Aircraft Crash: ಬೆಳ್ಳಂಬೆಳಗ್ಗೆ ಕಹಿಸುದ್ದಿ! ವಿಮಾನ ಪತನಗೊಂಡು 32 ಮಂದಿ ಸಾವು, 7 ಸಿಬ್ಬಂದಿಯೂ ಸುಟ್ಟು ಕರಕಲು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

ವಿಮಾನದಲ್ಲಿದ್ದ ಎಲ್ಲಾ 32 ಜನರು ಸಾವನ್ನಪ್ಪಿದ್ದಾರೆಂದು ಹೇಳಲಾಗಿದೆ. ಮೃತಪಟ್ಟವರಲ್ಲಿ 25 ಪ್ರಯಾಣಿಕರು ಮತ್ತು 7 ಸಿಬ್ಬಂದಿ ಸೇರಿದ್ದಾರೆ ಮತ್ತು ಅವರಲ್ಲಿ ಯಾರೂ ಬದುಕುಳಿದಿರುವ ನಿರೀಕ್ಷೆಯಿಲ್ಲ ಎಂದು ವರದಿಯಾಗಿದೆ.

News18
News18

ನವದೆಹಲಿ: ಬೆಳ್ಳಂಬೆಳಗ್ಗೆ ಕರುಳು ಚುರುಕ್ ಅನ್ನುವಂತಹ ಕಹಿಸುದ್ದಿಯೊಂದು ಬಂದು ಅಪ್ಪಳಿಸಿದ್ದು, ಭೀಕರ ವಿಮಾನ ದುರಂತದಲ್ಲಿ ವಿಮಾನದ ಸಿಬ್ಬಂದಿ ಸೇರಿ 32 ಮಂದಿ ದಾರುಣವಾಗಿ ಮೃತಪಟ್ಟಿರುವ (Nigerian Aircraft Crash) ಘಟನೆ ವರದಿಯಾಗಿದೆ.

ನೈಜೀರಿಯಾದಲ್ಲಿ ಭೀಕರ ವಿಮಾನ ಅಪಘಾತ ಸಂಭವಿಸಿದ್ದು, ಅಲ್ಲಿನ ನೈಋತ್ಯ ಒಂಡೋ ರಾಜ್ಯದಲ್ಲಿ ನೈಜೀರಿಯಾ ವಾಯುಪಡೆಯ ವಿಮಾನ ಅಪಘಾತಕ್ಕೀಡಾಗಿದೆ. ವಿಮಾನದಲ್ಲಿದ್ದ ಎಲ್ಲಾ 32 ಜನರು ಸಾವನ್ನಪ್ಪಿದ್ದಾರೆಂದು ಹೇಳಲಾಗಿದೆ. ಮೃತಪಟ್ಟವರಲ್ಲಿ 25 ಪ್ರಯಾಣಿಕರು ಮತ್ತು 7 ಸಿಬ್ಬಂದಿ ಸೇರಿದ್ದಾರೆ ಮತ್ತು ಅವರಲ್ಲಿ ಯಾರೂ ಬದುಕುಳಿದಿರುವ ನಿರೀಕ್ಷೆಯಿಲ್ಲ ಎಂದು ವರದಿಯಾಗಿದೆ.

ಅಪಘಾತದ ನಂತರ, ಕರಾವಳಿ ಪ್ರದೇಶದ ಬಳಿ ಅವಶೇಷಗಳು ಕಂಡುಬಂದವು. ರಕ್ಷಣಾ ತಂಡಗಳು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ರಕ್ಷಣಾ ತಂಡಗಳು ದೋಣಿಗಳನ್ನು ಬಳಸಿ ಸುತ್ತಮುತ್ತಲಿನ ಪ್ರದೇಶವನ್ನು ಹುಡುಕಿದವು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed