Amitabh Bachchan: ಅಮಿತಾಭ್ ಮನೆಮುಂದೆ ಕುಸಿದು ಬಿದ್ದ ಅಭಿಮಾನಿ! ಆಗಿದ್ದೇನು? ಶಾಕಿಂಗ್ ವಿಡಿಯೋ ವೈರಲ್ | Fan faints outside Amitabh Bachchan s Mumbai home Jalsa | | ACTPnews

ಅಮಿತಾಭ್ ಬಚ್ಚನ್


Last Updated:

Amitabh Bachchan: ಅಮಿತಾಭ್ ಮನೆ ಮುಂದೆ ಅಭಿಮಾನಿಯೊಬ್ಬ ಕುಸಿದು ಬಿದ್ದಿದ್ದು, ನೆರೆದಿದ್ದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ಈಗ ಹೇಗಿದ್ದಾರೆ?

ಅಮಿತಾಭ್ ಬಚ್ಚನ್
ಅಮಿತಾಭ್ ಬಚ್ಚನ್

ಬಾಲಿವುಡ್ನ ಆ್ಯಂಗ್ರಿ ಯಂಗ್ ಮ್ಯಾನ್ ಅಮಿತಾಭ್ ಬಚ್ಚನ್ (Amitabh Bachchan) ದಶಕಗಳಿಂದ ಇಂಡಸ್ಟ್ರಿಗೆ ಹಲವು ಬ್ಲಾಕ್ಬಸ್ಟರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಸದ್ಯ ನಿತೀಶ್ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾದಲ್ಲಿ (Ramayana Movie) ಅಮಿತಾಭ್ ಬಚ್ಚನ್ ನಟಿಸುತ್ತಿದ್ದಾರೆ.  ಅವರು ಪ್ರತಿ ಭಾನುವಾರ ತಮ್ಮ ಜಲ್ಸಾ ಬಂಗಲೆಯ (Jalsa Home) ಆವರಣದಲ್ಲಿ ಅಭಿಮಾನಿಗಳನ್ನು ಭೇಟಿಮಾಡುವ ಪದ್ಧತಿಯನ್ನು ಹಲವು ವರ್ಷಗಳಿಂದ ರೂಢಿಯಲ್ಲಿಟ್ಟುಕೊಂಡಿದ್ದಾರೆ.

ಆವರಣದಲ್ಲಿ ಅಭಿಮಾನಿಗಳನ್ನು ಭೇಟಿಮಾಡುವ ಪದ್ಧತಿಯನ್ನು ಹಲವು ವರ್ಷಗಳಿಂದ ರೂಢಿಯಲ್ಲಿಟ್ಟುಕೊಂಡಿದ್ದಾರೆ.

ಅದರಂತೆಯೇ ಈ ಬಾರಿಯೂ ಇತ್ತೀಚೆಗೆ ಭಾನುವಾರದಂದು ಬಹಳಷ್ಟು ಅಭಿಮಾನಿಗಳು ನಟನನ್ನು ನೋಡೋಕೆ ಅಂತ ಜಲ್ಸಾ ಮುಂದೆ ಜಮಾಯಿಸಿದ್ದರು. ಆ ವೇಳೆ ಅಭಿಮಾನಿಯೊಬ್ಬ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ ಎಂದು ದ ಫ್ರೀ ಪ್ರೆಸ್ ಜರ್ನಲ್ ವರದಿ ಮಾಡಿದೆ.

ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರು ತಮ್ಮ ಮುಂಬೈನ ಜಲ್ಸಾ ಬಂಗಲೆಯ ಹೊರಗಿನ ಆವರಣದಲ್ಲಿ ಪ್ರತಿ ರವಿವಾರ ಅಭಿಮಾನಿಗಳನ್ನು ಭೇಟಿ ಮಾಡುತ್ತಾರೆ. ಅವರನ್ನು ನೋಡೋಕೆ ಅಂತ ಬರೋ ನೂರಾರು ಅಭಿಮಾನಿಗಳಿಗೆ ತಮ್ಮ ಮನೆಯ ಬಾಲ್ಕನಿಯಿಂದಲೇ ಕೈಬೀಸುತ್ತಾರೆ. ಈ ಒಂದು ಅಭ್ಯಾಸವನ್ನು ಹಲವು ವರ್ಷಗಳಿಂದ ನಡೆಸುತ್ತಿದ್ದಾರೆ.

ಹೀಗಿರುವಾಗ ರವಿವಾರ ಈ ಫ್ಯಾನ್ಸ್ ಮೀಟ್ ವೇಳೆ ಅತಿಯಾದ ಜನಸಂದಣಿಯಿಂದಾಗಿ ಒಬ್ಬ ಅಭಿಮಾನಿ ತಲೆ ಸುತ್ತಿ ಬಿದ್ದಿದ್ದು ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಬಿಗ್ ಬಿ ನೋಡಲು ಬಂದ ಅಭಿವಾನಿ ಪ್ರಜ್ಞೆ ತಪ್ಪಿದ್ದು ಹೇಗೆ?

