Allu Arjun: ಅಲ್ಲು ಅರ್ಜುನ್‌ಗೆ ಶ್ರೀ ಸಿದ್ಧಾರೂಢರ ಮೂರ್ತಿ ಗಿಫ್ಟ್; ಅಭಿಮಾನಿ ಕೊಟ್ಟ ಸ್ಪೆಷಲ್ ಉಡುಗೊರೆ! | | ACTPnews

ಅಲ್ಲು ಅರ್ಜುನ್‌ಗೆ ಶ್ರೀ ಸಿದ್ಧಾರೂಢರ ಮೂರ್ತಿ ಗಿಫ್ಟ್; ಉಡುಗೊರೆ ವಿಡಿಯೋ ವೈರಲ್!


Last Updated:

ಅಲ್ಲು ಅರ್ಜುನ್ ತಮ್ಮ ಅಭಿಮಾನಿಗಳನ್ನ ಮೀಟ್ ಆಗಿದ್ದಾರೆ. ಇದೇ ಸಮಯದಲ್ಲಿಯೇ ಶ್ರೀ ಸಿದ್ಧಾರೂಢರ ಮೂರ್ತಿಯನ್ನು ಅಭಿಮಾನಿಯೊಬ್ಬರು ಕೊಟ್ಟಿದ್ದಾರೆ. ಶೂ ಕಳಚಿಯೇ ಅಲ್ಲು ಅಲ್ಲು ಅರ್ಜುನ್ ಇದನ್ನ ಸ್ವೀಕರಿಸಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ಅಲ್ಲು ಅರ್ಜುನ್‌ಗೆ ಶ್ರೀ ಸಿದ್ಧಾರೂಢರ ಮೂರ್ತಿ ಗಿಫ್ಟ್; ಉಡುಗೊರೆ ವಿಡಿಯೋ ವೈರಲ್!
ಅಲ್ಲು ಅರ್ಜುನ್‌ಗೆ ಶ್ರೀ ಸಿದ್ಧಾರೂಢರ ಮೂರ್ತಿ ಗಿಫ್ಟ್; ಉಡುಗೊರೆ ವಿಡಿಯೋ ವೈರಲ್!

ಟಾಲಿವುಡ್‌ನ (Tollywood) ನಾಯಕ ನಟ ಅಲ್ಲು ಅರ್ಜುನ್ (Allu Arjun) ಅಭಿಮಾನಿಗಳನ್ನ ಮೀಟ್ ಆಗಿದ್ದಾರೆ. ಈ ಒಂದು ಮೀಟ್‌ ಅಲ್ಲಿ ಎಲ್ಲ ಕಡೆಯಿಂದಲೇ ಅಭಿಮಾನಿಗಳು ಬಂದಿದ್ದಾರೆ. ಬಂದವರು ತಮ್ಮ ನೆಚ್ಚಿನ ನಾಯಕನನ್ನ ನೋಡಿ ಖುಷಿಪಟ್ಟಿದ್ದಾರೆ. ತಮಗೆ ಇಷ್ಟವಾದ ಗಿಫ್ಟ್‌ಗಳನ್ನು ಕೊಟ್ಟಿದ್ದಾರೆ. ಹಾಗೆ ಉತ್ತರ ಕರ್ನಾಟಕದ ಕಡೆಗೆ ಅಲ್ಲು ಅರ್ಜುನ್ ಫ್ಯಾನ್ಸ್ ಒಂದು ಸ್ಪೆಷಲ್ ಗಿಫ್ಟ್ ಕೊಟ್ಟಿದ್ದಾರೆ. ಅದು ಏನು ಗೊತ್ತಾ? ಶ್ರೀ ಸಿದ್ಧಾರೂಢರ ಪುಟ್ಟ ಮೂರ್ತಿನೇ (Sri Siddharoodha Swamy idol) ಆಗಿದೆ. ಹಾಗೆ ಇಲ್ಲಿ ಅಲ್ಲು ಅರ್ಜುನ್ (Allu Arjun) ಅಭಿಮಾನಿಗಳಿಗೆ ಒಂದಷ್ಟು ಕಿವಿ ಮಾತು ಕೂಡ ಹೇಳಿದ್ದಾರೆ. ಅದರ ವಿವರ ಮುಂದೆ ಇದೆ ಓದಿ.

ಅಲ್ಲು ಅರ್ಜುನ್

ಅಲ್ಲು ಅರ್ಜುನ್ ಅಭಿಮಾನಿಗಳು ಎಲ್ಲೆಡೆ ಇದ್ದಾರೆ. ಬಳ್ಳಾರಿ, ಹೊಸಪೇಟೆ ಸೇರಿದಂತೆ ಬೆಂಗಳೂರಿನಲ್ಲೂ ಇದ್ದಾರೆ. ಹೈದ್ರಾಬಾದ್ ಅಲ್ಲಂತೂ ಜಾಸ್ತಿನೇ ಇದ್ದಾರೆ ಬಿಡಿ.
Allu Arjun fan gifted a Sri Siddharoodha Swamy idol at the Hyderabad fan meet

ಫ್ಯಾನ್ಸ್ ಗೆ ಅಲ್ಲು ಕಿವಿ ಮಾತು

ಆದರೆ, ಎಲ್ಲೆಡೆ ಇರೋ ಅಭಿಮಾನಿಗಳು ಒಂದಡೆ ಸೇರುವ ಅವಕಾಶ ಸಿಗೋದೇ ಇಲ್ಲ. ಅದು ಸಾಧ್ಯವಾಗಿದೆ. ಜುಲೈ-28 ರಂದು ಹೈದ್ರಾಬಾದ್ ಅಲ್ಲಿ ಫ್ಯಾನ್ ಮೀಟ್ ಆಗಿದೆ. ಇಲ್ಲಿಗೆ ಅಲ್ಲು ಅರ್ಜುನ್ ಕೂಡ ಬಂದಿದ್ದಾರೆ.

ಶ್ರೀ ಸಿದ್ಧಾರೂಢರ ಮೂರ್ತಿ ಗಿಫ್ಟ್

ಅಲ್ಲು ಅರ್ಜುನ್ ಅವರಿಗೆ ಹೈದ್ರಾಬಾದ್ ಅಲ್ಲಿ ಶ್ರೀ ಸಿದ್ಧಾರೂಢ ಸ್ವಾಮಿಗಳ ಮೂರ್ತಿಯ ಗಿಫ್ಟ್ ಕೊಡಲಾಗಿದೆ. ಅಭಿಮಾನಿಯೊಬ್ಬರು ಇದನ್ನ ಕೊಟ್ಟಿದ್ದಾರೆ. ಇದು ಹೆಚ್ಚು ಗಮನ ಸೆಳೆಯುತ್ತಿದೆ. ಇದೇ ಸುದ್ದಿಯ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಅಲ್ಲದೆ ಈ ಒಂದು ಗಿಫ್ಟ್ ಅನ್ನ ಅಲ್ಲು ಅರ್ಜುನ್ ಅಷ್ಟೆ ಗೌರವದಿಂದಲೇ ಸ್ವೀಕರಿಸಿದ್ದಾರೆ. ಶ್ರೀ ಸಿದ್ಧಾರೂಢರ ಮೂರ್ತಿ ಇರೋ ಪುಟ್ಟ ಗಾಜಿನ ಬಾಕ್ಸ್ ಅನ್ನ ಕೊಡಲು ಅಭಿಮಾನಿ ವೇದಿಕೆ ಮೇಲೆ ಬಂದಿದ್ದಾರೆ.

ಹಾಗೆ ಶ್ರೀ ಸಿದ್ಧಾರೂಢರ ಕುರಿತು ಹೇಳಿದ್ದಾರೆ. ಅದು ಅರ್ಥ ಆದ್ಮೇಲೆ ಶೂ ತೆಗೆದಿಟ್ಟು ಅಲ್ಲು ಅರ್ಜುನ್ ಈ ವಿಶೇಷ ಗಿಫ್ಟ್ ಅನ್ನ ಸ್ವೀಕರಿಸಿದ್ದಾರೆ. ಜತನದಿಂದಲೇ ಇದನ್ನ ತೆಗೆದಿಡಿ ಅಂತಲೇ ತಮ್ಮ ಹುಡುಗರಿಗೂ ಹೇಳಿದ್ದಾರೆ ನೋಡಿ.

Allu Arjun fan gifted a Sri Siddharoodha Swamy idol at the Hyderabad fan meet

ಶ್ರೀ ಸಿದ್ಧಾರೂಢರ ಮೂರ್ತಿ ಗಿಫ್ಟ್
ಫ್ಯಾನ್ಸ್ ಅಲ್ಲು ಕಿವಿ ಮಾತು

ಇದರ ಹೊರತಾಗಿ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಇಷ್ಟವಾಗುವ ಸಾಕಷ್ಟು ವಿಚಾರಗಳನ್ನ ಹೇಳಿದ್ದಾರೆ. ಒಂದಷ್ಟು ಕಿವಿ ಮಾತುಗಳನ್ನು ಹೇಳಿದ್ದಾರೆ. ಅದು ಕೂಡ ಅಷ್ಟೆ ಗಮನ ಸೆಳೆಯುತ್ತದೆ.

ಎಲ್ಲರಿಗೂ ಧನ್ಯವಾದ ಹೇಳಿದ ಬನ್ನಿ

ಅಲ್ಲು ಅರ್ಜುನ್ ಫ್ಯಾನ್ ಮೀಟ್ ಆದ್ಮೇಲೆ ಇನ್ನೂ ಒಂದು ಕೆಲಸ ಮಾಡಿದ್ದಾರೆ. ತಮ್ಮ ಎಕ್ಸ್‌ ಖಾತೆಯ ಪೇಜ್ ಅಲ್ಲಿ ಬರೆದುಕೊಂಡಿದ್ದಾರೆ. ನನ್ನ ಪ್ರೀತಿಯ ಅಭಿಮಾನಿಗಳೇ, ನನಗೆ ತುಂಬಾನೆ ಖುಷಿ ಆಗಿದೆ. ನನ್ನ ಮೇಲಿನ ಪ್ರೀತಿಯಿಂದಲೇ ನೀವು ವಿವಿಧ ಪ್ರದೇಶದಿಂದ ನನ್ನ ನೋಡಲು ಬಂದಿದ್ದೀರಿ. ಇದು ಮನಸ್ಸಿಗೆ ತುಂಬಾನೆ ಖುಷಿ ಕೊಟ್ಟಿದೆ.

ನೀವು ತೋರಿದ ಅಪಾರ ಅಭಿಮಾನಕ್ಕೆ ಹೃದಯಪೂರ್ವಕ ಧನ್ಯವಾದಗಳು, ನಿಮ್ಮ ಈ ಪ್ರೀತಿಗೆ ನಾನು ಸದಾ ಚಿರಋಣಿ ಆಗಿರುತ್ತೇನೆ. ನೀವು ಹೆಮ್ಮಪಡುವಂತೆ ನನ್ನ ಇನ್ನಷ್ಟು ಕೆಲಸ ಮಾಡುತ್ತೇನೆ ಅಂತಲೇ ಅಲ್ಲು ಅರ್ಜುನ್ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ ಅಂತಲೆ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed