Asian Games 2026: ಮೊದಲ ಟಿ20ಐ ಶತಕ! ಸೆಮಿಫೈನಲ್​​ನಲ್ಲಿ ಲೇಡಿ ಸೆಹ್ವಾಗ್ ಅಬ್ಬರಕ್ಕೆ ಬಾಂಗ್ಲಾದೇಶ ಕಂಗಾಲು | ಕ್ರೀಡಾ ಸುದ್ದಿ | ACTPnews

ಶಫಾಲಿ ವರ್ಮಾ


Last Updated:

2026ರ ಏಷ್ಯನ್ ಗೇಮ್ಸ್ ಮಹಿಳಾ ಟಿ20 ಸೆಮಿಫೈನಲ್‌ನಲ್ಲಿ ಭಾರತದ ಓಪನರ್ ಶಫಾಲಿ ವರ್ಮಾ ಅದ್ಭುತವಾಗಿ ಆಡಿ ಇತಿಹಾಸ ಸೃಷ್ಟಿಸಿದರು. ಬಾಂಗ್ಲಾದೇಶದ ಬೌಲರ್‌ಗಳಿಗೆ ಬೆವರಿಳಿಸಿದ ಶಫಾಲಿ ವರ್ಮಾ ಅಜೇಯ ಶತಕ ಹೊಡೆದು ಎಲ್ಲರನ್ನೂ ಆಶ್ಚರ್ಯಪಡಿಸಿದರು.

ಶಫಾಲಿ ವರ್ಮಾ
ಶಫಾಲಿ ವರ್ಮಾ

ಜಪಾನ್‌(Japan)ನಲ್ಲಿ ನಡೆಯುತ್ತಿರುವ 2026 ಏಷ್ಯನ್ ಗೇಮ್ಸ್‌(Asian Games)ನಲ್ಲಿ ಭಾರತ(India)ದ ಮಹಿಳಾ ಕ್ರಿಕೆಟ್ (Cricket) ತಂಡದ ಓಪನರ್ ಶಫಾಲಿ ವರ್ಮಾ (Shafali Varma) ಹೊಸ ದಾಖಲೆ ಬರೆದಿದ್ದಾರೆ. ಬಾಂಗ್ಲಾದೇಶ (Bangladesh) ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಅವರು ಕೇವಲ 49 ಎಸೆತಗಳಲ್ಲಿ ತಮ್ಮ ಮೊದಲ ಅಂತಾರಾಷ್ಟ್ರೀಯ ಟಿ20 ಶತಕ (Century) ಬಾರಿಸಿದರು. ಮಹಿಳಾ ಏಷ್ಯನ್ ಗೇಮ್ಸ್ ಕ್ರಿಕೆಟ್ ಇತಿಹಾಸದಲ್ಲಿ ಶತಕ ಗಳಿಸಿದ ಮೊದಲ ಆಟಗಾರ್ತಿ ಇವರು. ಶತಕ ಪೂರೈಸಿದ ನಂತರ ಅವರು ಹೆಲ್ಮೆಟ್ ಸಂಭ್ರಮಾಚರಣೆ ಮಾಡಿದರು. ಈ ವೇಳೆ ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿದರು. 

ಶಫಾಲಿ ವರ್ಮಾ 2026ರ ಏಷ್ಯನ್ ಗೇಮ್ಸ್‌ನಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಅಭಿಮಾನಿಗಳ ಹೃದಯ ಗೆದ್ದರು. ಬಾಂಗ್ಲಾದೇಶ ವಿರುದ್ಧ ಸೆಮಿಫೈನಲ್‌ನಲ್ಲಿ ಅವರು ಶುರುವಿನಿಂದಲೇ ದೊಡ್ಡ ಹೊಡೆತಗಳನ್ನು ಹೊಡೆದು, ಕೊನೆಯ ಬಾಲ್‌ನಲ್ಲಿ ಶತಕ ಗಳಿಸಿದರು. ಈ ಇನ್ನಿಂಗ್ಸ್‌ನಲ್ಲಿ ಅವರು ಹೆಚ್ಚು ಸಿಕ್ಸ್‌ಗಳನ್ನು ಹೊಡೆದು ದಾಖಲೆ ಮಾಡಿದರು. ಅವರ ಉತ್ತಮ ಆಟದಿಂದ ಭಾರತ ತಂಡ 195 ರನ್ ಕಲೆ ಹಾಕಿತು.

ಮೊದಲ ಟಿ20ಐ ಶತಕ

ಭಾರತ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ಆಯ್ಕೆ ಮಾಡಿಕೊಂಡಿತು. ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಜೊತೆಯಾಗಿ 72 ರನ್ ಕಲೆ ಹಾಕಿ ತಂಡಕ್ಕೆ ಒಳ್ಳೆಯ ಆರಂಭ ಕೊಟ್ಟರು. ಸ್ಮೃತಿ 37 ರನ್‌ಗೆ ಔಟದರೆ, ಶಫಾಲಿ ಆಡುತ್ತಲೇ ಇದ್ದರು. ಹರ್ಮನ್‌ಪ್ರೀತ್ ಕೌರ್ ಅವರಿಗೆ ಒಳ್ಳೆಯ ಬೆಂಬಲ ನೀಡಿದರು.

ದಾಖಲೆಯ ಪಟ್ಟಿಗೆ ಶಫಾಲಿ 

ಶಫಾಲಿ ಶರ್ಮಾ ಸಿಡಿಸಿ ಶತಕವು ಭಾರತದ ಮಹಿಳಾ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಹೊಡೆದವರ ಪಟ್ಟಿಯನ್ನು ಬದಲಾಯಿಸಿತು. ಇದಕ್ಕೆ ಮುಂಚೆ ಸ್ಮೃತಿ ಮಂಧಾನ ಹಾಂಗ್ ಕಾಂಗ್ ವಿರುದ್ಧ 124 ರನ್ ಮತ್ತು ಇಂಗ್ಲೆಂಡ್ ವಿರುದ್ಧ 112 ರನ್ ಹೊಡೆದಿದ್ದರು. ನಾಯಕಿ ಹರ್ಮನ್‌ಪ್ರೀತ್ ಕೌರ್ ನ್ಯೂಜಿಲೆಂಡ್ ವಿರುದ್ಧ 103 ರನ್ ಗಳಿಸಿದ್ದರು. ಮಿಥಾಲಿ ರಾಜ್ ಮಲೇಷ್ಯಾ ವಿರುದ್ಧ 97 ರನ್ ಹೊಡೆದಿದ್ದರು.

ಸಿಕ್ಸರ್‌ಗಳ ಮೂಲಕ ಇತಿಹಾಸ

ಶಫಾಲಿ ವರ್ಮಾ ಈ ಇನ್ನಿಂಗ್ಸ್‌ನಲ್ಲಿ 9 ಸಿಕ್ಸ್ ಹೊಡೆದು ಇತಿಹಾಸದಲ್ಲಿ ತಮ್ಮ ಹೆಸರು ಬರೆಸಿಕೊಂಡಿದ್ದಾರೆ. ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 100 ಸಿಕ್ಸ್ ಹೊಡೆದ ಎರಡನೇ ಭಾರತೀಯ ಮಹಿಳಾ ಆಟಗಾರ್ತಿ ಆಗಿದ್ದಾರೆ. ಸ್ಮೃತಿ ಮಂಧಾನ ಅವರನ್ನು ಮೀರಿಸಿ ಭಾರತದ ಪರ ಟಿ20ಐಗಳಲ್ಲಿ ಅತಿ ಹೆಚ್ಚು ಸಿಕ್ಸ್ ಹೊಡೆದ ಆಟಗಾರ್ತಿ ಆಗಿದ್ದಾರೆ. ಸ್ಮೃತಿ ತಮ್ಮ ವೃತ್ತಿಜೀವನದಲ್ಲಿ 100 ಸಿಕ್ಸ್ ಹೊಡೆದಿದ್ದಾರೆ. ಶಫಾಲಿ 104 ಸಿಕ್ಸ್ ಹೊಡೆದು ಮೊದಲ ಸ್ಥಾನಕ್ಕೆ ಬಂದಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed