Last Updated:
ಬೆಂಗಳೂರು ಐಪಿಎಲ್ ಫೈನಲ್ ಹಿನ್ನೆಲೆಯಲ್ಲಿ ಇಂದು ರಾತ್ರಿ 11ರಿಂದ ನಾಳೆ ಬೆಳಗ್ಗೆ 5ರವರೆಗೆ ಕಬ್ಬನ್ ರಸ್ತೆ ಸುತ್ತಮುತ್ತ ಡಿಕ್ಕನ್ಸನ್, ವೆಬ್ಸ್ ಗ್ರೌಂಡ್ ಫ್ಲೈಓವರ್ ಗಳಲ್ಲಿ ವಾಹನ ಸಂಚಾರ ಬಂದ್
ಬೆಂಗಳೂರು: ಸಿಲಿಕಾನ್ ಸಿಟಿ ಮಂದಿಯೇ ಗಮನಿಸಿ! ನೀವು ಇಂದು ರಾತ್ರಿ (Night) ಅಥವಾ ನಾಳೆ ಮುಂಜಾನೆ ವಾಹನ ಹಿಡಿದು ಹೊರಗೆ ಹೊರಡಲು ಪ್ಲಾನ್ ಮಾಡಿದ್ದೀರಾ? ಹಾಗಿದ್ದರೆ ನಿಮಗೆ ಒಂದು ಶಾಕಿಂಗ್ ಸುದ್ದಿ (Shocking News) ಇದೆ. ಬೆಂಗಳೂರಿನ ಹೃದಯಭಾಗದಲ್ಲಿ ಸಂಚರಿಸುವ ಮುನ್ನ ಈ ಹೊಸ ಟ್ರಾಫಿಕ್ ರೂಲ್ಸ್ ತಿಳಿಯದಿದ್ದರೆ ನೀವು ಸಂಕಷ್ಟಕ್ಕೆ ಸಿಲುಕುವುದು ಗ್ಯಾರಂಟಿ!
ಇಂದು ನಡೆಯಲಿರುವ ಐಪಿಎಲ್ ಪಂದ್ಯದ ಫೈನಲ್ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಸಂಚಾರ ಪೊಲೀಸರು ಪ್ರಮುಖ ರಸ್ತೆ ಹಾಗೂ ಫ್ಲೈಓವರ್‌ಗಳಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಿದ್ದಾರೆ! ಇವತ್ತು ಐಪಿಎಲ್ ಸಂಭ್ರಮದ ನಿಮಿತ್ತ ಪಂದ್ಯಾರಂಭ ಹಾಗೂ ಅಂತ್ಯದಲ್ಲಿ ಆಗುವ ಜನದಟ್ಟಣೆ ಹಾಗೂ ಸಂಭ್ರಮಾಚರಣೆಯನ್ನು ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿದೆ.
* ಪ್ರಾರಂಭ: 31-05-2026 (ಇಂದು) ರಾತ್ರಿ 11:00 ಗಂಟೆಯಿಂದ
* ಮುಕ್ತಾಯ: 01-06-2026 (ನಾಳೆ) ಮುಂಜಾನೆ 05:00 ಗಂಟೆಯವರೆಗೆ
ಈ ಅವಧಿಯಲ್ಲಿ ಕೆಳಗೆ ಹೆಸರಿಸಲಾದ ಫ್ಲೈಓವರ್‌ಗಳಲ್ಲಿ ವಾಹನಗಳ ಓಡಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಬಂದ್ ಆಗಲಿರುವ ಪ್ರಮುಖ ಫ್ಲೈಓವರ್‌ಗಳ ಲಿಸ್ಟ್ ಇಲ್ಲಿದೆ
ಡಿಕ್ಕನ್ಸನ್ ರಸ್ತೆ ಫ್ಲೈಓವರ್- ಕಾಮರಾಜ ರಸ್ತೆಯಿಂದ ಕಬ್ಬನ್ ರಸ್ತೆ ಕಡೆಗೆ ಹಾಗೂ ಕಬ್ಬನ್ ರಸ್ತೆಯಿಂದ ಕಾಮರಾಜ ರಸ್ತೆ ಕಡೆಗೆ ಹೋಗುವ ವಾಹನ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ವೆಬ್ಸ್ ಗ್ರೌಂಡ್ ಫ್ಲೈಓವರ್- ಎಂ.ಜಿ. ರಸ್ತೆಯಿಂದ 5ನೇ ಮುಖ್ಯ ರಸ್ತೆ ಕೋರಮಂಗಲ ಮತ್ತು ಕಾಮರಾಜ ರಸ್ತೆ ಕಡೆಗೆ ಹೋಗುವ ಹಾಗೂ 5ನೇ ಮುಖ್ಯ ರಸ್ತೆ ಕೋರಮಂಗಲದಿಂದ ಎಂ.ಜಿ. ರಸ್ತೆ/ಕಾಮರಾಜ ರಸ್ತೆ ಕಡೆಗೆ ಬರುವ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಸಂಚಾರ ದಟ್ಟಣೆಯನ್ನು ತಪ್ಪಿಸಲು ಮತ್ತು ಸುಗಮ ವ್ಯವಸ್ಥೆಗೆ ಸಹಕರಿಸಲು ಬೆಂಗಳೂರು ಸಂಚಾರ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಈ ಮಾರ್ಗಗಳಲ್ಲಿ ಪ್ರಯಾಣಿಸುವವರು ಪರ್ಯಾಯ ರಸ್ತೆಗಳನ್ನು ಬಳಸಲು ಸೂಚಿಸಲಾಗಿದೆ. ನಿರ್ಲಕ್ಷ್ಯ ವಹಿಸಿದರೆ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕುವುದು ಗ್ಯಾರಂಟಿ!
Bangalore [Bangalore],Bangalore,Karnataka













