Ayodhya Scam Case: ರಾಮ ಮಂದಿರ ದೇಣಿಗೆ ಹಗರಣದಲ್ಲಿ ಎಸ್‌ಐಟಿಗೆ ಸಿಕ್ತು ಮಹತ್ವದ ಸಾಕ್ಷ್ಯ! ‘ಅಚ್ಚರಿಯ ವ್ಯಕ್ತಿ’ಯ ಪಾತ್ರದ ಬಗ್ಗೆ ಶಂಕೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

Ayodhya Ram Mandir Scam News: ಹಣ ವರ್ಗಾವಣೆಯಾದ ಬಗ್ಗೆ ಸಿಸಿಟಿವಿ ದೃಶ್ಯಗಳ ಮೂಲಕ SIT ಪುರಾವೆಗಳನ್ನು ಕಂಡುಕೊಂಡಿದ್ದು, ಕೆಲವು ಸಿಸಿಟಿವಿ ದೃಶ್ಯಗಳನ್ನು ಸಹ ಅಳಿಸಲಾಗಿದೆ ಎಂದು ಶಂಕಿಸಲಾಗಿದೆ. SIT ನಿರ್ಲಕ್ಷ್ಯ ಮತ್ತು ಪಿತೂರಿ ಎರಡನ್ನೂ ತನಿಖೆ ಮಾಡುತ್ತಿದೆ.

News18
News18

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ರಾಮ ಮಂದಿರಕ್ಕೆ (Ayodhya Scam Case) ಬಂದ ದೇಣಿಗೆ ಹಣಗಳನ್ನು ದೋಚಿ ಹಗರಣ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ನಿರ್ಣಾಯಕ ಪುರಾವೆಗಳನ್ನು ಕಂಡುಕೊಂಡಿದೆ.

ವಿಶೇಷಾ ತನಿಖಾ ತಂಡ (SIT) ಭಾನುವಾರ ಅಥವಾ ಸೋಮವಾರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ತನ್ನ ಪ್ರಾಥಮಿಕ ತನಿಖಾ ವರದಿಯನ್ನು ಸಲ್ಲಿಸುವ ನಿರೀಕ್ಷೆಯಿದೆ. ಈ ಇಡೀ ಪ್ರಕರಣದಲ್ಲಿ ಅನಿಲ್ ಮಿಶ್ರಾ ಮತ್ತು ಗೋಪಾಲ್ ರಾವ್ ಅವರ ಪಾತ್ರವು ಅನುಮಾನಾಸ್ಪದವಾಗಿದೆ ಎಂದು SIT ಕಂಡುಹಿಡಿದಿದೆ ಎಂದು ನ್ಯೂಸ್ 18 ಹಿಂದಿ ವರದಿ ಮಾಡಿದೆ.

ಅನಿಲ್ ಮಿಶ್ರಾ ಮತ್ತು ಗೋಪಾಲ್ ರಾವ್ ಪಾತ್ರ?

ಟಿನ್ನು ಯಾದವ್, ಕೆಲವು ಗರನಾ ಕಾರ್ಮಿಕರು ಮತ್ತು ಬ್ಯಾಂಕ್ ಉದ್ಯೋಗಿಗಳ ವಿರುದ್ಧವೂ ಎಫ್‌ಐಆರ್ ದಾಖಲಿಸುವ ಸಾಧ್ಯತೆ ಇದೆ. ಟ್ರಸ್ಟ್ ಅಧಿಕಾರಿಗಳು ಅಯೋಧ್ಯೆಯಿಂದ ಹೊರ ಹೋಗುವುದನ್ನು ಎಸ್‌ಐಟಿ ನಿಷೇಧಿಸಿದೆ. ಟ್ರಸ್ಟ್ ಅಧಿಕಾರಿ ಅನಿಲ್ ಮಿಶ್ರಾ ಮತ್ತು ನಿರ್ಮಾಣ ಸಹಾಯಕ ಗೋಪಾಲ್ ರಾವ್ ಅವರ ಪಾತ್ರದ ಬಗ್ಗೆಯೂ ಎಸ್‌ಐಟಿ ಅನುಮಾನ ವ್ಯಕ್ತಪಡಿಸಿದೆ. ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಕೂಡ ಪರಿಶೀಲನೆಯಲ್ಲಿದ್ದು, ಆರು ದಿನಗಳಲ್ಲಿ ಎಸ್‌ಐಟಿ ಸುಮಾರು 150 ಜನರನ್ನು ಪ್ರಶ್ನಿಸಿದೆ. ಟ್ರಸ್ಟ್‌ನ 3 ಅಧಿಕಾರಿಗಳು ಸೇರಿದಂತೆ 20-25 ಜನರ ನಿರ್ಲಕ್ಷ್ಯ ಅಥವಾ ಒಳಗೊಳ್ಳುವಿಕೆ ಬೆಳಕಿಗೆ ಬಂದಿದೆ. ಎಸ್‌ಬಿಐನ 6 ಉದ್ಯೋಗಿಗಳು ಮತ್ತು ಟಿಸಿಎಸ್‌ನ 6 ಉದ್ಯೋಗಿಗಳನ್ನು ಪ್ರಶ್ನಿಸಲಾಗಿದೆ ಎಂದು ತಿಳಿದು ಬಂದಿದೆ.

ಎಸ್‌ಐಟಿ ವರದಿಯಲ್ಲಿ ಏನಿರಬಹುದು?

ಎಸ್‌ಐಟಿ ವರದಿ ಬಂದ ನಂತರ, ದೇವಾಲಯದ ಟ್ರಸ್ಟ್‌ನ ನಿರ್ವಹಣೆಯಲ್ಲಿ ದೊಡ್ಡ ಬದಲಾವಣೆಗಳಾಗಬಹುದು. ಇದಲ್ಲದೆ, ಎಸ್‌ಐಟಿ ಟ್ರಸ್ಟ್ ಅನ್ನು ಹೊಸದಾಗಿ ರಚಿಸಲು, ಪಾರದರ್ಶಕತೆಗಾಗಿ ಕಾಶಿ ವಿಶ್ವನಾಥ ಮಾದರಿಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಯನ್ನು ನೇಮಿಸಲು, ಟ್ರಸ್ಟ್‌ನ 3 ಸರ್ಕಾರಿ ಪದನಿಮಿತ್ತ ಸದಸ್ಯರಿಗೆ ದೇಣಿಗೆಗಳನ್ನು ಎಣಿಸುವ ಜವಾಬ್ದಾರಿಯನ್ನು ಹೆಚ್ಚಿಸಲು ಸೂಚಿಸಬಹುದು.

ದೇಣಿಗೆಗಳ ಲೆಕ್ಕಪರಿಶೋಧನೆಯನ್ನು ನಿಗದಿತ ಸಮಯದೊಳಗೆ ಮಾಡಬೇಕು ಮತ್ತು ಅದರ ವರದಿಯನ್ನು ಸರ್ಕಾರಕ್ಕೆ ನೀಡಬೇಕು, ನೌಕರರ ನೇಮಕಾತಿಯನ್ನು ಪಾರದರ್ಶಕಗೊಳಿಸಬೇಕು, ಶಿಫಾರಸಿನ ಆಧಾರದ ಮೇಲೆ ನೇಮಕಾತಿ ಮಾಡಬಾರದು, ಬ್ಯಾಂಕುಗಳು ತಮ್ಮ ನಿಯಮಿತ ಉದ್ಯೋಗಿಗಳನ್ನು ಎಣಿಕೆ ಕೆಲಸದಲ್ಲಿ ತೊಡಗಿಸಿಕೊಳ್ಳಬಹುದು ಮತ್ತು ಮೇಲ್ವಿಚಾರಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬಹುದು ಎಂದು ಹೇಳಲಾಗ್ತಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports