Ambika Kannada Serial: 15 ವರ್ಷಗಳ ನಂತರ ಕಿರುತೆರೆಗೆ ಬಂದ ಅಂಬಿ ಹೀರೋಯಿನ್ ಅಂಬಿಕಾ! | | ACTPnews

ಅಂಬಿ ಹೀರೋಯಿನ್ ಅಂಬಿಕಾ ಕನ್ನಡ ಸೀರಿಯಲ್; ಇವರದ್ದು ಇಲ್ಲಿ ಖಡಕ್ ರೋಲ್!


Last Updated:

ಅಂಬಿಕಾ ಅವರು ಮತ್ತೊಮ್ಮೆ ಕನ್ನಡ ಕಿರುತೆರೆಗೆ ಬಂದಿದ್ದಾರೆ.15 ವರ್ಷದ ಹಿಂದೆ ಪ್ರೀತಿಯಿಂದ ಸೀರಿಯಲ್ ಮಾಡಿದ್ದರು. ಇದೀಗ ಜೈಲಲಿತಾ ಸೀರಿಯಲ್ ಮಾಡಿದ್ದಾರೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.

ಅಂಬಿ ಹೀರೋಯಿನ್ ಅಂಬಿಕಾ ಕನ್ನಡ ಸೀರಿಯಲ್; ಇವರದ್ದು ಇಲ್ಲಿ ಖಡಕ್ ರೋಲ್!
ಅಂಬಿ ಹೀರೋಯಿನ್ ಅಂಬಿಕಾ ಕನ್ನಡ ಸೀರಿಯಲ್; ಇವರದ್ದು ಇಲ್ಲಿ ಖಡಕ್ ರೋಲ್!

ರೆಬೆಲ್ ಸ್ಟಾರ್ ಅಂಬರೀಶ್ (Ambareesh) ಮತ್ತು ಅಂಬಿಕಾ (Ambika) ಅವರದ್ದು ಸೂಪರ್ ಹಿಟ್ ಜೋಡಿ ಬಿಡಿ. ಇವರು ಒಟ್ಟಿಗೆ ಸುಮಾರು 15 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಚಕ್ರವ್ಯೂಹ ಚಿತ್ರದ (Chakravyuha Movie) ಚಳಿ ಚಳಿ ಸಾಂಗ್ ಇಂದಿಗೂ ಜನಪ್ರಿಯತೆ ಉಳಿಸಿಕೊಂಡಿದೆ. ಆದರೆ, ವಿಷಯ ಈಗ ಇದಲ್ಲ ನೋಡಿ. ಅಂಬಿಕಾ ಅವರು 15 ವರ್ಷದ ಬಳಿಕ ಕನ್ನಡ ಕಿರುತೆರೆಗೆ ಬಂದಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯ ಜೈಲಲಿತಾ ಸೀರಿಯಲ್ (Jailalitha Serial) ಅಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಇವರ ಪಾತ್ರದ ಲುಕ್ ಆ್ಯಂಡ್ ಫೀಲ್‌ನ ಫೋಟೋಗಳು ರಿವಿಲ್ ಆಗಿವೆ. ಈ ಒಂದು ಪಾತ್ರದ ಇನ್ನಷ್ಟು ವಿವರ ಇಲ್ಲಿದೆ ಓದಿ.

ಜೈಲಲಿತಾ ಸೀರಿಯಲ್

ಸ್ಟಾರ್ ಸುವರ್ಣದಲ್ಲಿ ಜೈಲಲಿತಾ ಅನ್ನುವ ಸೀರಿಯಲ್ ಬರ್ತಿದೆ. ಪ್ರತಿ ದಿನ ರಾತ್ರಿ 9.30ಕ್ಕೆ ಈ ಧಾರವಾಹಿ ಪ್ರಸಾರ ಆಗುತ್ತದೆ. ಜೈ ಮತ್ತು ಲಲಿತಾ ಕತೆಯನ್ನ ಇದು ಹೇಳುತ್ತದೆ.

South Actress Ambika Acted in Star Suvarna Jayalalitha Serial after 15 years

ಈ ವಾರದಿಂದ ಎಂಟ್ರಿ

ಆದರೆ, ಈ ಒಂದು ಸೀರಿಯಲ್ ಅಲ್ಲಿ ಅಂಬಿಕಾ ಅವರು ಅಜ್ಜಿಯ ಪಾತ್ರ ಮಾಡುತ್ತಿದ್ದಾರೆ. ನಾಯಕನ ಅಜ್ಜಿಯ ರೋಲ್ ಇದಾಗಿದೆ. ಮಳವಳ್ಳಿಯ ಮಹೇಶ್ವರಿ ಅನ್ನೋದು ಈ ಪಾತ್ರದ ಹೆಸರಾಗಿದೆ.

ಅಜ್ಜಿ ಅಂಬಿಕಾ ಸಖತ್ ಖಡಕ್

ಅಜ್ಜಿ ಅಂಬಿಕಾ ಅವರಿಗೆ ಮಗಳು ಕೂಡ ಇದ್ದಾರೆ. ಇವರ ಹೆಸರು ಮಳವಳ್ಳಿ ಪರಮೇಶ್ವರಿ ಅನ್ನೋದೆ ಆಗಿದೆ. ಇವರೂ ಯಾರಿಗೂ ಹೆದರೋದಿಲ್ಲ.
15 ವರ್ಷದ ಹಿಂದೆ…

ಕಳೆದ 15 ವರ್ಷದ ಹಿಂದೆ ಇದೇ ಸ್ಟಾರ್ ಸುವರ್ಣದಲ್ಲಿ ಒಂದು ಸೀರಿಯಲ್ ಬರ್ತಾ ಇತ್ತು. 2011 ರಲ್ಲಿ ಪ್ರೀತಿಯಿಂದ ಅನ್ನುವ ಸೀರಿಯಲ್ ಟೆಲಿಕಾಸ್ಟ್ ಆಗುತ್ತಿತ್ತು.

ಇದಕ್ಕೂ ಅಂಬಿಕಾ ಅವರಿಗೂ ಏನು ಲಿಂಕ್ ಅನ್ನುವ ಕುತೂಹಲ ಇದ್ದೇ ಇದೆ. ನಿಜ, ಈ ಒಂದು ಸೀರಿಯಲ್ ಅಲ್ಲಿ ಅಂಬಿಕಾ ಅವರು ನಟನಿಸಿದ್ದರು. ಇದು ಇವರ ಮೊದಲ ಕನ್ನಡ ಸೀರಿಯಲ್ ಆಗಿದೆ. ಇದರಲ್ಲಿ ಅಮ್ಮಾಜಿ ಮತ್ತು ಪ್ರಭಾಮಣಿ ಅನ್ನುವ ಎರಡು ರೋಲ್ ಅನ್ನ ಅಂಬಿಕಾ ಅವರು ಮಾಡಿದ್ದರು.

South Actress Ambika Acted in Star Suvarna Jayalalitha Serial after 15 years

15 ವರ್ಷದ ಹಿಂದೆ…
ಈ ಸೀರಿಯಲ್ ಬಳಿಕ..

ಆದರೆ. ಪ್ರೀತಿಯಿಂದ ಸೀರಿಯಲ್ ಆದ್ಮೇಲೆ ಅಂಬಿಕಾ ಅವರು ಕನ್ನಡದಲ್ಲಿ ಬೇರೆ ಯಾವುದೂ ಸೀರಿಯಲ್ ಮಾಡಲಿಲ್ಲ. ಈಗ 2026 ಕ್ಕೆ ಜೈಲಲಿತಾ ಸೀರಿಯಲ್ ಮಾಡುತ್ತಿದ್ದಾರೆ.

ಈ ಸೀರಿಯಲ್ ಅಲ್ಲಿ ಅಜ್ಜಿ ರೋಲ್ ಮಾಡುತ್ತಿದ್ದಾರೆ. ಈ ಸೀರಿಯಲ್ ಈಗಾಗಲೇ ಪ್ರಸಾರ ಆಗುತ್ತಿದೆ. ಆದರೆ, ಅಂಬಿಕಾ ಅವರ ಪಾತ್ರದ ಎಂಟ್ರಿ ಆಗಿರಲಿಲ್ಲ ಅಷ್ಟೆ ನೋಡಿ.

ಈ ವಾರದಿಂದ ಎಂಟ್ರಿ

ಜೈಲಲಿತಾ ಸೀರಿಯಲ್ ಅಲ್ಲಿ ಅಂಬಿಕಾ ಪಾತ್ರದ ಎಂಟ್ರಿ ಆಗುತ್ತಿದೆ. ಈ ವಾರದಿಂದ ಮಳವಳ್ಳಿ ಮಹೇಶ್ವರಿ ಪಾತ್ರದ ಪ್ರವೇಶ್ ಆಗುತ್ತಿದೆ.

ಈ ಒಂದು ಪಾತ್ರ ಹೇಗೆ ಇದೆ ? ಯಾವ ರೀತಿ ಕಾಣಿಸುತ್ತದೆ ? ಈ ಪ್ರಶ್ನೆಗಳಿಗೆ ಒಂದಷ್ಟು ಫೋಟೋಗಳು ಹೊರ ಬಂದಿವೆ. ಇವುಗಳನ್ನ ಸ್ಟಾರ್ ಸುವರ್ಣ ವಾಹಿನಿಯವರೇ ನ್ಯೂಸ್-18 ಕನ್ನಡ ಡಿಜಿಟಲ್‌ಗೆ ಹಂಚಿಕೊಂಡಿದ್ದಾರೆ.

ಸೀರಿಯಲ್ ಟೈಮ್

ಜೈಲಲಿತಾ ಸೀರಿಯಲ್ ಪ್ರತಿ ದಿನ ರಾತ್ರಿ 9.30 ಕ್ಕೆ ಪ್ರಸಾರ ಆಗುತ್ತದೆ. ಸ್ಟಾರ್ ಸುವರ್ಣ ವಾಹಿನಿಯ ಅಧಿಕೃತ ಪೇಜ್ ಅಲ್ಲೂ ಈ ಸೀರಿಯಲ್ ಮಾಹಿತಿ ಸಿಗುತ್ತದೆ. ಪ್ರೋಮೋ ಮತ್ತು ಫೋಟೋಸ್‌ಗಳನ್ನ ಇಲ್ಲಿ ನೋಡಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed