Allu Arjun: ಮೋದಿ ಕರೆ ಬೆನ್ನಲ್ಲೇ ಲಕ್ಷುರಿ ಪ್ರೈವೆಟ್ ಜೆಟ್ ಬಿಟ್ಟು ಕಮರ್ಷಿಯಲ್ ಫ್ಲೈಟ್ ಹತ್ತಿದ ಪುಷ್ಪ ಸ್ಟಾರ್! | | ACTPnews

ಅಲ್ಲು ಅರ್ಜುನ್


Last Updated:

Allu Arjun: ನೂರಾರು ಕೋಟಿ ಆಸ್ತಿಯ ಒಡೆಯ ಅಲ್ಲು ಅರ್ಜುನ್ ಲಕ್ಷುರಿ ಪ್ರೈವೆಟ್ ಜೆಟ್ ಬಿಟ್ಟು ಕಮರ್ಷಿಯಲ್ ಫ್ಲೈಟ್ ಹತ್ತಿದ್ದಾರೆ. ಕಮಲ್ ಹಾಸನ್ ಬೆನ್ನಲ್ಲೇ ಮತ್ತೊಬ್ಬ ನಟ ಮೋದಿ ಕರೆಯ ಬೆನ್ನಲ್ಲೇ ಲಕ್ಷುರಿ ಬದಿಗೊತ್ತಿದ್ದಾರೆ.

ಅಲ್ಲು ಅರ್ಜುನ್
ಅಲ್ಲು ಅರ್ಜುನ್

ಸಾಮಾನ್ಯವಾಗಿ ದೊಡ್ಡ ಸ್ಟಾರ್‌ ನಟ- ನಟಿಯಾರಾಗಲಿ, ಆಟಗಾರರಾಗಲಿ, ರಾಜಕಾರಣಿಗಳು ಒಂದು ಊರಿನಿಂದ ಇನ್ನೊಂದು ಊರಿಗೆ ತೆರಳಬೇಕು ಎಂದರೆ ಖಾಸಗಿ ಜೆಟ್‌ (Private Jet) ಅಥವಾ ಖಾಸಗಿ ಹೆಲಿಕಾಪ್ಟರ್‌ನಲ್ಲಿ ಹೋಗುತ್ತಾರೆ. ದಳಪತಿ ವಿಜಯ್ (Vijay), ನಯನತಾರಾ, ಕಮಲ್ ಹಾಸನ್, ರಾಮ್ ಚರಣ್ (Ram Charan) ಸೇರಿದಂತೆ ದೊಡ್ಡ ಸ್ಟಾರ್ ನಟರೆಲ್ಲ ಹೆಚ್ಚಾಗಿ ಪ್ರೈವೆಟ್ ಜೆಟ್​​ಗಳಲ್ಲಿ ಓಡಾಡುತ್ತಾರೆ. ಪುಷ್ಪ ಸ್ಟಾರ್ ಅಲ್ಲು ಅರ್ಜುನ್ (Allu Arjun) ಕೂಡಾ ಹಾಗೆಯೇ. ಅವರ ಪ್ಯಾನ್ ಇಂಡಿಯಾ ಕ್ರೇಜ್​ಗೆ ತಕ್ಕಂತೆ ಅವರ ಲೈಫ್​ಸ್ಟೈಲ್ ಕೂಡಾ ಅಪ್ಡೇಟ್ ಆಗಿದೆ.

ಆದರೇ ಇದೀಗ ಅವರು ತಮ್ಮ ಸಿನಿಮಾ ಶೂಟಿಂಗ್​ಗೆಖಾಸಗಿ ಜೆಟ್‌ ಬಿಟ್ಟು ಸಾಮಾನ್ಯ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಆದರೆ ಯಾಕೆ? ಕೋಟಿಗಟ್ಟಲೆ ಆಸ್ತಿ ಇರೋ ಬನ್ನಿ ಪ್ರೈವೇಟ್ ಜೆಟ್ ಬಿಟ್ಟು ಸಾಮಾನ್ಯರಂತೆ ವಿಮಾನ ಹತ್ತಿದ್ದೇಕೆ? ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ.

ಹೌದು, ನೀವು ಕೇಳುತ್ತಿರುವುದು ನಿಜ. “ಪುಷ್ಪ – 2 ದಿ ರೂಲ್‌” ಸಿನಿಮಾ ಮೂಲಕ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ ಪುಷ್ಪ ಸ್ಟಾರ್‌ ಅಲ್ಲು ಅರ್ಜುನ್‌ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಅವರು ಸುದ್ದಿಯಲ್ಲಿರುವುದು ಅವರ ಸ್ಟೈಲ್‌ ಅಥವಾ ಸಿನಿಮಾ ಅಪ್‌ಡೇಟ್‌ನಿಂದ ಅಲ್ಲ. ಅದರ ಬದಲಾಗಿ ಅವರು ತೆಗೆದುಕೊಂಡಿರುವ ನಿರ್ಧಾರಕ್ಕೆ ಸಂಬಂಧಿಸಿ.

ವರದಿಗಳ ಪ್ರಕಾರ ನಟ ಅಲ್ಲು ಅರ್ಜುನ್‌ ಅವರು ಮುಂಬರುವ “ರಾಕ” ಚಿತ್ರದ ಚಿತ್ರೀಕರಣದ ಸಲುವಾಗಿ ಹೈದರಾಬಾದ್​ನಿಂದ ಮುಂಬೈಗೆ ತೆರಳಲು ಚಿತ್ರತಂಡ ಐಷಾರಾಮಿ ಚಾರ್ಟರ್‌ ವಿಮಾನವನ್ನು ವ್ಯವಸ್ಥೆ ಮಾಡಿದ್ದರು. ಆದರೆ ಅಲ್ಲು ಅರ್ಜುನ್ ಈ ವ್ಯವಸ್ಥೆಯನ್ನು ನಿರಾಕರಿಸಿ ಸಾಮಾನ್ಯ ವಿಮಾನದಲ್ಲಿ ಜನ ಸಾಮಾನ್ಯರಂತೆ ತೆರಳಿದ್ದಾರೆ. ಸದ್ಯ ಈ ನಿರ್ಧಾರವು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಪ್ರೈವೆಟ್ ಜೆಟ್​​ಗೆ ಬೈಬೈ, ಕಮರ್ಷಿಯಲ್ ಫ್ಲೈಟ್ ಹತ್ತಿದ ಅಲ್ಲು ಅರ್ಜುನ್

ಐಷಾರಾಮಿಯನ್ನು ಬಿಟ್ಟು ಸಿನಿಮಾದ ಬಜೆಟ್‌ಗೆ ಆದ್ಯತೆ ನೀಡಿದ ಅಲ್ಲು ಅರ್ಜುನ್‌ ಸಿನಿಮಾದ ಬಜೆಟ್‌ ಸಿನಿಮಾದ ಗುಣಮಟ್ಟ ಸುಧಾರಿಸುವಂತಿರಬೇಕು. ಬಜೆಟ್ ಹಣವನ್ನು ಸಿನಿಮಾಗಾಗಿ ಖರ್ಚು ಮಾಡಬೇಕೇ ಹೊರತು ಅನವಶ್ಯಕ ಐಷಾರಾಮಿ ವ್ಯವಸ್ಥೆಗೆ ವ್ಯಹಿಸಬಾರದು. ಚಿತ್ರ ನಿರ್ಮಾಣದ ಹಣವು ಸ್ಕ್ರೀನ್​​ ಮೇಲೆ ಕಾಣಾಬೇಕೇ ಹೊರತು ಐಷಾರಾಮಿ ವ್ಯವಸ್ಥೆಯಿಂದಲ್ಲ ಎಂದು ನಂಬಿದವರು.

ಅವರ ಬ್ಯುಸಿ ಶೂಟಿಂಗ್‌ ಶೆಡ್ಯೂಲ್‌ ಮತ್ತು ಸೂಪರ್‌ ಸ್ಟಾರ್‌ ಸ್ಥಾನ ಮಾನದ ನಡುವೆಯೂ ಅಲ್ಲು ಅರ್ಜುನ್ ತಮ್ಮ ಅನುಕೂಲತೆ ಲಭ್ಯತೆಯ ಆಧಾರದ ಮೇಲೆ ಪ್ರಯಾಣದ ಆಯ್ಕೆ ಮಾಡುತ್ತಾರೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ. ಇದಕ್ಕೂ ಮೊದಲು ಕಮಲ್ ಹಸನ್ರವರು “ಕಲ್ಕಿ 2898 ಎಡಿ” ಸಿನಿಮಾ ಕೆಲಸದ ಸಮಯದಲ್ಲಿ ಅದ್ದೂರಿ ಐಷಾರಾಮಿ ಜೆಟ್ ಬಿಟ್ಟು ಸಾಮಾನ್ಯರಂತೆ ವಿಮಾನದಲ್ಲಿ ಪ್ರಯಾಣಿಸಿದ್ದು ಸುದ್ದಿಯಾಗಿತ್ತು.

ಅಲ್ಲು ಅರ್ಜುನ್‌ರವರು ಯಾವುದೇ ಐಷಾರಾಮಿ ವ್ಯವಸ್ಥೆಗಳಿಗೆ ಬೇಡಿಕೆಯನ್ನು ನೀಡದೇ ಸಾಮಾನ್ಯ ಜನರಂತೆ ತೆರಳಿರುವುದು ಬಹಳಷ್ಟು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ತ್ರಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆಯೇ ಅಲ್ಲು?

ಪ್ರಸ್ತುತವಾಗಿ ನಟ ಅಲ್ಲು ಅರ್ಜುನ್‌ ರವರು ಅಟ್ಲಿ ನಿರ್ದೇಶನದ “ರಾಕ”ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ದೊಡ್ಡ ಬಜೆಟ್‌ ಚಿತ್ರವು ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗುವ ನಿರೀಕ್ಷೆಯಲಿದ್ದು ಅಭಿಮಾನಿಗಳಲ್ಲಿ ಬಾರಿ ನಿರೀಕ್ಷೆ ಮೂಡಿಸಿದೆ. “ರಾಕ” ಚಿತ್ರಕ್ಕೆ ದೀಪಿಕಾ ಪಡುಕೋಣೆ ಅವರನ್ನು ನಾಯಕಿಯಾಗಿ ಘೋಷಿಸಲಾಗಿದ್ದು ಸ್ಟಾರ್‌ ನಟಿಯರಾದ ರಶ್ಮಿಕಾ ಮಂದಣ್ಣ, ಜಾನ್ವಿ ಕಪೂರ್ ಮತ್ತು ಮೃಣಾಲ್ ಠಾಕೂರ್ ಕೂಡ ನಟಿಸಬಹುದು ಎನ್ನಲಾಗುತ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ರಾಕಾ ಚಿತ್ರಕ್ಕೆ ಬ್ರೇಕ್‌

ಹಲವು ವಾರಗಳನ್ನು “ರಾಕ”ಚಿತ್ರದ ಶೂಟಿಂಗ್‌ಗೋಸ್ಕರ ಕಳೆದ ನಂತರ ಸದ್ಯ ಅಲ್ಲು ಅರ್ಜುನ್‌ ಚಿಕ್ಕ ಬ್ರೇಕ್ ತೆಗೆದುಕೊಂಡು ಕುಟುಂಬದೊಂದಿಗೆ ಪ್ಯಾರೀಸ್‌ಗೆ ತೆರಳಿದ್ದಾರೆ. ಭಾರತಕ್ಕೆ ಮುಂದಿನ ತಿಂಗಳು ಮರಳಲಿದ್ದಾರೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

ವರದಿ: ಮದನ್ ಮಲ್ಲೇಶ್



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed