Last Updated:
ತುಳುನಾಡ ಚಾರ್ಲಿ ಅರವಿಂದ್ ಬೋಳಾರ್ ಕನ್ನಡ ಸಿನಿಮಾ ಒಪ್ಪಿದ್ದಾರೆ. ಹಾಸ್ಯದ ಮೂಲಕವೇ ಜನರ ಮನದಲ್ಲಿರೋ ಅರವಿಂದ್, ಇದೀಗ ಹಲ್ಕಾ ಡಾನ್ ಚಿತ್ರ ಮಾಡುತ್ತಿದ್ದಾರೆ. ಈ ಚಿತ್ರದ ಅಧಿಕೃತ ಮಾಹಿತಿ ಇಲ್ಲಿದೆ ಓದಿ.
ಹಲ್ಕಾ ಡಾನ್ ಚಿತ್ರದ (Halka Don Movie) ಹೊಸ ಸುದ್ದಿ ಹೊರ ಬಂದಿದೆ. ಈ ಚಿತ್ರದಲ್ಲಿ ಹಲವು ಪಾತ್ರಗಳು ಇವೆ. ಇದರ ನಡುವೆ ಇದೀಗ ಈ ಚಿತ್ರಕ್ಕೆ ಮತ್ತೊಬ್ಬ ನಟನ ಆಯ್ಕೆಯ ನ್ಯೂಸ್ ರಿವೀಲ್ (News Reveal) ಆಗಿದೆ. ಅಧಿಕೃತವಾಗಿಯೇ ಈ ಸುದ್ದಿ ಹೊರ ಬಂದಿದೆ. ಚಿತ್ರದ ನಿರ್ಮಾಪಕ ಕೆ.ಪಿ.ಶ್ರೀಕಾಂತ್ (KP Shrikanth) ಇದನ್ನ ಹಂಚಿಕೊಂಡಿದ್ದಾರೆ. ಇವರ ಈ ಚಿತ್ರದಲ್ಲಿ ತುಳುನಾಡ ಚಾರ್ಲಿ ಅಂತಲೇ ಕರೆಸಿಕೊಳ್ಳುವ ಅರವಿಂದ್ ಬೋಳಾರ್ (Aravind Bolar) ಈ ಚಿತ್ರಕ್ಕೆ ಬಂದಿದ್ದಾರೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.
ಅರವಿಂದ್ ಬೋಳಾರ್ ಆನ್ ಬೋರ್ಡ್ ನ್ಯೂಸ್ ಔಟ್
ಆದರೆ, ಈ ಚಿತ್ರಕ್ಕೆ ಉಪಶೀರ್ಷಿಕೆ ಕೂಡ ಇದೆ. ಇದು ಹಲ್ಕಾ ಡಾನ್ ಸಾಯಿಕುಮಾರ್ ಫ್ಯಾನ್ ಅಂತಲೆ ಇದೆ. ಸಾಯಿ ಕುಮಾರ್ ಅವರ ಹೆಸರು ಇದೆ ಅಂದ್ಮೇಲೆ ಅವರು ಇಲ್ಲವೆ ಅಂತ ಕೇಳಬಹುದು. ಇವರೂ ಈ ಚಿತ್ರದಲ್ಲಿದ್ದಾರೆ.
ಅರವಿಂದ್ ಬೋಳಾರ್ ಯಾರು ಅಂತ ತುಳುನಾಡ ಜನಕ್ಕೆ ಹೆಚ್ಚು ಹೇಳ್ಬೇಕಿಲ್ಲ. ತುಳುನಾಡಿನ ಚಾರ್ಲಿ ಅಂತಲೇ ಇವರು ಕರೆಸಿಕೊಳ್ಳುತ್ತಾರೆ. ರಂಗಭೂಮಿ ಮತ್ತು ಸಿನಿಮಾರಂಗ ಎರಡರಲ್ಲೂ ಇವರು ಗುರುತಿಸಿಕೊಂಡಿದ್ದಾರೆ.
