Last Updated:
ಬೆಂಗಳೂರುದಲ್ಲಿ ಜಿಬಿಎ 450 ಫೀಡಿಂಗ್ ಸ್ಪಾಟ್ ಯೋಜನೆ ವಿಫಲ, ದೂರದ ಮತ್ತು ಕಸದ ಹತ್ತಿರದ ಜಾಗಗಳ ವಿರುದ್ಧ ಎನಿಮಲ್ ವೆಲ್ಫೇರ್ ಗ್ರೂಪ್, ನಿವಾಸಿಗಳ ಆಕ್ಷೇಪ, ಅಧಿಕಾರಿಗಳು ಹೇಳಿದ್ದೇನು?
ಭಾರತದ ಐಟಿ ರಾಜಧಾನಿ ಎಂದು ಗುರುತಿಸಿಕೊಂಡಿರುವ ಬೆಂಗಳೂರು (Bengaluru) ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಬೀದಿ ನಾಯಿಗಳ ಸಮಸ್ಯೆ ಬಹಳ ವರ್ಷಗಳಿಂದಲೂ ಭಾರೀ ಚರ್ಚೆ ನಡೆಯುತ್ತಿದೆ. ಈ ಸಮಸ್ಯೆ ಬ್ರೇಕ್ ಹಾಕಲು ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಸ್ಥಳೀಯ ಸರ್ಕಾರಗಳು ನಿರಂತರವಾಗಿ ಪ್ರಯತ್ನಿಸುತ್ತಲೇ ಇರುತ್ತವೆ. ಇಂತಹ ಪ್ರಯತ್ನದ ಭಾಗವಾಗಿ ಗ್ರೇಟರ್ ಬೆಂಗಳೂರು ಆಥಾರಿಟಿ (Greater Bengaluru Authority) ಮಹತ್ವದ ಯೋಜನೆಯೊಂದನ್ನು ಪ್ರಾರಂಭ ಮಾಡಿತ್ತು. ಇದರಿಂದ ನಾಯಿಗಳು ಮನುಷ್ಯರ ಮೇಲೆ ದಾಳಿ ಮಾಡುವುದನ್ನು (Street Dogs) ನಿಯಂತ್ರಣ ಮಾಡುವುದು ಹಾಗೂ ಅವುಗಳಿಗೂ ಸೂಕ್ತ ಆಹಾರ, ರಕ್ಷಣೆ ಹಾಗೂ ಜೀವಿಸುವ ಅವಕಾಶವನ್ನು ನೀಡುವುದು ಯೋಜನೆಯ ಮುಖ್ಯ ಉದ್ದೇಶ ಆಗಿತ್ತು. ಆ ಯೋಜನೆಯೇ ಬೀದಿ ನಾಯಿಗಳಿಗೆ ನಿಗದಿತ ಸ್ಥಳಗಳಲ್ಲಿ ಆಹಾರ ನೀಡುವುದು (Feeding Spot). ಆದರೆ ಜಿಬಿಎಯ ಮಹತ್ವದ ಯೋಜನೆಯೇ ವಿಫಲವಾಗಿದೆ ಎಂಬ ಮಾತುಗಳು ಕೇಳಿ ಬಂದಿದೆ.
ಬೆಂಗಳೂರಿನಲ್ಲಿ ಇದುವರೆಗೂ 450ಕ್ಕೂ ಹೆಚ್ಚು ಸ್ಥಳಗಳನ್ನು ಬಿಜಿಎ ತನ್ನ ಐದು ಕಾರ್ಪೋರೇಶನ್‌ಗಳಲ್ಲಿ ಜಿಬಿಎ ಗುರುತಿಸಿದೆ. ಅದರಲ್ಲಿ ಬೆಂಗಳೂರು ಪೂರ್ವ ನಗರ ಪಾಲಿಕೆಯು 150ಕ್ಕೂ ಹೆಚ್ಚು ಸ್ಥಾನಗಳನ್ನು ಒಳಗೊಂಡಿದೆ. ಉಳಿದಂತೆ 90 ಜಾಗಗಳು ಕೇಂದ್ರ ನಗರ ಪಾಲಿಕೆಯಲ್ಲಿ ಇದೆ. ಕಡಿಮೆ ಜನಸಂದಣಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ, ಶಾಲೆ, ಆಸ್ಪತ್ರೆ, ಮೆಟ್ರೋ ನಿಲ್ದಾಣ, ಬಸ್ ನಿಲ್ದಾಣಗಳಿಂದ ದೂರದಲ್ಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸದ್ಯ ಬೀದಿ ನಾಯಿಗಳು ವಾಸಿಸುತ್ತಿರುವ ಏರಿಯಾಗಳಲ್ಲಿಯೇ ಇರುತ್ತವೆ. ಅವುಗಳನ್ನು ಫೀಡಿಂಗ್ ಜಾಗಗಳಿಗೆ ಅವುಗಳನ್ನು ಸ್ಥಳಾಂತರ ಮಾಡಲು ಆಗೋದಿಲ್ಲ. ಅಲ್ಲದೇ ಈಗಾಗಲೇ ಆಹಾರ ನೀಡಲು ಗುರುತಿಸಿರುವ ಸ್ಥಳಗಳು ಕಸದ ತೊಟ್ಟಿಗಳಾಗಿ ಬದಲಾವಣೆ ಆಗುತ್ತಿದೆ ಎಂದು ಕೆನೈನ್ ಸ್ಕ್ವಾಡ್ ಸ್ವಯಂ ಸೇವಕ ಮಹಾದೇವ್ ಕೆ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಲಿಕೆ ಅಧಿಕಾರಿಗಳು, ಕೆಲವು ಪ್ರದೇಶಗಳಲ್ಲಿ ಜನರು ಅನುಮತಿ ನೀಡುತ್ತಿಲ್ಲ ಆದ್ದರಿಂದ ಸೂಕ್ತ ಸ್ಥಳಗಳನ್ನು ಗುರುತಿಸಲು ಕಷ್ಟ ಆಗುತ್ತಿದೆ. ಈಗಾಗಲೇ ಗುರುತಿಸಿರುವ ಹಲವು ಜಾಗಗಳು ಮುಖ್ಯ ರಸ್ತೆಯಿಂದ ದೂರದಲ್ಲಿದೆ ಎಂದು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.
ಅಲ್ಲದೇ, ಎನಿಮಲ್ ವೆಲ್ಫೇರ್ ಗ್ರೂಪ್ ಹಾಗೂ ಪ್ರತಿಯೊಬ್ಬ ಫೀಡರ್ಸ್ ಬಳಿ ಮಾತನಾಡಿದ ಬಳಿಕವೇ 70 ಜಾಗಗಳನ್ನು ಪಾಲಿಕೆ ವ್ಯಾಪ್ತಿಯಲ್ಲಿ ಗುರುತಿಸಲಾಗಿದೆ. ಕೆಲವು ಜಾಗಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಆದರೆ ಅವುಗಳ ನಿರ್ವಹಣೆ ಪ್ರತಿಯೊಬ್ಬರ ಕರ್ತವ್ಯ ಎಂದು ಬೆಂಗಳೂರು ಉತ್ತರ ಪಾಲಿಕೆ ಕಮಿಷನರ್ ಪೊಮ್ಮಲ ಸುನಿಲ್ ಕುಮಾರ್ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಚ್ಎಸ್ಆರ್ ಲೇಔಟ್ ಸ್ಥಳೀಯ ವಾಸಿಯಾಗಿರುವ ಆಶಾ, ಇದು ಒಂದು ಒಳ್ಳೆಯ ಯೋಜನೆ. ಆದರೆ ನಿಗದಿಪಡಿಸಿದ ಸ್ಥಾನದಲ್ಲೇ ಆಹಾರ ನೀಡಬೇಕು ಎನ್ನುವುದು ತಪ್ಪು ಎಂದಿದ್ದಾರೆ.
ನಾಯಿಗಳು ಆಹಾರ ಸೇವಿಸುವಾಗ ಜನರು ಹೆಚ್ಚು ಓಡಾಡುತ್ತಿದ್ದರೆ, ಟ್ರಾಫಿಕ್ ಹೆಚ್ಚಾಗಿದ್ದರೆ ಅವುಗಳಿಗೆ ಹೆದರಿಕೆ ಆಗುತ್ತದೆ. ಆದ್ದರಿಂದ ಜನಸಂದಣಿ ಇರೋ ರಸ್ತೆಗಳಲ್ಲಿ, ಕಸದ ತೊಟ್ಟಿಗಳ ಹತ್ತಿರ ಫೀಡಿಂಗ್ ಬೋರ್ಡ್ಸ್ ಗುರುತಿಸಿರುವುದು ಅಲ್ಲಿಯ ನಿವಾಸಿಗಳಿಗೆ ಹಾಗೂ ನಾಯಿಗಳಿಗೂ ಸುರಕ್ಷಿತ ಅಲ್ಲ ಎಂದು ಪ್ರಿಯಮ್ ಛೇತ್ರಿ ಹೇಳಿರುವುದಾಗಿ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
Bangalore [Bangalore],Bangalore,Karnataka













