Last Updated:
ಅಯೋಗ್ಯ-2 ಚಿತ್ರಕ್ಕೆ ಕನ್ನಡ ಸ್ಟಾರ್ಸ್ ಸಪೋರ್ಟ್ ಮಾಡಿದ್ದಾರೆ. ಎಲ್ಲರೂ ಒಟ್ಟಿಗೆ ಬಂದು ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಅಂಬಿ ಪುತ್ರ ಅಭಿಷೇಕ್ ಅಂಬರೀಶ್ ಬಂದು ಹೃದಯದಿಂದ ವಿಶ್ ಮಾಡಿದ್ದಾರೆ. ಈ ಚಿತ್ರಕ್ಕೆ ಪ್ರಮೋಷನ್ ಅವಶ್ಯವೇ ಇಲ್ಲ ಅಂತಲೂ ಹೇಳಿದ್ದಾರೆ. ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ.
ಅಯೋಗ್ಯ-2 ಚಿತ್ರದ (Ayogya-2 Movie) ರಿಲೀಸ್ ಇನ್ನೇನು ಒಂದು ವಾರ ಇದೆ. ಅಷ್ಟರಲ್ಲಿ ಇಡೀ ತಂಡ ಒಂದು ಪ್ಲಾನ್ ಮಾಡಿದೆ. ಕನ್ನಡದ (Kannada) ಇತರ ಸ್ಟಾರ್‌ಗಳನ್ನ ಒಟ್ಟಿಗೆ ಸೇರಿಸುವ ಕೆಲಸ ಮಾಡಿದೆ. ಇಲ್ಲಿ ಬಂದವರು ಚಿತ್ರಕ್ಕೆ ಸಪೋರ್ಟ್ ಮಾಡಿದ್ದಾರೆ. ‘ಮಿಲ್ಕಿ ಬ್ಯೂಟಿ’ ಅನ್ನುವ ಹಾಡನ್ನ (Milky Beauty Song) ರಿಲೀಸ್ ಮಾಡಿದ್ದಾರೆ. ಚಿತ್ರದ ಹುಡುಗಿಯರ್ ಡೇಂಜರಸ್ ಅನ್ನೋ ಹಾಡಿಗೆ ವೇದಿಕೆ ಮೇಲೆ ಡ್ಯಾನ್ಸ್ ಮಾಡಿದ್ದಾರೆ. ಕನ್ನಡದ ಸ್ಟಾರ್ (Kannada Stars) ನಟರು ಹೀಗೆ ಪರಸ್ಪರ ಸಪೋರ್ಟ್ ಮಾಡಿದ್ರೆ ಅದೆಷ್ಟು ಚೆಂದ ಅನ್ನುವ ಮಾತು ಕೇಳಿ ಬರ್ತಿದೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.
ಅಯೋಗ್ಯನ ಅದ್ಧೂರಿ ಇವೆಂಟ್
ಡಾರ್ಲಿಂಗ್ ಕೃಷ್ಣ, ನಾಗಭೂಷಣ್, ಪ್ರಮೋದ್ ಪಂಜು, ಅಭಿಷೇಕ್ ಅಂಬರೀಶ್ ಸೇರಿದಂತೆ ಚಿತ್ರದ ನಟ ರವಿಶಂಕರ್, ದಡಿಯಾ ಗಿರಿ, ಶಿವರಾಜ್ ಕೆ.ಆರ್.ಪೇಟೆ ಹೀಗೆ ಎಲ್ಲರೂ ಬಂದಿದ್ದಾರೆ.
ಈ ಚಿತ್ರದ ಮಿಲ್ಕಿ ಬ್ಯೂಟಿ ಹಾಡಿನಲ್ಲಿ ಕುಣಿದ ಪ್ರಜ್ಞಾ ಕೂಡ ಈ ಇವೆಂಟ್ ಅಲ್ಲಿದ್ದರು. ಇವರ ಹಾಡನ್ನ ನೋಡಿದ ಸ್ಟಾರ್ ನಟರು ಮೆಚ್ಚಿಕೊಂಡಿರೋದು ಇದೆ.
ಅಯೋಗ್ಯ-2 ಚಿತ್ರದ ಈ ಇವೆಂಟ್ ಅಲ್ಲಿ ಅಭಿಷೇಕ್ ಅಂಬರೀಶ್ ಹೈಲೈಟ್ ಅಂತ ಹೇಳಬ್ಬೇಕು. ಕಾರಣ, ತುಂಬಾ ದಿನಗಳ ಬಳಿಕವೇ ಅಭಿಷೇಕ್ ಅಂಬರೀಶ್ ಸಿನಿಮಾ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರಮೋಷನ್ ಅಗತ್ಯವೇ ಇಲ್ಲ ಎಂದ ಅಭಿಷೇಕ್ ಅಂಬರೀಶ್
ಇಡೀ ಚಿತ್ರ ತಂಡಕ್ಕೆ ವಿಶ್ ಮಾಡಿದ್ದಾರೆ. ದುಡ್ಡು ಹಾಕಿರೋ ನಿರ್ಮಾಪಕರಿಗೂ ಅದು ವಾಪಾಸ್ ಬರಲಿ ಅಂತೂ ಹಾರೈಸಿದ್ದಾರೆ. ಈ ಚಿತ್ರಕ್ಕೆ ಪ್ರಮೋಷನ್ ಅಗತ್ಯವೇ ಇಲ್ಲ. ಕಾರಣ, ಅಯೋಗ್ಯ ಒನ್ ಈಗಾಗಲೇ ಬಂದು ಹಿಟ್ ಆಗಿದೆ. ಇದೀಗ ಅಯೋಗ್ಯ-2 ಬರ್ತಿದೆ. ಹಾಗಾಗಿಯೇ ಇದಕ್ಕೆ ಪ್ರಮೋಷನ್ ಅವಶ್ಯ ಇಲ್ಲ ಅಂತಲೇ ಹೇಳಿಕೊಂಡಿದ್ದಾರೆ.
ಅಯೋಗ್ಯ-2 ಚಿತ್ರ ಇನ್ನು ಒಂದು ವಾರದಲ್ಲಿ ರಿಲೀಸ್ ಆಗುತ್ತಿದೆ. ಆಗಸ್ಟ್-7 ರಂದು ಈ ಚಿತ್ರ ತೆರೆಗೆ ತರೋಕೆ ಪ್ಲಾನ್ ಮಾಡಿದ್ದಾರೆ. ರಾಜ್ಯದೆಲ್ಲೆಡೆ ಇದು ಬಿಡುಗಡೆ ಆಗುತ್ತಿದೆ.
ಚಿತ್ರದ ಪ್ರಚಾರವು ಜೋರಾಗಿಯೇ ಇದೆ. ಉತ್ತರ ಕರ್ನಾಟಕ ಸೇರಿದಂತೆ ಎಲ್ಲೆಡೆ ಚಿತ್ರ ಪ್ರಚಾರ ಮಾಡಲಾಗಿದೆ. ಪ್ರೀ-ರಿಲೀಸ್ ಇವೆಂಟ್ ಮೂಲಕ ಮತ್ತಷ್ಟು ಪ್ರಚಾರವನ್ನು ಮಾಡಲಾಗಿದೆ ಅಮತ ಹೇಳಬಹುದು.
Bangalore [Bangalore],Bangalore,Karnataka
Aug 02, 2026 10:30 AM IST