ಇವರು ಹಾಸ್ಯದ ಮೂಲಕವೇ ಎಲ್ಲರ ಹೃದಯ ಕದ್ದಿದ್ದಾರೆ. ತುಳು ಅಷ್ಟೆ ಅಲ್ಲ. ಕನ್ನಡ ಸಿನಿಮಾ ಕೂಡ ಮಾಡಿದ್ದಾರೆ. ಹಾಗೆ ಅದಕ್ಕೆ ತಾಜಾ ಎಕ್ಸಾಂಪಲ್ ಬೇರೆ ಏನೋ ಅಲ್ಲ. ಈ ಹಲ್ಕಾ ಡಾನ್ ಚಿತ್ರವೇ ಆಗಿದೆ.
ಅರವಿಂದ್ ಬೋಳಾರ್ ಪಾತ್ರದ ಹೆಸರು ಏನು ಅನ್ನೋದು ರಿವೀಲ್ ಆಗಿಲ್ಲ. ಆದರೆ, ಹಲ್ಕಾ ಡಾನ್ ಚಿತ್ರದಲ್ಲಿ ಇವರ ಲುಕ್ ಹೇಗಿದೆ ಅನ್ನೋದನ್ನ ಚಿತ್ರದ ಪೋಸ್ಟರ್ ರಿವೀಲ್ ಮಾಡಿದೆ.
ಹಲ್ಕಾ ಡಾನ್ ಚಿತ್ರದಲ್ಲಿ ತುಳುನಾಡ ಚಾರ್ಲಿ
ಇದರಲ್ಲಿ ಇವರು ವೈಟ್ ಆ್ಯಂಡ್ ವೈಟ್ ಕಾಸ್ಟೂಮ್ ತೊಟ್ಟಿದ್ದಾರೆ. ಕೊರಳಲ್ಲಿ ಶಾಲ್ ಇದೆ. ಲುಕ್ ಅಲ್ಲಿ ನಗು ಇದೆ. ಎಲ್ಲವೂ ಇರೋ ಈ ಪೋಸ್ಟರ್ ಮೂಲಕ ಹಲ್ಕಾ ಡಾನ್ ಚಿತ್ರದಲ್ಲಿ ಅರವಿಂದ್ ಬೋಳಾರ್ ಇದ್ದಾರೆ ಅನ್ನೋದು ಗೊತ್ತಾಗಿದೆ.
ಈ ಚಿತ್ರವನ್ನ ಛಲಾ ಬರೆದಿದ್ದಾರೆ. ಇವರೇ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಶಿವಣ್ಣನ ಆತ್ಮೀಯ ಗೆಳೆಯ ಮತ್ತು ಅಭಿಮಾನಿ ಹಾಗೂ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. ವಿ.ಹರಿಕೃಷ್ಣ ಅವರ ಸಂಗೀತ ಈ ಚಿತ್ರಕ್ಕೆ ಇದೆ.
ಈ ಚಿತ್ರದಲ್ಲಿ ಬಹು ಭಾಷಾ ನಟ ಜಾನ್ ವಿಜಯ್ ಕೂಡ ಇದ್ದಾರೆ. ಇವರು ಈ ಹಿಂದೆ ಗಜಕೇಸರಿ ಚಿತ್ರದಲ್ಲೂ ನಟಿಸಿದ್ದಾರೆ. ಪೃಥ್ವಿ ಚಿತ್ರದಲ್ಲೂ ಜಾನ್ ವಿಜಯ್ ನಟಿಸಿದ್ದಾರೆ. ಇದೀಗ ಹಲ್ಕಾ ಡಾನ್ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಇನ್ನುಳಿದಂತೆ ಈ ಚಿತ್ರದ ಹೊಸ ಎಂಟ್ರಿ ತುಳುನಾಡ ಚಾರ್ಲಿ ಅರವಿಂದ್ ಬೋಳಾರ್ ಬಂದಿದ್ದಾರೆ ಅಂತ ಹೇಳಬಹುದು.
Bangalore [Bangalore],Bangalore,Karnataka













