Bengaluru Power Cut: ಬೆಂಗಳೂರು ಮಂದಿಗೆ ಕರೆಂಟ್ ಶಾಕ್, ನಾಳೆ ಈ ಪ್ರಮುಖ ಪ್ರದೇಶಗಳಲ್ಲಿ ಪವರ್ ಕಟ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ವಿದ್ಯುತ್ ವ್ಯತ್ಯಯ


Last Updated:

ಬೆಂಗಳೂರಿನಲ್ಲಿ ಜುಲೈ 25ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಕೆಪಿಟಿಸಿಎಲ್ ತುರ್ತು ನಿರ್ವಹಣಾ ಕಾಮಗಾರಿಯಿಂದ ಕಮ್ಮಗೊಂಡನಹಳ್ಳಿ, ಲಕ್ಷ್ಮೀಪುರ, ಅಬ್ಬಿಗೆರೆ ಸೇರಿದಂತೆ ಹಲವೆಡೆ ಪವರ್ ಕಟ್ ಆಗಲಿದೆ.

ವಿದ್ಯುತ್ ವ್ಯತ್ಯಯ
ವಿದ್ಯುತ್ ವ್ಯತ್ಯಯ

ಬೆಂಗಳೂರು: ನಗರದ ಜನತೆಗೆ ಬೆಸ್ಕಾಂ ಕಡೆಯಿಂದ ಪ್ರಮುಖ ಸುದ್ದಿಯೊಂದು ಹೊರಬಂದಿದ್ದು, ತುರ್ತು ನಿರ್ವಹಣಾ ಕಾಮಗಾರಿ (Emergency Maintenance Work) ಹಿನ್ನೆಲೆಯಲ್ಲಿ ನಾಳೆ (Tomorrow) (ಜುಲೈ 25ರಂದು) ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಹಲವೆಡೆ ವಿದ್ಯುತ್ ವ್ಯತ್ಯಯ (Power Cut) ಉಂಟಾಗಲಿದೆ. ನಾಲ್ಕು ಗಂಟೆಗಳ ಕಾಲ ವಿದ್ಯುತ್ ಕಡಿತಗೊಳ್ಳುತ್ತಿರುವುದರಿಂದ ಸಾರ್ವಜನಿಕರು (Public) ಅಗತ್ಯ ಮುನ್ನೆಚ್ಚರಿಕೆಗಳನ್ನು ವಹಿಸುವಂತೆ ಮನವಿ ಮಾಡಲಾಗಿದೆ.

ಯಾವೆಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ಕಡಿತ?

ಕೆಪಿಟಿಸಿಎಲ್ ವತಿಯಿಂದ 66/11 ಕೆ.ವಿ ಅಬ್ಬಿಗೆರೆ ಉಪಕೇಂದ್ರ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಇದರಿಂದಾಗಿ ಕಮ್ಮಗೊಂಡನಹಳ್ಳಿ, ಲಕ್ಷ್ಮೀಪುರ, ವಡೇರಹಳ್ಳಿ, ಅಬ್ಬಿಗೆರೆ ಇಂಡಸ್ಟ್ರಿಯಲ್ ಏರಿಯಾ, ಸಿಂಗಾಪುರ ಹಾಗೂ ಪೈಪ್‍ಲೈನ್ ರಸ್ತೆ ಸುತ್ತಮುತ್ತಲಿನ ಜನರಿಗೆ ಪವರ್ ಕಟ್ ಕಾಡಲಿದೆ.
ಹಾಗೆಯೇ ಕಾಶಿರಾಮ ನಗರ, ಕುವೆಂಪು ನಗರ, ವಿಶ್ವೇಶ್ವರಯ್ಯ ಬಡಾವಣೆ ಹಾಗೂ ಬ್ರಿಗೇಡ್ ಪಾರ್ಕ್‍ಸೈಡ್ ನಾರ್ತ್ ಅಪಾರ್ಟ್‍ಮೆಂಟ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳಿಗೂ ವಿದ್ಯುತ್ ವ್ಯತ್ಯಯದ ಬಿಸಿ ತಟ್ಟಲಿದೆ. ನಾಳೆ ಮಧ್ಯಾಹ್ನದವರೆಗೆ ಕರೆಂಟ್ ಇರುವುದಿಲ್ಲವಾದ್ದರಿಂದ ನಿಮ್ಮ ದೈನಂದಿನ ಕೆಲಸಗಳನ್ನು ಮುಂಚಿತವಾಗಿ ಪ್ಲಾನ್ ಮಾಡಿಕೊಳ್ಳುವುದು ಉತ್ತಮ.
ಸಾರ್ವಜನಿಕರಿಗೆ ಮನವಿ

ಕಾಮಗಾರಿಗಳು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಪೂರ್ಣಗೊಂಡರೆ, ವಿದ್ಯುತ್ ಸರಬರಾಜನ್ನು ಮರುಸ್ಥಾಪಿಸಲಾಗುವುದು. ಸಾರ್ವಜನಿಕರು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡು, ಮೊಬೈಲ್, ಇನ್ವರ್ಟರ್ ಚಾರ್ಜ್ ಮಾಡಿಕೊಳ್ಳುವುದು ಹಾಗೂ ನೀರಿನ ಮೋಟಾರ್ ಕೆಲಸಗಳನ್ನು ಮುಂಚಿತವಾಗಿ ಮುಗಿಸಿಕೊಳ್ಳುವ ಮೂಲಕ ಸಹಕರಿಸುವಂತೆ ಅಧಿಕಾರಿಗಳು ವಿನಂತಿಸಿದ್ದಾರೆ.

ತಮ್ಮ ದಿನನಿತ್ಯದ ಕೆಲಸಗಳನ್ನು ಮುಂಚಿತವಾಗಿ ಯೋಜಿಸಿಕೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಕಾಮಗಾರಿ ಪೂರ್ಣಗೊಂಡ ಕೂಡಲೇ ವಿದ್ಯುತ್ ಸರಬರಾಜು ಪುನಃ ಆರಂಭವಾಗಲಿದೆ.

ಭಾರತೀಯ ಹವಾಮಾನ ಇಲಾಖೆ ನೀಡಿರುವ ಅಧಿಕೃತ ವರದಿ ಪ್ರಕಾರ, ಜುಲೈ 24ರ ಬೆಳಿಗ್ಗೆ 08:30 ರಿಂದ ಜುಲೈ 25ರ ಬೆಳಿಗ್ಗೆ 08:30 ರವರೆಗೆ ರಾಜ್ಯದ ಹಲವೆಡೆ ವರುಣ ದೇವ ಆರ್ಭಟಿಸಲಿದ್ದಾನೆ. ಸಾರ್ವಜನಿಕರು ತೀವ್ರ ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ ಎಂದು ವಿಜಯ ಕರ್ನಾಟಕ ವರದಿ ಮಾಡಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed