Asian Games 2026: ವಿನೇಶ್ ಫೋಗಟ್​​ ಏಷ್ಯನ್ ಗೇಮ್ಸ್ ಕನಸು ಭಗ್ನ! ಕಿರಿಯ ಕುಸ್ತಿಪಟು ಎದುರು ಮುಖಭಂಗ ಅನುಭವಿಸಿದ ಮೂರು ಬಾರಿಯ ಒಲಿಂಪಿಯನ್ | ಕ್ರೀಡಾ ಸುದ್ದಿ | ACTPnews

ವಿನೇಶ್ ಫೋಗಟ್


Last Updated:

ಪ್ಯಾರಿಸ್ ಒಲಿಂಪಿಕ್ಸ್ ನಂತರ ಕುಸ್ತಿಗೆ ವಿದಾಯ ಹೇಳಿ ಏಷ್ಯನ್ ಏಷ್ಯನ್ ಗೇಮ್ಸ್ ಮೂಲಕ ಮತ್ತೆ ಅಖಾಡಕ್ಕೆ ಮರಳಲು ಬಯಸಿದ್ದ ವಿನೇಶ್ ಫೋಗಟ್ ಅವರ ಕನಸು ಭಗ್ನಗೊಂಡಿದೆ.

ವಿನೇಶ್ ಫೋಗಟ್
ವಿನೇಶ್ ಫೋಗಟ್

ಪ್ಯಾರಿಸ್ ಒಲಿಂಪಿಕ್ಸ್ (Paris Olympics) ನಂತರ ವಿನೇಶ್ ಫೋಗಟ್ (Vinesh Phogat) ಕುಸ್ತಿ (Wrestling) ಗೆ ವಿದಾಯ (Retirement) ಹೇಳಿದ್ದರು. ವಿದಾಯದ ಬಳಿಕ ವಿನೇಶ್ ಫೋಗಟ್ ಮತ್ತೆ ಏಷ್ಯನ್ ಗೇಮ್ಸ್ (Asian Games) ​​ನಲ್ಲಿ ಪುನರಾಗಮನ ಮಾಡುವ ಕನಸು (Dream) ಕಂಡಿದ್ದರು. ಆದರೆ, ಏಷ್ಯನ್ ಗೇಮ್ಸ್ ಮೂಲಕ ಮತ್ತೆ ಅಖಾಡಕ್ಕೆ ಮರಳಲು ಬಯಸಿದ್ದ ವಿನೇಶ್ ಫೋಗಟ್ ಕನಸು ಭಗ್ನಗೊಂಡಿದೆ. ವಿನೇಶ್ ಫೋಗಟ್ ಭಾರತೀಯ ಕುಸ್ತಿ ಒಕ್ಕೂಟ (WFI) ದೊಂದಿಗೆ ಹೋರಾಡಿ ನ್ಯಾಯಾಲಯದ ಅನುಮತಿಯೊಂದಿಗೆ ಏಷ್ಯನ್ ಗೇಮ್ಸ್ ಟ್ರಯಲ್ಸ್‌ನಲ್ಲಿ ಭಾಗವಹಿಸಿದರು. ಆದರೆ ವಿನೇಶ್ ಫೋಗಟ್ ಅನಿರೀಕ್ಷಿತವಾಗಿ ಸೋತರು.

ಏಷ್ಯನ್ ಗೇಮ್ಸ್​​ನಲ್ಲಿ ಭಾಗವಹಿಸಲು ವಿನೇಶ್ ಫೋಗಟ್ ಶನಿವಾರ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಟ್ರಯಲ್ಸ್‌ನಲ್ಲಿ ಭಾಗವಹಿಸಿದರು. ಮಹಿಳೆಯರ 53 ಕೆಜಿ ಟ್ರಯಲ್ಸ್‌ನ ಸೆಮಿಫೈನಲ್‌ನಲ್ಲಿ ವಿನೇಶ್ ಫೋಗಟ್ ಸೋತರು. ಮಹಿಳೆಯರ 53 ಕೆಜಿ ವಿಭಾಗದಲ್ಲಿ ವಿನೇಶ್ ಫೋಗಟ್ ಮೊದಲ ಎರಡು ಸುತ್ತುಗಳನ್ನು ಗೆದ್ದರು. ಆದರೆ ನಿರ್ಣಾಯಕ ಸೆಮಿಫೈನಲ್‌ನಲ್ಲಿ ಗೆಲುವು ಸಾಧಿಸುವಲ್ಲಿ ವಿಫಲರಾದರು. ಸೆಮಿಫೈನಲ್‌ನಲ್ಲಿ ಮೀನಾಕ್ಷಿ ಗೋಯತ್ ವಿರುದ್ಧ ವಿನೇಶ್ ಫೋಗಟ್ 4-6 ಅಂತರದಲ್ಲಿ ಸೋತು ಏಷ್ಯನ್ ಗೇಮ್ಸ್​ನಿಂದ ಹೊರಬಿದ್ದರು.

ಮೊದಲೆರಡು ಸುತ್ತುಗಳು ಹೇಗಿದ್ದವು?

ಕುಸ್ತಿ ಫೆಡರೇಶನ್ 50 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ನೀಡದ ಕಾರಣ ವಿನೇಶ್ ಫೋಗಟ್ 53 ಕೆಜಿ ವಿಭಾಗದಲ್ಲಿ ಅಖಾಡಕ್ಕೆ ಇಳಿದರು. ವಿನೇಶ್ ತಮ್ಮ ಮೊದಲ ಪಂದ್ಯದಲ್ಲಿ ಹರಿಯಾಣದ ಜ್ಯೋತಿ ಅವರನ್ನು 7-1 ಅಂತರದಿಂದ ಸೋಲಿಸಿದರು. ಅದೇ ಉತ್ಸಾಹದಿಂದ ವಿನೇಶ್ ಕ್ವಾರ್ಟರ್ ಫೈನಲ್‌ನಲ್ಲಿ ನಿಶಿಯನ್ನು 5-0 ಅಂತರದಿಂದ ಸೋಲಿಸಿದರು. ಸೆಮಿಫೈನಲ್‌ನಲ್ಲಿ ಮೀನಾಕ್ಷಿ ಗೋಯತ್ ಅವರನ್ನು ವಿನೇಶ್ ಎದುರಿಸಿದರು. ಅಲ್ಲಿ ಅವರು 6-4 ಅಂತರದಿಂದ ಸೋತರು.

ಫೈನಲ್‌ನಲ್ಲಿ ಗೆದ್ದಿದ್ದು ಯಾರು?

ಇದರೊಂದಿಗೆ, ಈ ವರ್ಷ ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಕುಸ್ತಿಯಾಡಲು ಬಯಸಿದ್ದ ವಿನೇಶ್ ನಿರಾಶೆಗೊಂಡರು. ಸೆಮಿಫೈನಲ್‌ನಲ್ಲಿನ ಸೋಲಿಗೆ ಪ್ರತಿಕ್ರಿಯಿಸಿದ ವಿನೇಶ್, “ನಾನು ಮತ್ತೆ ಬರುತ್ತೇನೆ” ಎಂದು ಹೇಳಿದರು. ಫೈನಲ್‌ನಲ್ಲಿ ಮೀನಾಕ್ಷಿ ಮತ್ತು ಆಂಟಿಮ್ ಪಂಗಲ್ ನಡುವೆ ಕಾದಾಟ ಜೋರಾಗಿತ್ತು. ಅಂತಿಮವಾಗಿ ಮೀನಾಕ್ಷಿ ಅವರನ್ನು 3-2 ಅಂತರದಿಂದ ಸೋಲಿಸುವ ಮೂಲಕ ಆಂಟಿಮ್ ಪಂಗಲ್ ಏಷ್ಯನ್ ಗೇಮ್ಸ್‌ನ 53 ಕೆಜಿ ವಿಭಾಗದಲ್ಲಿ ಆಯ್ಕೆಯಾದರು.

ಸುಪ್ರೀಂ ಕೋರ್ಟ್​ನಿಂದ ರಿಲೀಫ್ 

ಮೂರು ಬಾರಿ ಒಲಿಂಪಿಯನ್ ವಿನೇಶ್ ಫೋಗಟ್ ಆರಂಭದಲ್ಲಿ 57 ಕೆಜಿ ವಿಭಾಗದಲ್ಲಿ ಪುನರಾಗಮನ ಮಾಡಲು ತಯಾರಿ ನಡೆಸುತ್ತಿದ್ದರು. ಉತ್ತರ ಪ್ರದೇಶದ ಗೊಂಡಾದಲ್ಲಿ ನಡೆದ ಸೀನಿಯರ್ ಓಪನ್ ರ‍್ಯಾಂಕಿಂಗ್ ಟೂರ್ನಮೆಂಟ್‌ನಲ್ಲಿ ಭಾಗವಹಿಸಲು ಅವರು ನಿರ್ಧರಿಸಿದರು, ಆದರೆ WFI ಅಲ್ಲಿಯೂ ಅವರಿಗೆ ಅನುಮತಿ ನಿರಾಕರಿಸಿತು. ನಂತರ ಈ ಸಂಬಂಧ ಫೋಗಟ್ ಕಾನೂನು ಹೋರಾಟ ನಡೆಸಿದರು. ಅಂತಿಮವಾಗಿ ವಿನೇಶ್‌ಗೆ ಸುಪ್ರೀಂ ಕೋರ್ಟ್​ನಿಂದ ರಿಲೀಫ್ ಸಿಕ್ಕಿತು. ಇದರಿಂದ ಏಷ್ಯನ್ ಗೇಮ್ಸ್ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಸಾಧ್ಯವಾಯಿತು.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Asian Games 2026: ವಿನೇಶ್ ಫೋಗಟ್​​ ಏಷ್ಯನ್ ಗೇಮ್ಸ್ ಕನಸು ಭಗ್ನ! ಕಿರಿಯ ಕುಸ್ತಿಪಟು ಎದುರು ಮುಖಭಂಗ ಅನುಭವಿಸಿದ ಮೂರು ಬಾರಿಯ ಒಲಿಂಪಿಯನ್



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed