Last Updated:
ಭಾನುವಾರ ಈ ರಸ್ತೆಯೊಳಗೆ ವಾಹನಗಳಿಗೆ ನೋ ಎಂಟ್ರಿ. ಅದಕ್ಕೇ ಜನ ಅಷ್ಟು ಆರಾಮಾಗಿ ರಿಲ್ಯಾಕ್ಸ್ ಮೂಡಲ್ಲಿ ಇಡೀ ರಸ್ತೆಯುದ್ದಕ್ಕೂ ಓಡಾಡ್ಕೊಂಡಿರ್ತಾರೆ. ನಡುನಡುವೆ ಬಾಯಿರುಚಿ ತಣಿಸೋ ಬಗೆಬಗೆಯ ಸ್ನಾಕ್ಸ್ ಅಂಗಡಿಗಳಂತೂ ಜನ್ರನ್ನ ಮತ್ತಷ್ಟು ಅಟ್ರಾಕ್ಟ್ ಮಾಡ್ತವೆ.
ಬೆಂಗ್ಳೂರಲ್ಲಿ ಎಲ್ಲಾ ಏರಿಯಾಗಳದ್ದು (Bengaluru News) ಒಂದು ತೂಕವಾದ್ರೆ, ಚರ್ಚ್ ಸ್ಟ್ರೀಟ್ನದ್ದೇ ಒಂದು (Church Street ) ತೂಕ. ಲೋಕಲ್ ಚುರುಮುರಿಯಿಂದ ಹಿಡಿದು ವರ್ಲ್ಡ್ ಫೇಮಸ್ ರೆಸ್ಟೊರೆಂಟ್ ತನಕ, ಪುಸ್ತಕಗಳ (Restaurants and Books) ಅದ್ಭುತ ಲೋಕದಿಂದ ಹಿಡಿದು ಕಲರ್ ಕಲರ್ ನೈಟ್ ಲೈಫ್ವರಗೆ ಚರ್ಚ್ ಸ್ಟ್ರೀಟ್ನಲ್ಲಿ ಎಲ್ಲವೂ ಲಭ್ಯ. ನೋಡೋರಿಗೆ ಸಖತ್ ಕಾಸ್ಟ್ಲಿ ಏರಿಯಾ ಅನ್ನಿಸೋ ಆದ್ರೆ ಎಲ್ರಿಗೂ ಖುಷಿಯ ಫೀಲ್ ಕೊಡೋ ಈ ಸುಂದರ ಬೀದಿಯಲ್ಲಿ ಬೆಂಗ್ಳೂರು ಬೇರೆಯೇ ರೀತಿಯಲ್ಲಿ ಶೈನ್ ಆಗ್ತಿದೆ.
ಅದೆಷ್ಟೋ ಜನ ಆನ್ಲೈನ್ ಅಥವಾ ಸೋಶಿಯಲ್ ಮೀಡಿಯಾ ಮೂಲಕ ಸಣ್ಣ ಪುಟ್ಟ ಕ್ರಾಫ್ಟ್, ತಿಂಡಿ-ತಿನಿಸುಗಳ ಬ್ಯುಸಿನೆಸ್ ಮಾಡುವವರ ಪಾಲಿಗೆ ಭಾನುವಾರದ ಚರ್ಚ್ ಸ್ಟ್ರೀಟ್ ಒಂಥರಾ ಓಪನ್ ಮಾರ್ಕೆಟ್ ಇದ್ದಹಾಗೆ. ಇಲ್ಲಿಗೆ ಬಂದ ಜನ ಇವ್ರ ತಿಂಡಿ ಟೇಸ್ಟ್ ಮಾಡಿಯೋ, ಅಥವಾ ಏನಾದ್ರು ಪರ್ಚೇಸ್ ಮಾಡಿಯೋ ಇಷ್ಟ ಆಯ್ತು ಅಂದ್ರೆ ಮತ್ತೆ ಇವ್ರ ಇನ್ಸ್ಟಾ ಪೇಜಲ್ಲಿ ಫಾಲೋ ಮಾಡಿ ರೆಗ್ಯುಲರ್ ಕಸ್ಟಮರ್ ಆಗೋಗ್ತಾರೆ.
ಇನ್ನು ಬೆಂಗ್ಳೂರು ಗೊತ್ತಿಲ್ದೇ ಇರೋ ಅದೆಷ್ಟೋ ಜನ್ರಿಗೂ ಸಿಕ್ಕಾಪಟ್ಟೆ ಪರಿಚಯ ಇರೋ ಬುಕ್ ವರ್ಮ್, ಬ್ಲಾಸಮ್ಸ್ ಮುಂತಾದ ಪುಸ್ತಕದ ಅಂಗಡಿಗಳಂತೂ ಹಳೇ ಬೆಂಗ್ಳೂರಿನ ಫ್ಲೇವರ್ ಜೊತೆ ಈಗಿನ ಜೆನ್ ಜೀಗೂ ಇಷ್ಟವಾಗೋ ಲಕ್ಷಾಂತರ ಪುಸ್ತಗಳ ಭಂಡಾರವನ್ನೇ ತಮ್ಮೊಳಗೆ ಇಟ್ಕೊಂಡಿವೆ. ಆನ್ಲೈನ್ನಲ್ಲೂ ನಿಮ್ಗೆ ಸಿಗದೇ ಇರೋ ಅದೆಷ್ಟೋ ಅಪರೂಪದ ಪುಸ್ತಕಗಳು ಇಲ್ಲಿ ಸಿಗದಿದ್ದರೆ ಕೇಳಿ.
ಇಷ್ಟೊಂದು ಪಾಶ್ ಆಗಿ ಕಲರ್ಫುಲ್ ಆಗಿ ಕಾಣುತ್ತೆ ಅಂದ್ಕೂಡ್ಲೇ ಎಲ್ಲವೂ ದುಬಾರಿ ಅಂದ್ಕೊಬೇಡಿ. ಒಂದೇ ಒಂದು ರೂಪಾಯಿ ಖರ್ಚು ಮಾಡದೇ ಕೂಡಾ ನೀವು ಚರ್ಚ್ ಸ್ಟ್ರೀಟ್ ನ ಸಂಡೇ ಸಂಜೆಯ ಮಜಾ ತಗೊಳ್ಬಹುದು. ಸುಮ್ನೆ ಈ ರಸ್ತೆಯ ಒಂದು ತುದಿಯಿಂದ ಮತ್ತೊಂದು ತುದಿಯವರಗೆ ನಡ್ಕೊಂಡು ಹೋದರೆ ಸಾಕು. ಎಲೆಕ್ಟ್ರಿಕ್ ಸೈಕಲ್ಗಳ ಸೈಲೆಂಟ್ ಓಡಾಟ, ಫುಟ್ಪಾತ್ ಮೇಲೆ ನಡೆಯೋ ಮ್ಯೂಸಿಕ್ ಕಾನ್ಸರ್ಟ್, ಟೇಸ್ಟಿ ಸ್ನಾಕ್ಗಳನ್ನ ರುಚಿ ನೋಡೋ ಅನುಭವ, ಗಂಟೆಗಟ್ಟಲೆ ಪುಸ್ತಕಗಳ ಲೋಕದಲ್ಲಿ ಕಳೆದುಹೋಗೋ ಸುಖ. ಬ್ಯುಸಿ ಬೆಂಗ್ಳೂರಿಂದ ಇದ್ಯಾವ್ದೋ ಬೇರೆ ಲೋಕಕ್ಕೆ ಕಾಲಿಟ್ಟಂಥಾ ಫೀಲ್ ಬರೋದು ಪಕ್ಕಾ. ಮುಂದಿನ ಭಾನುವಾರಕ್ಕೆ ನೀವೂ ಒಂದ್ಸಲ ಚರ್ಚ್ ಸ್ಟ್ರೀಟ್ ಅನ್ನೋ ಈ ಮಾಯಾಲೋಕದೊಳಗೆ ಒಂದು ರೌಂಡ್ ಹಾಕ್ಬನ್ನಿ. (ವರದಿ: ಶ್ರೀಕಲಾ ಭಟ್ಟ, ಬೆಂಗಳೂರು)
Bangalore [Bangalore],Bangalore,Karnataka












