Bengaluru: ಮೆಟ್ರೋದಲ್ಲಿ ಗ್ರಾಬ್ ಹ್ಯಾಂಡಲ್​ ಮುರಿದು ಬಿದ್ದು ಗಾಯಗೊಂಡಿದ್ದ ಗ್ರಾಹಕನಿಗೆ 5 ಸಾವಿರ ಪರಿಹಾರ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ನಮ್ಮ ಮೆಟ್ರೋ (ಸಾಂದರ್ಭಿಕ ಚಿತ್ರ)


Last Updated:

ನಮ್ಮ ಮೆಟ್ರೋ ರೈಲಿನ ಗ್ರಾಬ್ ಹ್ಯಾಂಡಲ್ ಮುರಿದು ಪ್ರಯಾಣಿಕ ಗಾಯಗೊಂಡ ಪ್ರಕರಣದಲ್ಲಿ ಗ್ರಾಹಕರ ಸೇವಾ ಆಯೋಗ, BMRCL ಗೆ 5 ಸಾವಿರ ಪರಿಹಾರ ನೀಡಲು ಆದೇಶಿಸಿದೆ.

ನಮ್ಮ ಮೆಟ್ರೋ (ಸಾಂದರ್ಭಿಕ ಚಿತ್ರ)
ನಮ್ಮ ಮೆಟ್ರೋ (ಸಾಂದರ್ಭಿಕ ಚಿತ್ರ)

ಬೆಂಗಳೂರು: ರಾಜಧಾನಿಯ ನಮ್ಮ ಮೆಟ್ರೋದಲ್ಲಿ (Namma Metro) ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕರೊಬ್ಬರು ಬಿದ್ದು ಗಾಯಗೊಂಡಿದ್ದ ಪ್ರಕರಣದಲ್ಲಿ ಐದು ಸಾವಿರ ರೂಪಾಯಿ ಪರಿಹಾರ ನೀಡುವಂತೆ ಗ್ರಾಹಕರ ಸೇವಾ ಆಯೋಗ (Consumer Dispute Redressal Commission) ಆದೇಶಿಸಿದೆ. ಘಟನೆಯಲ್ಲಿ ಬೆಂಗಳೂರು ರೈಲು ನಿಗಮ ಲಿಮಿಟೆಡ್ (ಬಿಎಂಆರ್​ಸಿಎಲ್) (BMRCL) ಹೊಣೆಗಾರನನ್ನಾಗಿ ಮಾಡಿದ್ದು, ಪ್ರಯಾಣಿಕರು ಸಲ್ಲಿಸಿದ ದೂರಿನ ಅನ್ವಯ ವಿಚಾರಣೆ ನಡೆಸಿ ಕ್ರಮಕೈಗೊಂಡಿದೆ.

ಏನಿದು ಘಟನೆ?

2025ರ ಜನವರಿ 18ರಂದು ಗಂಗಾನಗರದ ನಿವಾಸಿಯಾಗಿದ್ದ 49 ವರ್ಷದ ಎಂಜಿ ನಾಗರಾಜು ಮೆಟ್ರೋದಲ್ಲಿ ಪ್ರಯಾಣಿಸಲು ಆಗಮಿಸಿದ್ದರು. ರಾಜಾಜಿನಗರದಿಂದ ಕೆಆರ್ ಮಾರುಕಟ್ಟೆಗೆ ಪ್ರಯಾಣಿಸುವ ಸಂದರ್ಭದಲ್ಲಿ ಗಿಜಿಗುಡುತ್ತಿದ್ದ ಮೆಟ್ರೋ ರೈಲನ್ನು ಹತ್ತಲು ಪ್ರಯತ್ನಿಸಿದ್ದರು. ಮೆಟ್ರೋ ಕಾರ್ಡ್ ಬಳಸಿ ಮೆಟ್ರೋ ಹತ್ತಿದ್ದ ಅವರಿಗೆ ಸೀಟ್ ಸಿಗದ ಕಾರಣ ನಿಂತುಕೊಂಡು ಪ್ರಯಾಣ ಮಾಡಬೇಕಾಗಿ ಬಂತು. ಆದರೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಸಂದರ್ಭದಲ್ಲಿ ಗ್ರಾಬ್ ಹ್ಯಾಂಡಲ್ ಹಿಡಿದು ನಿಂತಿದ್ದರು. ಆದರೆ ರೈಲು ಕೆಆರ್ ಮಾರುಕಟ್ಟೆ ನಿಲ್ದಾಣವನ್ನು ಸಮೀಪಿಸುತ್ತಿದ್ದಂತೆ ಗ್ರಾಬರ್ ಹ್ಯಾಂಡಲ್ ಮುರಿದು ಮೂಗಿಗೆ ಬಲವಾದ ಪೆಟ್ಟು ಬಿದ್ದಿತ್ತು. ಇದರಿಂದ ಮುಗಿನಿಂದ ರಕ್ತಸ್ರಾವ ಆಗಿತ್ತು, ಸುಮಾರು 3 ಸಾವಿರ ಬೆಲೆಯ ಕನ್ನಡಕವೂ ಮುರಿದು ಹೋಗಿತ್ತಂತೆ.

ಈ ಬಗ್ಗೆ ದೂರು ನೀಡಲು ಹೋದರೆ ಸ್ಟೇಷನ್ ನಲ್ಲಿದ್ದ ಅಧಿಕಾರಿಗಳು ನಿರಾಕರಿಸಿದ್ದರಂತೆ. ಆ ನಂತರ ಮೂರು ದಿನಗಳ ಕಾಲ ಮೆಟ್ರೋ ಕೇಂದ್ರವನ್ನು ಸಂಪರ್ಕ ಮಾಡಿದ್ದರಂತೆ. ಇದಾದ ಬಳಿಕವೂ ಯಾವುದೇ ದೂರು ದಾಖಲಿಸಿಕೊಳ್ಳಲಿಲ್ಲವಂತೆ. ಇದರೊಂದಿಗೆ ಫೆಬ್ರವರಿಯಲ್ಲಿ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಕೆ ಮಾಡಿದ್ದರು. ಇದರಂತೆ ವಿಚಾರಣೆ ನಡೆಸಿದ ಆಯೋಗ, ಬಿಎಂಆರ್ಸಿಎಲ್ ವಾದವನ್ನು ತಿರಸ್ಕರ ಮಾಡಿ, ಹ್ಯಾಂಡಲ್ ಬಳಕೆ ಬಗ್ಗೆ ಯಾವುದೇ ಸೂಚನೆ ನೀಡಿದಿರುವುದು ಅಥವಾ ಪ್ರಕಟನೆ ಇಲ್ಲದಿರುವ ಕಾರಣ ಸೇವಾ ಕೊರತೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಇದರಂತೆ ಗ್ರಾಹಕರಿಗೆ ಕನ್ನಡದ ವೆಚ್ಚ ಮೂರು ಸಾವಿರ ರೂಪಾಯಿ, ಕಾನೂನು ವೆಚ್ಚ ಎರಡು ಸಾವಿರ ರೂಪಾಯಿ ನೀಡುವಂತೆ ಆದೇಶ ನೀಡಿದೆ. ಬಿಎಂಆರ್​ಸಿಎಲ್ ಕಡೆಯಿಂದ ವಾದ ಮಂಡನೆ ಮಾಡಿ, ಗ್ರಾಹಕರು ಎರಡು ಕೈಗಳಿಂದ ಹ್ಯಾಂಡಲ್ ಹಿಡಿದು ದೇಹದ ಭಾರವನ್ನು ಸಂಪೂರ್ಣವಾಗಿ ಬಿಟ್ಟ ಪರಿಣಾಮ ಹ್ಯಾಂಡಲ್ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದರು. ಆದರೆ ಈ ಸಂದರ್ಭದ ಸಿಸಿಟಿವಿ ದೃಶ್ಯಗಳನ್ನು ಆಯೋಗಕ್ಕೆ ವಿಫಲರಾಗಿದ್ರು, ಈ ಹಿನ್ನೆಲೆಯಲ್ಲಿ ಆಯೋಗ ಗ್ರಾಹಕರ ಪರ ಆದೇಶ ನೀಡಿದೆ ಎಂದು ಏಷ್ಯಾ ನೆಟ್ ನ್ಯೂಸ್ ವರದಿ ಮಾಡಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports