈರಲ್ ಆಗುತ್ತಿದ್ದಂತೆ ಬೆಂಗಳೂರು ಬಾಡಿಗೆಗೆ ಇರುತ್ತಿರುವ ಉಳಿದ ನೆಟ್ಟಿಗರು ಕೂಡ ಕಾಮೆಂಟ್ ರೂಪದಲ್ಲಿ ತಮ್ಮ ಕೋಪವನ್ನು ಹೊರಹಾಕುತ್ತಿದ್ದಾರೆ.

  • ‘ಇದು ಬೆಂಗಳೂರಿನಲ್ಲಿ ಸಾಮಾನ್ಯ ಸಂಗತಿ. ನಮ್ಮ ಮನೆ ಮಾಲೀಕರು ಕೂಡ ಮನೆಯನ್ನೇ ಮಾರಾಟ ಮಾಡುತ್ತಿದ್ದೇವೆ ಎಂದು ಸುಳ್ಳು ಹೇಳಿದ್ದರು. ದಿನಕ್ಕೆ ಒಬ್ಬರನ್ನು ಫ್ಲ್ಯಾಟ್ ತೋರಿಸಲು ಕರೆದುಕೊಂಡು ಬರ್ತಿದ್ದರು. ಕೊನೆಗೆ ಬಾಡಿಗೆ ಹೆಚ್ಚಾದ ಬಳಿಕ ಸುಮ್ಮನಾದರು’ ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.

* ‘ನನಗೂ ಇದೇ ರೀತಿ ಆಯ್ತು. ಈಗ ನಾನು ಪ್ರತಿ ತಿಂಗಳು 2 ಸಾವಿರ ರೂಪಾಯಿ ಹೆಚ್ಚು ಕೊಡುತ್ತಿದ್ದೇನೆ’ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

  • ‘ಕೋವಿಡ್ ಬಳಿಕ ಬೆಂಗಳೂರು ಮನೆ ಮಾಲೀಕರು ಏಕಾಏಕಿ ಬಾಡಿಗೆ ದರ ಜಾಸ್ತಿ ಮಾಡ್ತಿದ್ದಾರೆ. ನಾವು ಓಕೆ ಮಾಡಿಲ್ಲ ಎಂದರೇ ತಿಂಗಳ ನೋಟಿಸ್ ಕೊಟ್ಟು ಮನೆ ಖಾಲಿ ಮಾಡಲು ಹೇಳ್ತಾರೆ’ ಎಂದು ನೆಟ್ಟಿಗರೊಬ್ಬರು ಸಂಕಷ್ಟ ತೊಡಿಕೊಂಡಿದ್ದಾರೆ.

ಅಮೆರಿಕದಲ್ಲಿರೋ ನಿಯಮಗಳು ಭಾರತದಲ್ಲಿ ಇಲ್ವಾ?

ಯುವತಿ ಮಾತ್ರ ಅಲ್ಲದೇ, ಡಾನಾ ಮೇರಿ ಎಂಬ ಅಮೆರಿಕದ ಮಹಿಳೆಯೂ ಈ ಬಗ್ಗೆ ಇನ್​ಸ್ಟಾದಲ್ಲಿ ಬರೆದುಕೊಂಡಿದ್ದಾರೆ. ಆಕೆ ಇರುವ ಮನೆಯ ಮಾಲೀಕ ಏಕಾಏಕಿ ಶೇಕಡಾ 33ರಷ್ಟು ಬಾಡಿಗೆ ದರವನ್ನು ಹೆಚ್ಚು ಮಾಡಿದ್ದರಂತೆ. ಈ ಕುರಿತು ಬರೆದುಕೊಂಡಿರುವ ಮಹಿಳೆ, ‘ಇಂತಹ ಘಟನೆಗಳು ಅಮೆರಿಕದಲ್ಲಿ ಕಾನೂನು ಬದ್ಧವಲ್ಲ. ಅಲ್ಲಿ ಗರಿಷ್ಠ ಅಂದರೇ ಶೇಕಡಾ 10ರಷ್ಟು ಏರಿಕೆ ಮಾಡಲು ಅನುಮತಿ ಇದೆ. ಜನರು ಕೂಡ ಈ ಕಾನೂನಿಗೆ ಗೌರವ ನೀಡುತ್ತಾರೆ. ಆದರೆ ಬೆಂಗಳೂರಿನಲ್ಲಿ ಮನಸ್ಸಿಗೆ ಬಂದಂತೆ ದರ ಹೆಚ್ಚಳ ಮಾಡುತ್ತಾರೆ. ಜನರು ಕೂಡ ಇದನ್ನು ಒಂದು ಸಾಮಾನ್ಯ ಸಂಗತಿ ಎಂಬಂತೆ ಅಭ್ಯಾಸ ಮಾಡಿಕೊಂಡಿದ್ದಾರೆ’ ಎಂದು ಹೇಳಿದ್ದಾರೆ. ಈ ಬಾಡಿಗೆ ದರ ಹೆಚ್ಚಳದ ಸಂಕಷ್ಟಗಳು ದಿನದಿಂದ ದಿನಕ್ಕೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports