Bad Manners: ‘ರುದ್ರ’ ಭಯಂಕರ ‘ಬ್ಯಾಡ್‌ಮ್ಯಾನರ್ಸ್‌’! ಹೇಗಿದೆ ಗೊತ್ತಾ ಅಂಬಿ ಪುತ್ರನ ಅಭಿನಯ? | Abhishek Ambareesh Acted Bad Manners Movie Review Story | Movie Reviews (ಚಿತ್ರ ವಿಮರ್ಶೆಗಳು) | ACTPnews

ಬ್ಯಾಡ್‌ಮ್ಯಾನರ್ಸ್‌ನಲ್ಲಿ ರುದ್ರನ ರುದ್ರಾವತಾರ; ಅಂಬಿ ಪುತ್ರನ ಅದ್ಭುತ ಅಭಿನಯ!


Last Updated:

ಸಹಜ ಅಭಿನಯದ ಮೂಲಕವೇ ಅಭಿಷೇಕ್ ಅಂಬರೀಶ್ ಇಲ್ಲಿ ರುದ್ರ ಅನ್ನುವ ಪಾತ್ರವನ್ನ ಜೀವಿಸಿದ್ದಾರೆ. ಅದರಲ್ಲಿಯೇ ಅಬ್ಬರಿಸಿದ್ದಾರೆ. ಎಲ್ಲೂ ಓವರ್ ಅನಿಸೋದಿಲ್ಲ. ಇನ್ನೆಲ್ಲೂ ಬೋರ್ ಹೊಡೆಯೋದಿಲ್ಲ.

ಬ್ಯಾಡ್‌ಮ್ಯಾನರ್ಸ್‌ನಲ್ಲಿ ರುದ್ರನ ರುದ್ರಾವತಾರ; ಅಂಬಿ ಪುತ್ರನ ಅದ್ಭುತ ಅಭಿನಯ!
ಬ್ಯಾಡ್‌ಮ್ಯಾನರ್ಸ್‌ನಲ್ಲಿ ರುದ್ರನ ರುದ್ರಾವತಾರ; ಅಂಬಿ ಪುತ್ರನ ಅದ್ಭುತ ಅಭಿನಯ!

ಮೊದಲ ದೃಶ್ಯದಲ್ಲಿ ಅಭಿಷೇಕ್ ಅಂಬರೀಶ್ (Abhishek Ambareesh) ಸ್ಕೋರ್ ಮಾಡಿದ್ದಾರೆ. ಚಿತ್ರದ ಬಗ್ಗೆ ತಿಳಿದುಕೊಂಡ ಫ್ಯಾನ್ಸ್ ಥಿಯೇಟರ್‌ ಹೊರಗಡೇನೆ ಖುಷಿ ಹಂಚಿಕೊಂಡಿದ್ದಾರೆ. ಈ ಒಂದು ಮಾತನ್ನ ನಂಬಿಕೊಂಡು ಒಳಗೆ ಹೋಗುವವರಿಗೆ ಮೋಸ ಆಗೋದಿಲ್ಲ. ಅಭಿಷೇಕ್ ಅಂಬರೀಶ್ ಫ್ಯಾನ್ಸ್ (Abhishek Fans) ನಂಬಿಕೆ ಉಳಿಸಿಕೊಂಡಿದ್ದಾರೆ. ಬ್ಯಾಡ್‌ ಮ್ಯಾನರ್ಸ್ (Bad Manners) ಸಿನಿಮಾ ನೋಡಿ ಹೊರ ಬರೋ ಪ್ರತಿ ಪ್ರೇಕ್ಷಕರ ಒಂದೇ ಮಾತನ್ನ ಹೇಳ್ತಾರೆ. ಅಭಿಷೇಕ್ ಅಂಬರೀಶ್ ಅಬ್ಬರಿಸಿದ್ದಾರೆ. ಅಭಿಷೇಕ್ ಸೂಪರ್ ನೋಡಿ. ಹೀಗೆ ಅಭಿಷೇಕ್ ಅಂಬರೀಶ್ 2ನೇ ಸಿನಿಮಾದಲ್ಲಿಯೆ ತಮ್ಮ ಅದ್ಭುತ ಪ್ರತಿಭೆಯನ್ನ ಹೊರಗೆಡವಿದ್ದಾರೆ. ಒಂದೇ ಒಂದು ಸೀನ್‌ನಲ್ಲಿಯೇ ವಿವಿಧ ಭಾವಾಭಿವ್ಯಕ್ತಿ ಇಲ್ಲಿ ವಂಡರ್ ಅನಿಸುತ್ತದೆ. 2 ನೇ ಸಿನಿಮಾದಲ್ಲಿಯೇ ಇಷ್ಟೊಂದು ಅದ್ಭುತ ಅಭಿನಯ ಅನಿಸುತ್ತದೆ. ಅಭಿಷೇಕ್ ಮೂಲಕ ಅಂಬರೀಶ್ ಬೆಳ್ಳಿತೆರೆ ಮೇಲೆ ಬಂದಿದ್ದಾರೆ ಅನಿಸುತ್ತಿದೆ.

ರುದ್ರ ಪಾತ್ರವನ್ನ ಜೀವಿಸಿದ ಅಭಿಷೇಕ್ ಅಂಬರೀಶ್

ಅಭಿಷೇಕ್ ಅಂಬರೀಸ್ ಒಳಗೆ ಅಪ್ಪ ಅಂಬರೀಶ್ ಇದ್ದಾರೆ. ಆ ಒಂದು ವಿಷಯ ಇಡೀ ಸಿನಿಮಾದಲ್ಲಿ ಎಲ್ಲರಿಗೂ ತಿಳಿಯುತ್ತಿದೆ. ಸಹಜ ಅಭಿನಯದ ಮೂಲಕವೇ ಅಭಿಷೇಕ್ ಅಂಬರೀಶ್ ಇಲ್ಲಿ ರುದ್ರ ಅನ್ನುವ ಪಾತ್ರವನ್ನ ಜೀವಿಸಿದ್ದಾರೆ. ಅದರಲ್ಲಿಯೇ ಅಬ್ಬರಿಸಿದ್ದಾರೆ. ಎಲ್ಲೂ ಓವರ್ ಅನಿಸೋದಿಲ್ಲ. ಇನ್ನೆಲ್ಲೂ ಬೋರ್ ಹೊಡೆಯೋದಿಲ್ಲ. ಯಾವುದು ಇಲ್ಲಿ ಅತಿ ಅನಿಸೋದಿಲ್ಲ. ಇನ್ಯಾವುದೂ ಇಲ್ಲಿ ಭೀಬತ್ಸ ಅನಿಸೋದೇ ಇಲ್ಲ ನೋಡಿ.

Abhishek Ambareesh Acted Bad Manners Movie Review Story

ಪಿಸ್ತೂಲ್ ಮೇಕಿಂಗ್ ಊರಲ್ಲಿ ಪಿಸ್ತೂಲ್ ಲಗೋರಿ ಆಟ

ಕಂಟ್ರಿ ಪಿಸ್ತೂಲ್ ಜಾಲದ ಕಥೆಯಲ್ಲಿ ಅಭಿ ರುದ್ರಾವತಾರ

ಬ್ಯಾಡ್‌ ಮ್ಯಾನರ್ಸ್ ಸಿನಿಮಾದಲ್ಲಿ ಕಂಟ್ರಿ ಪಿಸ್ತೂಲ್ ಕಥೆ ಇದೆ. ಇದರ ಸುತ್ತ ಕುತೂಹಲಕಾರಿ ಅದ್ಭುತ ಓಟವನ್ನ ಕಟ್ಟಿಕೊಡಲಾಗಿದೆ. ಮೊದಲ ದೃಶ್ಯದಲ್ಲಿ ಏನೇನೋ ಮಾತುಗಳು ಅನಿಸಿ ಬಿಡುತ್ತದೆ. ಅಭಿ ಇಷ್ಟು ದೊಡ್ಡ ಮಾತುಗಳನ್ನ ಹೇಳಿದ್ದಾರಲ್ಲ ಅನ್ನೋ ಪ್ರಶ್ನೆ ಕೂಡ ಬರುತ್ತದೆ. ಆದರೆ ಇಲ್ಲಿ ಮಾತುಗಳಿಗಿಂತಲೂ ಅಭಿಷೇಕ್ ಭಾವಾವೇಷದ ಅಭಿನಯ ಗಮನ ಸೆಳೆದು ಬಿಡುತ್ತದೆ.

ರುದ್ರನ ಪೋನ್ ರಿಂಗ್ ಟೋನ್‌ನಲ್ಲಿ ಚಕ್ರವ್ಯೂಹದ ಹಾಡು

ಅಭಿಷೇಕ್ ಅಂಬರೀಶ್ ಜೊತೆಗೆ ರೆಬಲ್ ಸ್ಟಾರ್ ಕೂಡ ಇದ್ದಾರೆ. ಹಾಗಂತ ಅಂಬರೀಶ್ ಸಿನಿಮಾ ದೃಶ್ಯಗಳೇನೂ ಇಲ್ಲಿ ಬರೋದಿಲ್ಲ. ಬದಲಾಗಿ ಚಕ್ರವ್ಯೂಹ ಸಿನಿಮಾದ ಹಾಡು ಇಲ್ಲಿ ಅಭಿಷೇಕ್ ಅಂಬರೀಶ್ ರಿಂಗ್ ಟೋನ್ ಆಗಿದೆ. ಒಂದು ರೀತಿ ಈ ಹಾಡು ಇಲ್ಲಿ ಅಂಬರೀಶ್ ಅವರನ್ನ ನೆನಪಿಸುತ್ತದೆ.

ಪಿಸ್ತೂಲ್ ಮೇಕಿಂಗ್ ಊರಲ್ಲಿ ಪಿಸ್ತೂಲ್ ಲಗೋರಿ ಆಟ

ಗೋಡಾ ಅನ್ನೋ ಒಂದು ಕಾಲ್ಪನಿಕ ಊರು ಇಲ್ಲಿದೆ. ಇಲ್ಲಿರೋ ಪ್ರತಿಯೊಬ್ಬರ ಕೈಯಲ್ಲೂ ಪಿಸ್ತೂಲ್ ಇರುತ್ತದೆ. ಆದರೆ ರುದ್ರನ ಎಂಟ್ರಿ ಇಲ್ಲಿ ಸೂಪರ್ ಆಗಿಯೇ ಇದೆ. ಇದಕ್ಕಾಗಿಯೇ ಕಂಟ್ರಿ ಪಿಸ್ತೂಲ್‌ಗಳಿಂದಲೇ ಇಲ್ಲಿ ಲಗೋರಿ ಆಟವನ್ನೂ ಇಡಲಾಗಿದೆ. ಇದು ಇಂಟ್ರಸ್ಟಿಂಗ್ ಆಗಿಯೇ ಇದೆ. ಅಷ್ಟೇ ಯುನಿಕ್ ಅನಿಸುತ್ತದೆ.

Abhishek Ambareesh Acted Bad Manners Movie Review Story

ಕಂಟ್ರಿ ಪಿಸ್ತೂಲ್ ಜಾಲದ ಕಥೆಯಲ್ಲಿ ಅಭಿ ರುದ್ರಾವತಾರ

ರಚಿತಾ ರಾಮ್ ಗಾಗಿ ಒಂದು ಹಾಡು ಒಂದಷ್ಟು ದೃಶ್ಯಗಳು

ರಚಿತಾ ರಾಮ್ ಪಾತ್ರ ಇಲ್ಲಿ ಸ್ಪೆಷಲ್ ಆಗಿಯೇ ಇದೆ. ಅಂಧರ ಶಾಲೆಯಲ್ಲಿರೋ ವೀಣಾ ಆಗಿಯೇ ಕಾಣಿಸಿಕೊಂಡಿದ್ದಾರೆ. ಅಭಿ ಮತ್ತು ರಚಿತಾ ರಾಮ್ ಜೋಡಿಯ ಒಂದು ಲವ್ಲಿ ಹಾಡು ವಿಭಿನ್ನವಾಗಿಯೇ ಇಲ್ಲಿ ಮೂಡಿ ಬಂದಿದೆ.ಇದರ ಹೊರತಾಗಿ ಇಲ್ಲಿ ಜಾಸ್ತಿ ಕೆಲಸ ಏನೂ ಇಲ್ಲ ಅನಿಸುತ್ತದೆ.

ಮಗೈ ಮತ್ತು ಫಿನಿಕ್ಸ್ ಎಂಬ ಖಳನಾಯಕರ ಅಬ್ಬರ

ಮಗೈ ಪಾತ್ರದಲ್ಲಿ ರೋಚಿತ್ ಅಬ್ಬರಿಸಿದ್ದಾರೆ. ಫಿನಿಕ್ಸ್ ರೋಲ್‌ನಲ್ಲಿ ತ್ರಿವಿಕ್ರಮ್ ಖದರ್ ಆಗಿಯೇ ಕಂಡಿದ್ದಾರೆ. ಟಗರು ಸಿನಿಮಾದ ಡಾಲಿ ಮತ್ತು ಚಿಟ್ಟೆ ರೀತಿಯಲ್ಲಿಯೇ ಜೋಡಿ ಜೋಡಿಯಾಗಿಯೇ ಇಲ್ಲಿ ಗಮನ ಸೆಳೆದಿದ್ದಾರೆ. ರುದ್ರನ ಎದುರು ಅಟ್ಟಹಾಸ ಮರೆಯೋ ಖಳನಾಯಕರಾಗಿಯೇ ಕಂಡಿದ್ದಾರೆ.

ಇದನ್ನೂ ಓದಿ:  Bigg Boss: ಜೈಲಿಂದ ತಪ್ಪಿಸಿ ಹೊರಬಂದ ವರ್ತೂರ್ ಸಂತೋಷ್

ಕಂಟ್ರಿ ಪಿಸ್ತೂಲ್ ಮೇಕಿಂಗ್ ಅನ್ನ ದುನಿಯಾ ಸೂರಿ ಇಲ್ಲಿ ತುಂಬಾ ಚೆನ್ನಾಗಿಯೇ ತೋರಿಸಿದ್ದಾರೆ. ಅಮ್ರಿ,ದುನಿಯಾ ಸೂರಿ, ಮಾಸ್ತಿ ಅವರ ಚಿತ್ರಕಥೆ ಇಂಟ್ರಸ್ಟಿಂಗ್ ಆಗಿಯೇ ಇದೆ. ಮಾತುಗಳೂ ಹೆವಿ ಆಗಿವೆ. ಚರಣ್ ರಾಜ್ ಅವರ ಸಂಗೀತ ಇಲ್ಲಿ ಮೋಡಿ ಮಾಡುತ್ತವೆ. ದುನಿಯಾ ಸೂರಿ ಇಲ್ಲಿ ಮತ್ತೊಂದಷ್ಟು ಹೊಸ ಕಲಾವಿದರನ್ನೂ ಇಲ್ಲಿ ಪರಿಚಯಿಸಿದ್ದಾರೆ.

ಅಂಬರೀಶ್ ಆಪ್ತ ಶ್ರೀನಿವಾಸ ತಲ್ವಾರ್ ತಾತಯ್ಯನಾಗಿ ನಟನೆ

ರೆಬಲ್ ಸ್ಟಾರ್ ಅಂಬರೀಶ್ ಆಪ್ತ ಶ್ರೀನಿವಾಸ್ ಈ ಚಿತ್ರದಲ್ಲಿ ನಟಿಸದ್ದಾರೆ. ತಲವಾರ್ ತಾತಯ್ಯನಾಗಿಯೇ ಇಲ್ಲಿ ಕಾಣಿಸಿಕೊಂಡಿದ್ದಾರೆ. ಅಭಿ ಜೊತೆಗೂ ಒಂದಷ್ಟು ಸೀನ್‌ನಲ್ಲೂ ಕಾಣಿಸಿಕೊಂಡಿದ್ದಾರೆ. ರುದ್ರನ ಅಮ್ಮನಾಗಿ ತಾರಾ ನಟಿಸಿದ್ದಾರೆ. ಇನ್ನುಳಿದಂತೆ ಇಡೀ ಸಿನಿಮಾ ಅಭಿಮಯವಾಗಿಯೇ ಇದೆ. ಆದರೆ ಈ ಚಿತ್ರವೂ ಪಾರ್ಟ್-2 ಬರೋ ಸಾಧ್ಯತೆ ಇದೆ. ಆ ಒಂದು ಹಿಂಟ್ ಈ ಚಿತ್ರದಲ್ಲಿ ಸೂರಿ ಬಿಟ್ಟಿದ್ದಾರೆ ಅಂತಲೇ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports