Last Updated:
Anushka Sharma: ನಟಿ ಅನುಷ್ಕಾ ಶರ್ಮಾ ಅವರ ಕೆಲವು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಆರ್‌ಸಿಬಿ ಗೆಲುವಿನ ಹಿಂದಿನ ನಿಜವಾದ ಅದೃಷ್ಟ ಅನುಷ್ಕಾ ಶರ್ಮಾ ಅವರ ನಿರಂತರ ಪ್ರಾರ್ಥನೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ನಿನ್ನೆಯಷ್ಟೇ ಧರ್ಮಶಾಲಾದ HPCA ಸ್ಟೇಡಿಯಂನಲ್ಲಿ RCB vs GT ಕ್ವಾಲಿಫೈಯರ್ ಪಂದ್ಯ (Qualifier Match) ನಡೆಯಿತು. ಜೊತೆಗೆ ಆರ್‌ಸಿಬಿ ಪಂದ್ಯವನ್ನು ಗೆದ್ದು ಫೈನಲ್‌ಗೆ ಪ್ರವೇಶಿಸಿದೆ. ಈ ವೇಳೆ ನಿನ್ನೆ ಮ್ಯಾಚ್‌ಗೆ ಸಂಬಂಧಪಟ್ಟ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಹೀಗಿರುವಾಗ ಮದುವೆ ಬಳಿಕ ನಟನೆಯಿಂದ ದೂರ ಸರಿದಿರುವ ಅನುಷ್ಕಾ ಶರ್ಮಾ (Anushka Sharma), ಪತಿ ವಿರಾಟ್ ಕೊಹ್ಲಿ (Virat Kohli) ಮ್ಯಾಚ್ ನೋಡಲು ಬಂದೇ ಬರುತ್ತಾರೆ. ಜೊತೆಗೆ ಮ್ಯಾಚ್ ನೋಡಲು ಬಂದಾಗಲೆಲ್ಲ ಅನುಷ್ಕಾ ತಮ್ಮ ಫ್ಯಾಶನ್ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಆದ್ರೆ ಈ ಬಾರಿ ಸ್ವಲ್ಪ ವಿಭಿನ್ನವಾಗಿ ಜನ ಮನಸ್ಸು ಗೆದ್ದಿದ್ದಾರೆ ಅನುಷ್ಕಾ.
ನಟಿ ಅನುಷ್ಕಾ ಶರ್ಮಾ ಅವರ ಕೆಲವು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಆರ್‌ಸಿಬಿ ಗೆಲುವಿನ ಹಿಂದಿನ ನಿಜವಾದ ಅದೃಷ್ಟ ಅನುಷ್ಕಾ ಶರ್ಮಾ ಅವರ ನಿರಂತರ ಪ್ರಾರ್ಥನೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಹಾಗಾದ್ರೆ ಏನಪ್ಪಾ ವಿಚಾರ ಅಂತೀರಾ ಹಾಗಾದ್ರೆ ಕಂಪ್ಲೀಟ್ ಸ್ಟೋರಿ ಓದಿ.
ಪಂದ್ಯದ ಸಮಯದಲ್ಲಿ ಕ್ರೀಡಾಂಗಣದ ಸ್ಟ್ಯಾಂಡ್‌ಗಳಲ್ಲಿ ಕುಳಿತಿದ್ದ ಅನುಷ್ಕಾ ಶರ್ಮಾ ತಮ್ಮ ಬೆರಳಿಗೆ ಸಣ್ಣ ಡಿಜಿಟಲ್ ಉಂಗುರವನ್ನು ಧರಿಸಿರುವುದು ಕಂಡುಬಂದಿತು. ಹಲವರು ಇದು ಸಾಮಾನ್ಯ ಉಂಗುರ ಎಂದು ಭಾವಿಸಿದ್ದರು, ಆದರೆ ನಿಜವಾದ ಕಥೆಯನ್ನು ತಿಳಿದ ಬಳಿಕ ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ.
ಪಂದ್ಯದ ವೇಳೆ ಅನುಷ್ಕಾ ಶರ್ಮಾ ಭಕ್ತಿಯಿಂದ ಕಣ್ಣು ಮುಚ್ಚಿ ಆ ಡಿಜಿಟಲ್ ರಿಂಗ್ ಸಹಾಯದಿಂದ ನಿರಂತರವಾಗಿ ಮಂತ್ರಗಳನ್ನು ಪಠಿಸುತ್ತಿದ್ದರು. ಪಂದ್ಯದ ಪ್ರತಿಯೊಂದು ನಿರ್ಣಾಯಕ ಓವರ್‌ನಲ್ಲಿ ಒತ್ತಡವನ್ನು ಸಹಿಸಿಕೊಂಡು ಅವರು ದೇವರನ್ನು ಪ್ರಾರ್ಥಿಸಿದರು.
ಆರ್‌ಸಿಬಿ ತಂಡ 92 ರನ್‌ಗಳ ಭಾರಿ ಅಂತರದಿಂದ ಗೆದ್ದಾಗ ಅನುಷ್ಕಾ ಶರ್ಮಾ ಅವರ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ಅವರು ಗಾಳಿಯಲ್ಲಿ ಕೈಗಳನ್ನು ಮೇಲಕ್ಕೆತ್ತಿ ಸೆಲೆಬ್ರೇಟ್ ಮಾಡುವ ದೃಶ್ಯಗಳು ಟ್ರೆಂಡಿಂಗ್‌ನಲ್ಲಿವೆ.
ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು, “ನಿನ್ನೆಯ ಪಂದ್ಯದಲ್ಲಿ ಆರ್‌ಸಿಬಿ ಗೆಲುವಿಗೆ ವಿರಾಟ್ ಕೊಹ್ಲಿ ಅವರ ಆಟವೇ ಕಾರಣ… ಕ್ರೀಡಾಂಗಣದಲ್ಲಿ ಕುಳಿತಿದ್ದ ಅನುಷ್ಕಾ ಶರ್ಮಾ ಅವರ ಪ್ರಾರ್ಥನೆಯೂ ಕಾರಣ” ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಡಿಜಿಟಲ್ ಯುಗದಲ್ಲಿ ಸಂಪ್ರದಾಯವನ್ನು ಮಿಶ್ರಣ ಮಾಡುವುದು, ತಂಡಕ್ಕಾಗಿ ಅನುಷ್ಕಾ ಶರ್ಮಾ ಅವರ ಪ್ರಾರ್ಥನೆ ಮತ್ತು ಆರ್‌ಸಿಬಿ ಗೆಲುವು ಈಗ ಕ್ರಿಕೆಟ್ ವಲಯಗಳಲ್ಲಿ ಬಹಳಷ್ಟು ಚರ್ಚೆಯ ವಿಷಯವಾಗಿದೆ.
Bangalore [Bangalore],Bangalore,Karnataka
















