Last Updated:
ಬೆಂಗಳೂರಿನ ಕೋರಮಂಗಲದಲ್ಲಿರುವ ಗಣೇಶ ದೇವಾಲಯ ‘ಟೆಕ್ಕಿ ಗಣೇಶ’ ಎಂದೇ ವೈರಲ್ ಆಗುತ್ತಿದೆ. ಐಟಿ ಉದ್ಯೋಗಿಗಳು ಉತ್ತಮ ಕೆಲಸ, ಪ್ರಮೋಷನ್‌ಗಾಗಿ ಇಲ್ಲಿಗೆ ಭೇಟಿ ನೀಡುತ್ತಾರೆ.
ಭಾರತದಲ್ಲಿ ಐಟಿ ಕ್ಷೇತ್ರಕ್ಕೆ ಹೆಸರಾಗಿರುವ ನಗರ ಯಾವುದು ಎಂದು ಹೇಳಿದರೆ ಸಾಕು, ಬೆಂಗಳೂರು (Bengaluru) ಅಂತ ಎಲ್ಲರೂ ಹೇಳ್ತಾರೆ. ಸಾಫ್ಟ್‌ವೇರ್ ಉದ್ಯೋಗಗಳಿಗೆ (Software Jobs) ಬೆಂಗಳೂರು ಸಖತ್ ಫೇಮಸ್. ಇಲ್ಲಿ ಲಕ್ಷಾಂತರ ಮಂದಿ ಸಾಫ್ಟ್‌ವೇರ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಇದರ ನಡುವೆಯೇ ಬೆಂಗಳೂರಿನ ಗಣೇಶ ದೇವಾಲಯವೊಂದು (Sri Prasanna Ganapathi Temple) ಟೆಕ್ಕಿಗಳ ಕಾರಣದಿಂದಲೇ ಸಖತ್ ಫೇಮಸ್ ಆಗುತ್ತಿದೆ. ಕೋರಮಂಗಲದಲ್ಲಿರುವ ಈ ದೇವಾಲಯ ಈ ಚರ್ಚೆ ಕೇಂದ್ರ ಬಿಂದುವಾಗಿದೆ. ಕೋರಮಂಗಲದಲ್ಲಿರುವ (Koramangala) ಗಣೇಶ ದೇವಾಲಯಕ್ಕೆ ಮತ್ತೊಂದು ಹೆಸರಿದೆ, ಅದು ಟೆಕ್ಕಿ ಗಣೇಶ ಅಂತ. ಹೌದು, ನೀವು ಕೇಳುತ್ತಿರುವುದು ನಿಜ. ಈ ದೇವಾಲಯದ ಪೂಜೆ ಮಾಡಿಸಿದರೆ ಐಟಿ ರಂಗದಲ್ಲಿ ಉತ್ತಮ ಕೆಲಸಗಳು, ಪ್ರಮೋಷನ್, ಸ್ಯಾಲರಿ ಹೈಕ್ ಸಿಗುತ್ತದೆ ಎಂದು ಹಲವರು ನಂಬುತ್ತಾರೆ. ಈ ಕಾರಣದಿಂದಲೇ ಗಣೇಶನಿಗೆ ಟೆಕ್ಕಿ ಗಣೇಶ (Techie Ganesha) ಎಂಬ ಹೆಸರು ಬಂದಿದೆ. ಈ ಕುರಿತಂತೆ ನ್ಯೂಸ್18 ಇಂಗ್ಲೀಷ್ ವರದಿ ಮಾಡಿದ್ದು, ಈ ಕುರಿತು ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಈ ನಡುವೆ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಇದರಲ್ಲಿ ಹಲವರು ಐಟಿ ಉದ್ಯೋಗಿಗಳು, ಐಟಿ ಕೆಲಸಕ್ಕಾಗಿ ಪ್ರಯತ್ನಿಸುತ್ತಿರುವವರು ಭಾರೀ ಪ್ರಮಾಣದಲ್ಲಿ ಆಗಮಿಸುತ್ತಿದ್ದಾರೆ. ಈಗಾಗಲೇ ಸಾಫ್ಟ್‌ವೇರ್ ಕೆಲಸ ಮಾಡುತ್ತಿರುವವರು ತಮಗೆ ಉತ್ತಮ ಪ್ರಮೋಷನ್ ಸಿಗಲು ಎಂದು ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದು, ಕೆಲಸಕ್ಕಾಗಿ ಪ್ರಯತ್ನ ಮಾಡುತ್ತಿರುವವರು ಉತ್ತಮ ಕೆಲಸ ಸಿಗಲಿ ಎಂದು ಪ್ರಾರ್ಥನೆ ಮಾಡುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ದೇವಾಲಯದ ಕುರಿತಂತೆ ಭಾರೀ ಪ್ರಚಾರ ನಡೆಯುತ್ತಿರುವ ಕಾರಣ ನೂರಾರು ಮಂದಿ ಭಕ್ತರು ಇಲ್ಲಿಗೆ ಬರ್ತಿದ್ದಾರೆ ಎಂದು ಸ್ಥಳೀಯರು ಹೇಳ್ತಿದ್ದಾರೆ. ಬೆಂಗಳೂರು ಮೂಲದ ವ್ಯಕ್ತಿಯೊಬ್ಬರು ಒಂದು ವಿಡಿಯೋ ಮಾಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಈತ ಇನ್ ಸ್ಟಾ ರೀಲ್ಸ್‌ನಲ್ಲಿ ಪ್ರಸನ್ನ ಗಣಪತಿ ದೇವಾಲಯಕ್ಕೆ ಟೆಕ್ಕಿ ಗಣೇಶ್ ಎಂಬ ಹೆಸರು ಇದೆ, ಇಲ್ಲಿಗೆ ಬರುವವರಿಗೆ ಸಾಫ್ಟ್‌ವೇರ್ ಉದ್ಯೋಗದಲ್ಲಿ ಪ್ರಮೋಷನ್ ಸಿಗುವ ಅವಕಾಶ ಎಂದು ಹೇಳುತ್ತಿದ್ದಾರೆ. ಇದರೊಂದಿಗೆ ಭಕ್ತರ ಸಂಖ್ಯೆಯೂ ಹೆಚ್ಚಾಗಿದೆ. ಕೆಲವು ದಿನಗಳ ಹಿಂದೆ ಸ್ಥಳೀಯರು ಮಾತ್ರ ಭೇಟಿ ನೀಡುತ್ತಿದ್ದ ಕಾರಣ ದೇವಾಲಯದ ಆವರಣ ಪ್ರಶಾಂತವಾಗಿತ್ತು ಎಂದು ವ್ಯಕ್ತಿಯೊಬ್ಬರು ನೆನಪಿಸಿಕೊಂಡಿದ್ದಾರೆ. ಅಲ್ಲದೇ, ಐಟಿ ಉದ್ಯೋಗಿಗಳ ಸಂಖ್ಯೆ ಹೆಚ್ಚಾದ ಕಾರಣ ಇಲ್ಲಿ ಗೊಂದಲ ಏರ್ಪಟ್ಟಿದೆ. ಈ ಆಲಯಕ್ಕೆ ಐತಿಹಾಸಿಕ ಹಿನ್ನೆಲೆ ಇದೆ ಎಂದು ನೆನಪಿಸಿದ್ದಾರೆ.
ಕಳೆದ ಮೂರು ದಶಕಗಳಿಂದ ಕೋರಮಂಗಲದಲ್ಲಿಯೇ ವಾಸಿಸುತ್ತಿರುವ ವ್ಯಕ್ತಿ ಹೇಳುವಂತೆ, ಪ್ರತಿದಿನ ನಾನು ಈ ದೇವಾಲಯ ಮಾರ್ಗದಲ್ಲಿಯೇ ಪ್ರಯಾಣ ಮಾಡ್ತೀನಿ. ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯವಾಗುವುದಕ್ಕೆ ಮೊದಲೇ ಸ್ಥಳೀಯರಿಗೆ ಅದರ ಇತಿಹಾಸ ಮತ್ತು ಮಹತ್ವ ತಿಳಿದಿತ್ತು ಎಂದು ಅವರು ಹೇಳಿದರು. ದೇವಾಲಯಕ್ಕೆ ಭೇಟಿ ನೀಡುವುದರಿಂದ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಬರುತ್ತವೆ ಎಂದು ನಂಬುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಅವರು ಜನರಿಗೆ ನೆನಪಿಸಿದರು.
ಯಾರಾದರೂ ತಮ್ಮ ಆಸೆಗಳನ್ನು ಈಡೇರಿಸಲು ದೇವರ ಮೊರೆ ಹೋಗಬಹುದು. ಕೆಲವೇ ದಿನಗಳ ಹಿಂದೆ ಪ್ರಶಾಂತವಾಗಿದ್ದ ಈ ಪ್ರದೇಶ, ಇದು ಈಗ ಆನ್‌ಲೈನ್‌ನಲ್ಲಿ ಚರ್ಚೆಯ ವಿಷಯವಾಗಿದೆ ಎಂದು ನೆಟಿಜನ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಇಂತಹದ್ದೇ ದೇವಾಲಯ ಹೈದರಾಬಾದ್‌ನಲ್ಲಿಯೂ ಫೇಮಸ್ ಆಗಿದ್ದು, ಚಿಲುಕೂರು ಬಾಲಾಜಿ ದೇವಾಲಯ ವೀಸಾ ದೇವಾಲಯ ಎಂದೇ ಖ್ಯಾತಿ ಪಡೆದುಕೊಂಡಿದೆ. ವೀಸಾ ಸಿಗಲಿಲ್ಲ ಎಂದರೇ, ಇಲ್ಲಿಗೆ ಭೇಟಿ ನೀಡಿ ಬೇಗನೆ ವೀಸಾ ಸಿಗುತ್ತದೆ ಎಂದು ಭಕ್ತರು ನಂಬುತ್ತಾರೆ.
Bangalore [Bangalore],Bangalore,Karnataka














