Bail Trailer: ಶಿವಣ್ಣನ ‘ಬೇಲ್’ ಟ್ರೈಲರ್ ಬಿಡುಗಡೆ; ಖಾಕಿ ತೊಟ್ಟು ಖಡಕ್ ಅವತಾರದಲ್ಲಿ ಹ್ಯಾಟ್ರಿಕ್ ಹೀರೋ! | | ACTPnews

ಶಿವಣ್ಣನ 'ಬೇಲ್' ಚಿತ್ರದ ಖಡಕ್ ಡೈಲಾಗ್ ಔಟ್; ಕೇಳಿದ್ರೆ ಮೈರೋಮಾಂಚನ.!


Last Updated:

ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್‌ಕುಮಾರ್ (Dr. Shivarajkumar) ಅಭಿನಯದ ಬಹುನಿರೀಕ್ಷಿತ ಬೇಲ್ (Bail) ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ.

ಶಿವಣ್ಣನ 'ಬೇಲ್' ಚಿತ್ರದ ಖಡಕ್ ಡೈಲಾಗ್ ಔಟ್; ಕೇಳಿದ್ರೆ ಮೈರೋಮಾಂಚನ.!
ಶಿವಣ್ಣನ ‘ಬೇಲ್’ ಚಿತ್ರದ ಖಡಕ್ ಡೈಲಾಗ್ ಔಟ್; ಕೇಳಿದ್ರೆ ಮೈರೋಮಾಂಚನ.!

ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್‌ಕುಮಾರ್ (Dr. Shivarajkumar) ಅಭಿನಯದ ಬಹುನಿರೀಕ್ಷಿತ ಬೇಲ್ (Bail) ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಹಾಡುಗಳು ಹಾಗೂ ಪೋಸ್ಟರ್‌ಗಳ ಮೂಲಕ ಈಗಾಗಲೇ ಸಿನಿಪ್ರಿಯರ ಗಮನ ಸೆಳೆದಿದ್ದ ಈ ಸಿನಿಮಾ, ಟ್ರೈಲರ್ ಮೂಲಕ ಮತ್ತಷ್ಟು ಕುತೂಹಲ ಮೂಡಿಸಿದೆ. ಪವನ್ ಒಡೆಯರ್ ನಿರ್ದೇಶನದ ಈ ಚಿತ್ರದಲ್ಲಿ ಶಿವಣ್ಣ ಕಾಣಿಸಿಕೊಂಡಿರುವ ವಿಭಿನ್ನ ಗೆಟಪ್ ಇದೀಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

ಬೇಲ್ ಚಿತ್ರದ ಟ್ರೈಲರ್‌ನಲ್ಲಿ ಶಿವರಾಜ್‌ಕುಮಾರ್ ಪಾತ್ರದ ಬಗ್ಗೆ ಹಲವು ಸುಳಿವುಗಳು ಸಿಗುತ್ತವೆ. ಟ್ರೈಲರ್‌ನಲ್ಲಿ ಶಿವಣ್ಣನನ್ನು ವಯಸ್ಸಾದ ವ್ಯಕ್ತಿಯ ರೀತಿಯಲ್ಲಿ ತೋರಿಸಲಾಗಿದ್ದು, ಅವರ ಗೆಟಪ್ ಚಿತ್ರದ ಕಥೆಯ ಬಗ್ಗೆ ಕುತೂಹಲ ಹೆಚ್ಚಿಸಿದೆ. ನಿವೃತ್ತ ಅಧಿಕಾರಿಯ ಪಾತ್ರದಲ್ಲಿ ಶಿವಣ್ಣ ನಟಿಸುತ್ತಿರುವ ಸಾಧ್ಯತೆಯ ಸುಳಿವು ಕೂಡ ಟ್ರೈಲರ್‌ನಲ್ಲಿ ಸಿಗುತ್ತದೆ. ಹೀಗಾಗಿ ಈ ಪಾತ್ರದಲ್ಲಿ ಶಿವಣ್ಣ ಯಾವ ರೀತಿಯ ಅಭಿನಯ ನೀಡಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ.

ಪವನ್ ಒಡೆಯರ್ ನಿರ್ದೇಶನ

ಬೇಲ್ ಸಿನಿಮಾವನ್ನು ಪವನ್ ಒಡೆಯರ್ ನಿರ್ದೇಶಿಸಿದ್ದಾರೆ. ಸಿನಿಮಾ ಘೋಷಣೆಯಾದ ಬಳಿಕ ಚಿತ್ರದ ಹಾಡುಗಳು ಮತ್ತು ಪೋಸ್ಟರ್‌ಗಳು ಸಿನಿಪ್ರಿಯರಲ್ಲಿ ನಿರೀಕ್ಷೆ ಮೂಡಿಸಿದ್ದವು. ಇದೀಗ ಬಿಡುಗಡೆಯಾಗಿರುವ ಟ್ರೈಲರ್ ಕಥೆಯ ಬಗ್ಗೆ ಒಂದಷ್ಟು ಸುಳಿವು ನೀಡಿದೆ.

ಒಂದೇ ಪರದೆ ಮೇಲೆ ಶಿವಣ್ಣ, ಜಯರಾಮ್, ಸಾಯಿಕುಮಾರ್

ಬೇಲ್ ಸಿನಿಮಾದ ಮತ್ತೊಂದು ವಿಶೇಷತೆ ಎಂದರೆ ಪ್ರಮುಖ ನಟರಾದ ಶಿವರಾಜ್‌ಕುಮಾರ್, ಜಯರಾಮ್ ಮತ್ತು ಸಾಯಿಕುಮಾರ್ ಒಂದೇ ಚಿತ್ರದಲ್ಲಿ ಕಾಣಿಸಿಕೊಂಡಿರುವುದು. ಟ್ರೈಲರ್‌ನಲ್ಲಿ ಈ ಮೂವರು ಒಟ್ಟಿಗೆ ಕಾಣಿಸಿಕೊಂಡಿದ್ದು, ದೊಡ್ಡ ಪರದೆಯಲ್ಲಿ ದಿಗ್ಗಜ ನಟರ ಕಾಂಬಿನೇಷನ್ ನೋಡಲು ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ.

ನಟ ಲೂಸ್ ಮಾದ ಯೋಗಿ ಕೂಡ ಬೇಲ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯೋಗಿ ರೆಡ್ಡಿ ಎನ್ನುವ ಪಾತ್ರದಲ್ಲಿ ಅವರು ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಂಡಿರುವುದು ಟ್ರೈಲರ್‌ನಲ್ಲಿ ಗಮನ ಸೆಳೆಯುತ್ತದೆ.

ಇದನ್ನೂ ಓದಿ: Deepika Padukone: ಮೊದಲು ಲಕ್ಷ್ಮಿ, ಈಗ ಸರಸ್ವತಿಯೂ ಬಂದಳು! ದೀಪಿಕಾ-ರಣವೀರ್​ಗೆ ಸ್ಪೆಷಲ್ ವಿಶ್

ದಿಯಾ ಹಲವು ಚಿತ್ರಗಳ ಮೂಲಕ ಗಮನ ಸೆಳೆದಿರುವ ದೀಕ್ಷಿತ್ ಶೆಟ್ಟಿ ಕೂಡ ಬೇಲ್ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ನಟ ದೀಕ್ಷಿತ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಸಂಜನಾ ದೀಕ್ಷಿತ್ ಅವರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್‌ನಲ್ಲಿ ಇವರ ಪಾತ್ರಗಳಿಗೂ ಒಂದಷ್ಟು ಜಾಗ ನೀಡಲಾಗಿದ್ದು, ಕಥೆಯೊಂದಿಗೆ ಇವರ ಪಾತ್ರಗಳು ಹೇಗೆ ಬೆಸೆದುಕೊಂಡಿವೆ ಎಂಬುದು ಕುತೂಹಲ ಮೂಡಿಸಿದೆ.

ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ಬೇಲ್ ಸಿನಿಮಾ ಇದೇ ಅಕ್ಟೋಬರ್ 2ರಂದು ತೆರೆಗೆ ಬರಲು ಸಜ್ಜಾಗಿದೆ. ಶಿವರಾಜ್‌ಕುಮಾರ್ ವಿಭಿನ್ನ ಗೆಟಪ್, ಪವನ್ ಒಡೆಯರ್ ನಿರ್ದೇಶನ, ಜಯರಾಮ್ ಮತ್ತು ಸಾಯಿಕುಮಾರ್ ಅವರಂತಹ ಹಿರಿಯ ನಟರ ಕಾಂಬಿನೇಷನ್ ಹಾಗೂ ಲೂಸ್ ಮಾದ ಯೋಗಿಯ ನೆಗೆಟಿವ್ ಪಾತ್ರ ಸಿನಿಮಾದ ಪ್ರಮುಖ ಆಕರ್ಷಣೆಗಳಾಗಿವೆ. ಟ್ರೈಲರ್ ಬಿಡುಗಡೆಯೊಂದಿಗೆ ಬೇಲ್ ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿದ್ದು, ಅಕ್ಟೋಬರ್ 2ರಂದು ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports