Bannerghatta: ಬನ್ನೇರುಘಟ್ಟದ ಈ ಜಾತಿಯ ಪ್ರಾಣಿಗಳಿಗೆ ಸುಗಂಧದ ನಶೆ, ಏನಿದು ಹೊಸ ವೈಜ್ಞಾನಿಕ ಪ್ರಯೋಗ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಸುಗಂಧ ದ್ರವ್ಯ ಪ್ರಯೋಗ


Last Updated:

ಬನ್ನೇರುಘಟ್ಟ BBPಯಲ್ಲಿ ಕ್ಯಾಲ್ವಿನ್ ಕ್ಲೈನ್ ಅಬ್ಸೆಶನ್ ಫಾರ್ ಮೆನ್ ಪಫ್ರ್ಯೂಮ್ ಬಳಸಿ ಸಿಂಹ, ಹುಲಿ, ಚಿರತೆಗಳಿಗೆ ವಾಸನೆ ಆಧಾರಿತ ಆಟಿಕೆ ಪ್ರಯೋಗ ಯಶಸ್ವಿ, ಇತರ ಮೃಗಾಲಯಗಳಿಗೂ ಯೋಜನೆ.

ಸುಗಂಧ ದ್ರವ್ಯ ಪ್ರಯೋಗ
ಸುಗಂಧ ದ್ರವ್ಯ ಪ್ರಯೋಗ

ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ (BBP) ಇದೀಗ ವಿಚಿತ್ರ ಮತ್ತು ಕುತೂಹಲಕಾರಿ ಪ್ರಯೋಗವೊಂದು ನಡೆದಿದೆ. ನೀವು ಬಳಸುವ ಸಾಮಾನ್ಯ ಪುರುಷರ ಪಫ್ರ್ಯೂಮ್, ಬನ್ನೇರುಘಟ್ಟದ (Bannerghatta) ಬೃಹತ್ ಬೆಕ್ಕಿನ (Cat) ಜಾತಿಯ ಪ್ರಾಣಿಗಳಿಗೆ (Animals) (ಸಿಂಹ, ಹುಲಿ, ಚಿರತೆ) ಅಚ್ಚುಮೆಚ್ಚಿನ ಆಟಿಕೆಯಾಗಿದೆ ಎಂದರೆ ನೀವು ನಂಬಲೇಬೇಕು.

ಪಫ್ರ್ಯೂಮ್‍ಗೆ ಮರುಳಾದ ಕಾಡುಪ್ರಾಣಿಗಳು

ಸಾಮಾನ್ಯವಾಗಿ ಮೃಗಾಲಯಗಳಲ್ಲಿ ಆಹಾರ ಅಥವಾ ದೈಹಿಕ ವ್ಯಾಯಾಮಕ್ಕಾಗಿ ವಿವಿಧ ವಸ್ತುಗಳನ್ನು ಬಳಸುವುದು ಸಹಜ. ಆದರೆ, ಇದೇ ಮೊದಲ ಬಾರಿಗೆ ಭಾರತದ ಮೃಗಾಲಯವೊಂದರಲ್ಲಿ ವಾಸನೆ ಆಧಾರಿತ ಹೊಸ ಪ್ರಯೋಗಕ್ಕೆ ಚಾಲನೆ ನೀಡಲಾಗಿದೆ. ಪ್ರಸಿದ್ಧ ಕಂಪನಿಯಾದ ‘ಕ್ಯಾಲ್ವಿನ್ ಕ್ಲೈನ್’ನ ‘ಅಬ್ಸೆಶನ್ ಫಾರ್ ಮೆನ್’ ಪಫ್ರ್ಯೂಮ್ ಅನ್ನು ಬಟ್ಟೆಯ ತುಂಡುಗಳ ಮೇಲೆ ಸಿಂಪಡಿಸಿ ಪ್ರಾಣಿಗಳ ಆವರಣದಲ್ಲಿ ಇಡಲಾಗಿತ್ತು. ಇದನ್ನು ಕಂಡು ಪ್ರಾಣಿಗಳು ತೋರಿದ ಪ್ರತಿಕ್ರಿಯೆ ಅಧಿಕಾರಿಗಳನ್ನೇ ದಂಗುಬಡಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವೆಬ್‍ಸೈಟ್ ವರದಿ ಮಾಡಿದೆ.
ಇದರ ಹಿಂದಿನ ಸೈನ್ಸ್ ಏನು?

ಈ ಪಫ್ರ್ಯೂಮ್‍ನಲ್ಲಿ ಸಿವೆಟೋನ್ ಎಂಬ ಸಂಯುಕ್ತವಿದ್ದು, ಇದು ಸಿವೆಟ್ ಬೆಕ್ಕುಗಳ ವಾಸನೆಯನ್ನು ಹೋಲುತ್ತದೆ. ಬಿಗ್ ಕ್ಯಾಟ್ಸ್ ಅಂದರೆ ಸಿಂಹ, ಹುಲಿಗಳಿಗೆ ಈ ವಾಸನೆಯು ಹೊಸದಾಗಿ ಕಾಣದೆ, ತಮ್ಮ ಪರಿಸರದಲ್ಲಿನ ನೈಸರ್ಗಿಕ ಸಂಕೇತದಂತೆ ಭಾಸವಾಗುತ್ತದೆ. ಇದರಿಂದಾಗಿ ಆ ಪ್ರಾಣಿಗಳು ಆ ವಸ್ತುವನ್ನು ಆಘ್ರಾಣಿಸಲು, ವಾಸನೆ ಗುರುತಿಸಲು ಮತ್ತು ದೀರ್ಘಕಾಲ ಅನ್ವೇಷಣೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿತವಾಗುತ್ತವೆ ಎಂದು ಬಿಬಿಪಿ ಕಾರ್ಯನಿರ್ವಾಹಕ ನಿರ್ದೇಶಕ ಎವಿ ಸೂರ್ಯ ಸೇನ್ ತಿಳಿಸಿದ್ದಾರೆ.
ಪ್ರಯೋಗ ಸಕ್ಸಸ್, ಮುಂದೇನು?

ಸಾಮಾನ್ಯ ಆಟಿಕೆಗಳಿಗಿಂತಲೂ ಈ ಪಫ್ರ್ಯೂಮ್‍ಗೆ ಪ್ರಾಣಿಗಳು ಹೆಚ್ಚು ಆಸಕ್ತಿ ತೋರಿಸಿದ್ದು, ಸುಮಾರು 15 ರಿಂದ 20 ನಿಮಿಷಗಳ ಕಾಲ ಆ ಬಟ್ಟೆಗಳೊಂದಿಗೆ ಸಮಯ ಕಳೆದಿವೆ. ಇದು ಪ್ರಾಣಿಗಳ ನೈಸರ್ಗಿಕ ವರ್ತನೆಗಳನ್ನು ಉತ್ತೇಜಿಸಲು ಮತ್ತು ಅವುಗಳನ್ನು ಮಾನಸಿಕವಾಗಿ ಕ್ರಿಯಾಶೀಲವಾಗಿಡಲು ಉತ್ತಮ ದಾರಿಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಯಶಸ್ವಿ ಪ್ರಯೋಗದ ನಂತರ, ಭಾರತದ ಇತರ ಮೃಗಾಲಯಗಳಲ್ಲೂ ಇಂತಹ ವಾಸನೆ ಆಧಾರಿತ ಕಾರ್ಯಕ್ರಮಗಳನ್ನು ಜಾರಿಗೆ ತರುವ ಸಾಧ್ಯತೆಗಳಿವೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed