Last Updated:
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಮಾಸಿಕ 50,000 ರೂ. ವೇತನ. ಅರ್ಜಿ ಸಲ್ಲಿಸಲು ಆಗಸ್ಟ್ 21, 2026 ಕೊನೆಯ ದಿನಾಂಕ.
ಬೆಂಗಳೂರು: ಉದ್ಯೋಗಾಕಾಂಕ್ಷಿಗಳಿಗೆ, ಅದರಲ್ಲೂ ಶಿಕ್ಷಣ (Education) ಕ್ಷೇತ್ರದಲ್ಲಿ ಭದ್ರವಾದ ಬದುಕು ಕಟ್ಟಿಕೊಳ್ಳಲು ಬಯಸುವವರಿಗೆ ಬೆಂಗಳೂರು ವಿಶ್ವವಿದ್ಯಾಲಯದಿಂದ (Bangalore University) ಸುವರ್ಣಾವಕಾಶವೊಂದು ಒಲಿದುಬಂದಿದೆ. ರಾಜ್ಯದ ಪ್ರತಿಷ್ಠಿತ ವಿವಿಯಲ್ಲಿ ಖಾಲಿ ಇರುವ ವಿವಿಧ ಅತಿಥಿ ಉಪನ್ಯಾಸಕ (Guest Faculties) ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಬೆಂಗಳೂರಿನಲ್ಲಿಯೇ ಕೆಲಸ ಮಾಡುವ ಕನಸು ಕಾಣುತ್ತಿರುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‍ಲೈನ್ (Online) ಹಾಗೂ ಆಫ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.














