Last Updated:
ಚಿಕ್ಕಮಗಳೂರು ಜಿಲ್ಲೆಯ ಸುಪ್ರಿಯಾ ಸಿಂದಿಗೆರೆ ಬಸವರಾಜು ಹೈಜಂಪ್ ವಿಭಾಗದಲ್ಲಿ ಏಷ್ಯನ್ ಗೇಮ್ಸ್ಗೆ ಆಯ್ಕೆಯಾಗಿದ್ದಾರೆ. ಇವರು ಭಾರತವನ್ನು ಪ್ರತಿನಿಧಿಸಲಿದ್ದು, ತಮ್ಮ ಅತ್ಯುತ್ತಮ ಜಿಗಿತದ ಮೂಲಕ ದೇಶದ ಗಮನ ಸೆಳೆಯಲು ಸಜ್ಜಾಗಿದ್ದಾರೆ.
ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಕ್ರೀಡಾ ಕ್ಷೇತ್ರಕ್ಕೆ ಮತ್ತೊಂದು ಸುವರ್ಣ ಗರಿ ಮೂಡಿದೆ. ಹೈಜಂಪ್ (ಎತ್ತರ ಜಿಗಿತ) ಕ್ರೀಡೆಯಲ್ಲಿ (Sports) ಅದ್ಭುತ ಪ್ರದರ್ಶನ ನೀಡುತ್ತಿರುವ ಕಾಫಿನಾಡಿನ ಹೆಮ್ಮೆಯ ಕುವರಿ ಸುಪ್ರಿಯಾ ಸಿಂದಿಗೆರೆ ಬಸವರಾಜು, ಪ್ರತಿಷ್ಠಿತ ಏಷ್ಯನ್ ಗೇಮ್ಸ್ (Asian Games) ಅಂಗಳಕ್ಕೆ ಕಾಲಿಟ್ಟಿದ್ದಾರೆ. ಅಥ್ಲೆಟಿಕ್ಸ್ ನ ಹೈಜಂಪ್ ವಿಭಾಗದಲ್ಲಿ ಭಾರತವನ್ನು ಅಧಿಕೃತವಾಗಿ ಪ್ರತಿನಿಧಿಸಲಿರುವ ಸುಪ್ರಿಯಾ, ತಮ್ಮ ಅದ್ಭುತ ಜಿಗಿತದ ಮೂಲಕ ಇಡೀ ದೇಶದ ಗಮನ ಸೆಳೆಯಲು ಸಂಪೂರ್ಣವಾಗಿ ಸಜ್ಜಾಗಿದ್ದಾರೆ.
ಕ್ರೀಡಾ ಪಯಣದಲ್ಲಿ ಆರೋಗ್ಯದ ಗಂಭೀರ ಸಮಸ್ಯೆಗಳು ಕಾಡಿದರೂ, ಧೃತಿಗೆಡದೆ ಫಿನಿಕ್ಸ್ ಪಕ್ಷಿಯಂತೆ ಮತ್ತೆ ಎದ್ದು ನಿಂತು ಕಠಿಣ ಅಭ್ಯಾಸ ನಡೆಸಿದರು. ಬೆಂಗಳೂರಿನಲ್ಲಿ ಅಭ್ಯಾಸ ಮಾಡಲು ಆರ್ಥಿಕ ಅಡಚಣೆ ಎದುರಾದಾಗ ಚಿಕ್ಕಮಗಳೂರಿನ ‘ಲೈನ್ ಫೀಡ್ಸ್’ ಮಾಲೀಕರಾದ ಕಿಶೋರ್ ಕುಮಾರ್ ಅವರು ಬೆನ್ನೆಲುಬಾಗಿ ನಿಂತು ಆರ್ಥಿಕ ನೆರವು ನೀಡಿದರು.














