Last Updated:
ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯಿಂದ ವರುಣ್ ಚಕ್ರವರ್ತಿ ಗಾಯದ ಸಮಸ್ಯೆಗೆ ತುತ್ತಾಗಿರುವುದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಇದು ಕೇವಲ ಈ ಸರಣಿಗೆ ಮಾತ್ರವಲ್ಲ 2026ರ ಏಷ್ಯನ್ ಗೇಮ್ಸ್ ಟೂರ್ನಿಯಿಂದ ಅವರನ್ನು ಬಹುತೇಕ ಹೊರಗಿಡುವಂತೆ ಮಾಡಿದೆ.
ಭಾರತ ತಂಡ (Team India) ಟಿ20 ತಂಡಕ್ಕೆ ಪ್ರತಿಭಾವಂತ ಸ್ಪಿನ್ನರ್ಗಳ (Spinners) ಅಭಾವ ಎದುರಿಸುತ್ತಿರುವ ಕಠಿಣ ಸಂದರ್ಭದಲ್ಲೇ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ (Varun Chakravarthy) ಗಾಯದ ಸಮಸ್ಯೆಗೆ ತುತ್ತಾಗಿರುವುದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಇದು ಕೇವಲ ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ಮಾತ್ರವಲ್ಲ 2026ರ ಏಷ್ಯನ್ ಗೇಮ್ಸ್ (Asia Games) ಟೂರ್ನಿಯಿಂದ ಅವರನ್ನು ಬಹುತೇಕ ಹೊರಗಿಡುವಂತೆ ಮಾಡಿದೆ. ಜಪಾನ್ನ ಪಿಚ್ಗಳು ಹಾಗೂ ಅಲ್ಲಿನ ಪಂದ್ಯಗಳ ಒತ್ತಡದ ಪರಿಸ್ಥಿತಿಗೆ ವರುಣ್ ಚಕ್ರವರ್ತಿ ಅತ್ಯಂತ ಸೂಕ್ತ ಹಾಗೂ ವಿಕೆಟ್ ಪಡೆಯುವ ಆಕ್ರಮಣಕಾರಿ ಬೌಲರ್ ಆಗಿದ್ದರು. ಭಾರತದಲ್ಲಿ ಸದ್ಯ ಲಭ್ಯವಿರುವ ಅತ್ಯುತ್ತಮ ಮತ್ತು ವಿಭಿನ್ನ ಶೈಲಿಯ ಸ್ಪಿನ್ನರ್ಗಳಲ್ಲಿ ಅವರೂ ಒಬ್ಬರಾಗಿದ್ದರಿಂದ, ಇದೀಗ ಅವರನ್ನು ಬದಲಾಯಿಸುವುದು ಟೀಮ್ ಇಂಡಿಯಾಗೆ ಅಷ್ಟು ಸುಲಭವಲ್ಲ.