24 ಮೇ ಭಾನುವಾರದಂದು ಮುಂಬೈನ ಅಮಿತಾಭ್ ಬಚ್ಚನ್ ತಮ್ಮ ಜಲ್ಸಾ ಬಂಗಲೆಯ ಆವರಣದ ಹೊರಗೆ ಅಭಿಮಾನಿಗಳನ್ನು ಮಾತನಾಡಿಸಲು ಬಂದಾಗ ಕಾಲ್ತುಳಿತದ ವಾತಾವರಣ ಎದುರಾಗಿದ್ದು ಅಲ್ಲಿ ಒಬ್ಬ ಅಭಿಮಾನಿ ತಲೆ ಸುತ್ತಿ ಬಿದ್ದ ಘಟನೆ ನಡೆದಿದೆ. ಆಗ ಅಲ್ಲಿದ್ದವರು ಪ್ಯಾನಿಕ್ ಆಗಿದ್ದಾರೆ.

ಆ ವ್ಯಕ್ತಿಗೆ ನೀರು ಕುಡಿಸಿ, ಚೆನ್ನಾಗಿ ಗಾಳಿ ಸಿಗಲು ಜಾಗ ಮಾಡಿಕೊಟ್ಟು ಜನ ಚೇತರಿಸಿಕೊಳ್ಳಲು ಸಹಾಯ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆದ ನಂತರ ಪ್ರತಿ ವಾರ ನಟ ಮನೆಮುಂದೆ ಕಾಣಿಸುವ ಹಾಗೂ ಅಲ್ಲಿ ಜಮಾಯಿಸುವ ಜನದಟ್ಟನೆ ಸಂಬಂಧವಾಗಿ ಕ್ರೌಡ್ ಮ್ಯಾನೇಜ್ಮೆಂಟ್ ಬಗ್ಗೆ ಆನ್ಲೈನ್ನಲ್ಲಿ ಭಾರಿ ಚರ್ಚೆಯಾಗುತ್ತಿದೆ.

ಜಲ್ಸಾ ಹೊರಗಡೆ ಅಮಿತಾಭ್ ಅವರ ಅಭಿಮಾನಿಗಳಿಗೆ ಪ್ರತಿ ಭಾನುವಾರ ಗ್ರೀಟ್ ಮಾಡುತ್ತಾರೆ. ದಶಕಳಿಂದ ಈ ಒಂದು ಟ್ರೆಡಿಷನ್ ಆಗದೆ. ಪ್ರತಿ ವಾರ ಬಾಲಿವುಡ್ ಲೆಜೆಂಡ್​ನ ನೋಡಲು ದೇಶದ ಹಲವೆಡೆಯಿಂದ ಹಚ್ಚಿನ ಅಭಿವಾನಿಗಳು ಮುಂಬೈಗೆ ಬಂದು ಅವರ ಮನೆಯ ಮುಂದೆ ಪೋಸ್ಟರ್ಸ್ ತೋರಿಸುವುದು, ಕೈ ಬೀಸುವುದು, ಬಿಗ್ ಬಿ ಜೊತೆ ಫೋಟೊ ತೆಗೆದುಕೊಳ್ಳುವುದನ್ನು ಮಾಡುತ್ತಾರೆ.

ಆಸ್ಪತ್ರೆಗೆ ದಾಖಲಾಗಿದ್ದ ಅಮಿತಾಭ್ ಬಚ್ಚನ್

ಮಂಗಳವಾರ ಅಮಿತಾಭ್ ಬಚ್ಚನ್ ನಗರದ ಲೀಲಾವತಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಇದಾದ ನಂತರ ಇದು ಅವರ ಮೊದಲ ಪಬ್ಲಿಕ್ ಅಪಿಯರೆನ್ಸ್ ಎಂದು ವರದಿಗಳು ತಿಳಿಸಿದೆ. ಈ ವಿಷಯ ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು. ಅಮಿತಾಭ್ ಬಚ್ಚನ್ ಅವರು ಆಸ್ಪತ್ರೆಗೆ ದಾಖಲಾದ ಸಂಗತಿ ಬಗ್ಗೆ ಪತ್ರಕರ್ತ ವಿಕ್ಕಿ ಲಾಲ್ವಾನಿ ಅವರು ಕೂಡಾ ಇನ್ಸ್ಟಾಗ್ರಾಮ್ ಪೋಸ್ಟ್ ಹಾಕಿದ್ದರು. ಆದರೆ ಸದ್ಯ ಅಮಿತಾಭ್ ಬಚ್ಚನ್ ಅವರು ಆರೋಗ್ಯವಾಗಿರುವುದಾಗಿ ಅವರ ಆಪ್ತ ಮೂಲಗಳು ತಿಳಿಸಿವೆ.

ರಾಮಾಯಣ ಸಿನಿಮಾದ ಜೊತೆ ಜೊತೆಗೇ ನಟ ಅಶ್ವತ್ಥಾಮನಾಗಿ ಕಲ್ಕಿ 2898 ಎಡಿ ಸಿಕ್ವೆಲ್ನಲ್ಲಿ ನಟಿಸಲು ರೆಡಿಯಾಗಿದ್ದಾರೆ. ಇದರ ನಂತರ ರಿಭು ದಾಸ್ಗುಪ್ತಾ ನಿರ್ದೇಶನದ ಸೆಕ್ಶನ್ 84 ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಸಿನಿಮಾದ ದಿನಾಂಕವನ್ನು ನಿರ್ಮಾಪಕರು ಇನ್ನು ಅನೌನ್ಸ್ ಮಾಡಿಲ್ಲ. ಈ ಸಿನಿಮಾದಲ್ಲಿ ಡೈನಾ ಪೆಂಟಿ, ನಿಮೃತ್ ಕೌರ್ ಮತ್ತು ಅಭಿಷೇಕ್ ಬಾನರ್ಜಿ ನಟಿಸಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports