Last Updated:
ಟೀಂ ಇಂಡಿಯಾ ಮತ್ತು ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರೈಸಿಂಗ್ ಪುಣೆ ಸೂಪರ್ಜೈಂಟ್ಸ್ಗಾಗಿ ಮಹೇಂದ್ರ ಸಿಂಗ್ ಧೋನಿ ಅವರೊಂದಿಗೆ ಡ್ರೆಸ್ಸಿಂಗ್ ರೂಮ್ಗಳನ್ನು ಹಂಚಿಕೊಂಡಿರುವ ರಹಾನೆ, ಲೆಜೆಂಡ್ ನಾಯಕ ತಂಡದಲ್ಲಿ ಹೇಗೆ ನಿರಾಳ ಮತ್ತು ಸ್ವಾಗತಾರ್ಹ ವಾತಾವರಣವನ್ನು ಸೃಷ್ಟಿಸಿದರು ಎಂಬುದನ್ನು ವಿವರಿಸಿದರು.
ನವದೆಹಲಿ: ಟೀಂ ಇಂಡಿಯಾದ ಮಾಜಿ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ (MS Dhoni) ಬಗ್ಗೆ ಆಗಾಗ್ಗೆ ಕೇಳಿಬರುವ ಮಾತು, ಅವರು ತಮ್ಮ ಮಾಜಿ ತಂಡದ ಆಟಗಾರರ ಕರೆಗಳನ್ನು ಸ್ವೀಕರಿಸುವುದಿಲ್ಲ ಅಥವಾ ಸಂದೇಶಗಳಿಗೆ ಉತ್ತರಿಸುವುದಿಲ್ಲ ಅನ್ನೋದು. ಕ್ರಿಕೆಟ್ನಿಂದ ನಿವೃತ್ತರಾದಾಗಿನಿಂದ, ಮಹಿ ತುಂಬಾ ಖಾಸಗಿ ಜೀವನವನ್ನು ನಡೆಸುತ್ತಿದ್ದಾರೆ. ಆದರೆ ಅವರು ಮೊದಲಿನಿಂದಲೂ ಹೀಗಿದ್ದರಾ? ತಂಡದ ನಾಯಕನಾಗಿದ್ದಾಗ ಸಹ ಆಟಗಾರರೊಂದಿಗೆ ಅವರ ನಡವಳಿಕೆ ಹೇಗಿತ್ತು? ಅಜಿಂಕ್ಯ ರಹಾನೆ (Ajinkya Rahane) ಈ ಬಗ್ಗೆ ಯಾರಿಗೂ ತಿಳಿಯದ ಮಹತ್ವದ ಬಹಿರಂಗಪಡಿಸಿದ್ದಾರೆ.














