Last Updated:
ಲೋಕಭವನದಲ್ಲಿ ಇಂದು ನಡೆಯುವ ನೂತನ ಸಚಿವರ ಪ್ರಮಾಣವಚನ ಸಮಾರಂಭದ ಹಿನ್ನೆಲೆಯಲ್ಲಿ ಮಧ್ಯಾಹ್ನ 2ರಿಂದ ರಾತ್ರಿ 8ರವರೆಗೆ ಬೆಂಗಳೂರಿನ ಸಿ.ಬಿ.ಡಿ. ಪ್ರದೇಶದ ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಜಾರಿಯಲ್ಲಿದೆ. ಯಾವ ರಸ್ತೆಗಳಲ್ಲಿ ನಿರ್ಬಂಧ ಇದೆ? ಯಾವ ಪರ್ಯಾಯ ಮಾರ್ಗ ಬಳಸಬೇಕು? ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರು: ಇಂದು (ಆಗಸ್ಟ್ 3) ಬೆಂಗಳೂರಿನ (Bengaluru) ಕೇಂದ್ರ ಭಾಗದಲ್ಲಿ ಸಂಚರಿಸುವವರು ಎಚ್ಚರಿಕೆಯಿಂದ ಪ್ರಯಾಣ ಯೋಜಿಸಬೇಕು. ಲೋಕಭವನದ ಗಾಜಿನ ಮನೆಯಲ್ಲಿ ಸಂಜೆ 4 ಗಂಟೆಗೆ ನಡೆಯಲಿರುವ ನೂತನ ಸಚಿವರ ಪ್ರಮಾಣವಚನ ಸಮಾರಂಭದ ಹಿನ್ನೆಲೆಯಲ್ಲಿ ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಹಲವು ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಜಾರಿಯಲ್ಲಿರಲಿದೆ. ಸಮಾರಂಭಕ್ಕೆ ಗಣ್ಯರು (Guest) ಮತ್ತು ಅತಿಥಿಗಳು ಆಗಮಿಸುವ ಹಿನ್ನೆಲೆ, ಸಿ.ಬಿ.ಡಿ. (CBD) ಪ್ರದೇಶದಲ್ಲಿ ವಾಹನ ದಟ್ಟಣೆ ಹೆಚ್ಚುವ ಸಾಧ್ಯತೆ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರು ಸಂಚಾರ ಪೊಲೀಸರು ಸಾರ್ವಜನಿಕರು ನಿರ್ಬಂಧಿತ ರಸ್ತೆಗಳನ್ನು ತಪ್ಪಿಸಿ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಮನವಿ ಮಾಡಿದ್ದಾರೆ.
- ಕಬ್ಬನ್ ರಸ್ತೆ – ಬಿ.ಆರ್.ವಿ. ಜಂಕ್ಷನ್‌ನಿಂದ ಸಿ.ಟಿ.ಟಿ. ಜಂಕ್ಷನ್ ಹಾಗೂ ಅಲ್ಲಿಂದ ಲೋಕಭವನದವರೆಗೆ
- ಬಾಳೇಕುಂದ್ರಿ ಜಂಕ್ಷನ್‌ನಿಂದ ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ ಕಡೆಗೆ
- ಕೆ.ಆರ್. ಸರ್ಕಲ್‌ನಿಂದ ಕಾಶ್ಮೀರ್ ಜಂಕ್ಷನ್‌ವರೆಗೆ
- ಡಾ. ಅಂಬೇಡ್ಕರ್ ರಸ್ತೆ ಕ್ರಿಮ್ಸ್ ಜಂಕ್ಷನ್‌ನಿಂದ ಸಿ.ಟಿ.ಟಿ. ಜಂಕ್ಷನ್ ಕಡೆಗೆ
- ಸೆಂಟ್ ಮಾರ್ಕ್ಸ್ ರಸ್ತೆಯಿಂದ ಸಿ.ಟಿ.ಟಿ. ಜಂಕ್ಷನ್ ಕಡೆಗೆ ಸಂಪರ್ಕಿಸುವ ಮಾರ್ಗ
ಸಂಚಾರ ದಟ್ಟಣೆಯನ್ನು ತಪ್ಪಿಸಲು ಪೊಲೀಸರು ಹಲವು ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದಾರೆ.
- ಬಿ.ಆರ್.ವಿ. ಜಂಕ್ಷನ್‌ನಿಂದ ಶಿವಾಜಿನಗರ – ಅನಿಲ್ ಕುಂಬ್ಳೆ ಜಂಕ್ಷನ್ ಮಾರ್ಗ
- ಕನ್ನಿಂಗ್‌ಹ್ಯಾಮ್ ರಸ್ತೆ ಮೂಲಕ ವಸಂತನಗರ ಸಂಪರ್ಕ
- ನ್ಯೂ ಪತಂಗ್ ರಸ್ತೆ ಮೂಲಕ ಕೆ.ಆರ್. ಸರ್ಕಲ್ – ಕಾಶ್ಮೀರ ಜಂಕ್ಷನ್ ಸಂಚಾರ
- ಅನಿಲ್ ಕುಂಬ್ಳೆ ಜಂಕ್ಷನ್ ಹಾಗೂ ಬಿ.ಆರ್.ವಿ. ಜಂಕ್ಷನ್ ಮೂಲಕ ಲೋಕಭವನ ಪ್ರದೇಶವನ್ನು ಬೈಪಾಸ್ ಮಾಡಬಹುದು
- ಹಲಸೂರು ಹಾಗೂ ಹಳೆ ಏರ್‌ಪೋರ್ಟ್ ಕಡೆಯಿಂದ ಹೆಬ್ಬಾಳ ಅಥವಾ ವಿಮಾನ ನಿಲ್ದಾಣದತ್ತ ತೆರಳುವವರು ಶಿವಾಜಿನಗರ – ಕನ್ನಿಂಗ್‌ಹ್ಯಾಮ್ ರಸ್ತೆ – ವಸಂತನಗರ ಮಾರ್ಗ ಬಳಸುವಂತೆ ಸೂಚಿಸಲಾಗಿದೆ.
- ಹಳೇ ಮದ್ರಾಸ್ ರಸ್ತೆ ಭಾಗದಿಂದ ಹೆಬ್ಬಾಳ ಕಡೆ ತೆರಳುವವರು ಹಲಸೂರು ಲೇಕ್ – ಟಿನ್ ಫ್ಯಾಕ್ಟರಿ – ಔಟರ್ ರಿಂಗ್ ರಸ್ತೆ ಮಾರ್ಗ ಬಳಸಬಹುದು.
ಇಂದು ಕಾರ್ಯಕ್ರಮದ ಹಿನ್ನೆಲೆಯಲ್ಲಿ ಹಲವು ಪ್ರಮುಖ ರಸ್ತೆಗಳಲ್ಲಿ ಪಾರ್ಕಿಂಗ್ ನಿಷೇಧಿಸಲಾಗಿದೆ. ಪ್ರಮುಖವಾಗಿ ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ, ಲೋಕಭವನ ರಸ್ತೆ, ಎಲ್.ಎಚ್. ರಸ್ತೆ, ಕ್ರಿಮ್ಸ್ ರಸ್ತೆ, ಕಸ್ತೂರಿಬಾ ರಸ್ತೆ, ಕಬ್ಬನ್ ರಸ್ತೆ, ಇನ್‌ಫ್ಯಾಂಟ್ರಿ ರಸ್ತೆ, ಪ್ಯಾಲೇಸ್ ರಸ್ತೆ, ನ್ಯೂ ಪತಂಗ್ ರಸ್ತೆ, ಟಿ. ಚೌಡಯ್ಯ ರಸ್ತೆ, ರಮಣ ಮಹರ್ಷಿ ರಸ್ತೆ, ಕಬ್ಬನ್ ಉದ್ಯಾನವನದ ಒಳ ರಸ್ತೆಗಳು ಸೇರಿದಂತೆ ಹಲವು ಪ್ರಮುಖ ಮಾರ್ಗಗಳಲ್ಲಿ ವಾಹನ ನಿಲ್ಲಿಸಲು ಅವಕಾಶ ಇರುವುದಿಲ್ಲ.
ಭಾರೀ ವಾಹನಗಳಿಗೆ ವಿಶೇಷ ನಿರ್ಬಂಧ
Bangalore [Bangalore],Bangalore,Karnataka














