Last Updated:
ಅಗ್ನಿಸಾಕ್ಷಿ ಸೀರಿಯಲ್ ಮತ್ತೆ ಶುರು ಆಗುತ್ತಿದೆ. ಆದರೆ, ಈ ಸಲದ ನಾಯಕನ ಹೆಸರು ಅಗ್ನಿನೇ ಆಗಿದೆ. ಹೆಸರಿಗೆ ತಕ್ಕನಾಗಿಯೇ ಧಗ..ಧಗ ನೋಡಿ. ನಾಯಕಿ ಆಗಲ್ಲ, ಸಾಕ್ಷಿ ಅನ್ನು ಈ ಚೆಲುವೆ ಸೈಲೆಂಟ್ ಬಿಡಿ. ಆದರೆ, ಅಗ್ನಿ ಎದುರು ಬಂದಾಗ ಈ ಬೆಡಗಿನೂ ಸಿಕ್ಕಾಪಟ್ಟೆ ವೈಲೆಂಟ್ ಆಗ್ತಾರೆ. ಇವರ ಈ ಸೀರಿಯಲ್ ಯಾವಾಗ ಅನ್ನುವ ಪ್ರಶ್ನೆಗೆ ಇದೀಗ ಉತ್ತರವೂ ಸಿಕ್ಕಿದೆ. ಅದರ ವಿವರ ಇಲ್ಲಿದೆ ಓದಿ.
ಅಗ್ನಿಸಾಕ್ಷಿ ಸೀರಿಯಲ್ (Agni Sakshi Serial) ಮತ್ತೆ ಬರ್ತಿದೆ. ಈ ಹಿಂದಿನ ಅಗ್ನಿಸಾಕ್ಷಿ ಅಲ್ಲಿ ವಿಜಯ್ ಸೂರ್ಯ (Vijay Surya) ಇದ್ದರು. ವೈಷ್ಣವಿ ಗೌಡ ನಟಿಸಿದ್ದರು. ಈ ಸೀರಿಯಲ್ ಕೂಡ ಚೆನ್ನಾಗಿಯೇ ಹೋಯಿತು. ಆದರೆ, ಈ ಸಲದ ಅಗ್ನಿಸಾಕ್ಷಿ ಸೀರಿಯಲ್ ಅಲ್ಲಿ ಶಮಂತ್ ಬ್ರೋ ಗೌಡ (Shamanth Bro Gowda) ಇದ್ದಾರೆ. ನವ ನಟಿಯ ಆಗಮನವೂ ಆಗಿದೆ. ಗೊಂಬೆ ಸೇರಿದಂತೆ ಹೆಸರಾಂತ ಕಲಾವಿದರು ಈ ಸೀರಿಯಲ್ ಅಲ್ಲಿ ಇದ್ದಾರೆ. ಅಗ್ನಿ ಮತ್ತು ಸಾಕ್ಷಿಯ ಪವರ್‌ಫುಲ್ ಕತೆಯ ಈ ಸೀರಿಯಲ್‌ನ ಪ್ರೋಮೋನೇ (Promo) ಹೆಚ್ಚು ಕುತೂಹಲ ಮೂಡಿಸುತ್ತಿದೆ. ಇದರೊಟ್ಟಿಗೆ ಪ್ರಸಾರದ ಡೇಟ್ ಕೂಡ ರಿವೀಲ್ ಆಗಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ.
ಅಗ್ನಿಸಾಕ್ಷಿ ಮತ್ತೆ ಶುರು; ಈ ಸಲ ಹೀರೋ “ಅಗ್ನಿ” ಧಗ ಧಗ ನೋಡಿ!
ಆದರೆ, ಸಾಕ್ಷಿ ಇಲ್ಲಿ ಅಷ್ಟೆ ಕೂಲ್ ನೋಡಿ. ಅದೆಷ್ಟೆ ಕಷ್ಟ ಬಂದರು ಅಷ್ಟೆ. ಅದನ್ನ ನಗುತ್ತಲೇ ಎದುರಿಸುತ್ತಾಳೆ. ಆದರೆ ಅಗ್ನಿ ಎದುರುಗೆ ಬಂದರೆ ಆಯಿತು. ಈಕೆನೂ ಅಗ್ನಿನೇ ಆಗೋದು.
ಈ ಅಗ್ನಿಸಾಕ್ಷಿ ಸೀರಿಯಲ್‌ನಲ್ಲಿ ಸಾಕ್ಷಿ ಪಾತ್ರವನ್ನ ವರ್ಷಿಣಿ ಗೌಡ ಮಾಡಿದ್ದಾರೆ. ಈ ಹಿಂದಿನ ಸೀರಿಯಲ್ ಹೆಚ್ಚು ಕಡಿಮೆ 6 ವರ್ಷ ಯಶಸ್ವಿಯಾಗಿಯೇ ರನ್ ಆಗಿತ್ತು.
ವಿಜಯ್ ಸೂರ್ಯ ಇಲ್ಲಿ ಸಿದ್ಧಾರ್ಥ್ ಪಾತ್ರ ಮಾಡಿದ್ದರು. ವೈಷ್ಣವಿ ಗೌಡ ಇಲ್ಲಿ ಸನ್ನಿಧಿ ಪಾತ್ರವನ್ನ ನಿರ್ವಹಿಸಿದ್ದರು. ಇವರ ಈ ಜೋಡಿ ಸಖತ್ ಹಿಟ್ ಆಗಿತ್ತು. ಇಬ್ಬರಿಗೂ ಒಳ್ಳೆ ಹೆಸರು ಬಂತು.
ಈಗಾಗಲೇ ಹೇಳಿದಂತೆ ಈ ಸಲದ ಅಗ್ನಿಸಾಕ್ಷಿ ಸೀರಿಯಲ್ ಅಲ್ಲಿ ಬ್ರೋಗೌಡ ಹಾಗೂ ವರ್ಷಿಣಿ ಗೌಡ ಇದ್ದಾರೆ. ಇವರ ಜೊತೆಗೆ ಬಿಗ್ ಬಾಸ್ ಖ್ಯಾತಿಯ ನಟಿ ಧ್ರುವಂತ್, ಗೊಂಬೆ ಖ್ಯಾತಿಯ ನೇಹಾ ಗೌಡ, ಹಾಸ್ಯ ನಟ ಮಂಜು ಪಾವಗಡ ಸೇರಿದಂತೆ ಇನ್ನು ಅನೇಕರು ಈ ಸೀರಿಯಲ್ ಅಲ್ಲಿ ಅಭಿನಯಿಸಿದ್ದಾರೆ.
ಅಗ್ನಿಸಾಕ್ಷಿ ಮತ್ತೆ ಶುರು; ಈ ಸಲ ಹೀರೋ “ಅಗ್ನಿ” ಧಗ ಧಗ ನೋಡಿ
(ಚಿತ್ರ ಕೃಪೆ: ಕಲರ್ಸ್ ಕನ್ನಡ ಇನ್‌ಸ್ಟಾಗ್ರಾಮ್)
ಆದರೆ, ಇವರದ್ದು ಗೆಸ್ಟ್ ರೋಲಾ? ಅಥವಾ ಲಾಂಗ್ ಟೈಮ್ ಇರೋ ರೋಲ್‌ಗಳನ್ನೆ ಮಾಡ್ತಾರಾ ಅನ್ನುವ ಕುತೂಹಲವೂ ಇದೆ. ಹಾಗೆ ಈ ಸೀರಿಯಲ್ ಪ್ರಸಾರದ ಡೇಟ್ ಮತ್ತು ಟೈಮ್ ಕೂಡ ರಿವೀಲ್ ಆಗಿದೆ. ಈಗಾಗಲೇ ಇದರ ಪ್ರೋಮೋ ಕೂಡ ರಿಲೀಸ್ ಆಗಿದೆ.
ಅಗ್ನಿಸಾಕ್ಷಿ ಸೀರಿಯಲ್ ಪ್ರೋಮೋದಲ್ಲಿ ಒಂದು ಡೈಲಾಗ್ ಇದೆ. ಇದು ಶಮಂತ್ ಪಾತ್ರದ ಚಿತ್ರಣ ಕಟ್ಟಿಕೊಡುತ್ತದೆ. ” ಅಗ್ನಿ ಪರೀಕ್ಷೆ ಕೇಳಿದ್ದೀನಿ. ಆದರೆ, ಅಗ್ನಿಗೇನೇ ಪರೀಕ್ಷೆನಾ” ಅನ್ನುವ ಶಮಂತ್ ಡೈಲಾಗ್ ಇಲ್ಲಿ ಹೆಚ್ಚು ಗಮನ ಸೆಳೆಯುತ್ತದೆ.
ಈ ಸೀರಿಯಲ್ ಇದೇ ತಿಂಗಳು ಅಂದ್ರೆ ಜೂನ್ ತಿಂಗಳಿನಿಂದಲೇ ಪ್ರಸಾರ ಆಗುತ್ತಿದೆ. ಭಾಗ್ಯಲಕ್ಷ್ಮಿ ಸೀರಿಯಲ್ ಬರ್ತಿದ್ದ ಸಮಯಕ್ಕೇನೆ ಈ ಸೀರಿಯಲ್ ಬರ್ತಿದೆ ನೋಡಿ.
ಜೂನ್-8 ರಿಂದ ಪ್ರಸಾರ
(ಚಿತ್ರ ಕೃಪೆ: ಕಲರ್ಸ್ ಕನ್ನಡ ಇನ್‌ಸ್ಟಾಗ್ರಾಮ್)
ಅಗ್ನಿಸಾಕ್ಷಿ ಸೀರಿಯಲ್ ಜೂನ್-8 ರಿಂದ ಸಂಜೆ-7 ಗಂಟೆಗೆ ಪ್ರಸಾರ ಆಗುತ್ತಿದೆ. ಈ ಒಂದು ಸೀರಿಯಲ್ ಸದ್ಯ ತನ್ನ ಪ್ರೋಮೋದಿಂದಲೇ ಕುತೂಹಲ ಮೂಡಿಸಿದೆ.
ಇಡೀ ಸೀರಿಯಲ್ ಯಾವ ರೀತಿ ಇರುತ್ತದೆ ಅನ್ನುವುದಕ್ಕೆ ಪ್ರೋಮೋ ಒಂದಷ್ಟು ಉತ್ತರ ಕೊಟ್ಟಿದೆ. ಅದು ಬಿಟ್ಟರೆ, ಅಗ್ನಿಸಾಕ್ಷಿ ಸೀರಿಯಲ್ ಮಿಸ್ ಮಾಡಿಕೊಂಡವರಿಗೆ ಹೊಸ ಅಗ್ನಿಸಾಕ್ಷಿ ಸೀರಿಯಲ್ ಹೊಸ ರೀತಿಯ ಅನುಭವ ಕೊಡುವಂತೆ ಇದೆ.
ಹಾಗೆ ಈ ಒಂದು ಸೀರಿಯಲ್ ಮಾಹಿತಿಯನ್ನ ಕಲರ್ಸ್ ಕನ್ನಡ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಪೇಜ್ ಅಲ್ಲಿ ಪ್ರೋಮೋ ಹಂಚಿಕೊಳ್ಳುವ ಮೂಲಕವೇ ಹೇಳಿಕೊಂಡಿದೆ ಅಂತ ಹೇಳಬಹುದು.
Bangalore [Bangalore],Bangalore,Karnataka
Jun 01, 2026 10:40 AM IST













