Actress: ಮುರಿದು ಬಿತ್ತಾ ‘ಗಂಗೆ ಬಾರೆ ತುಂಗೆ ಬಾರೆ’ ನಟಿ ನಿಶ್ಚಿತಾರ್ಥ? ಕನ್ನಡ ನಟಿಯ ಬಾಳಲ್ಲಿ ಆಗಿದ್ದೇನು? | | ACTPnews

ಮುರಿದು ಬಿತ್ತಾ 'ಗಂಗೆ ಬಾರೆ ತುಂಗೆ ಬಾರೆ' ನಟಿ ನಿಶ್ಚಿತಾರ್ಥ?


Last Updated:

ನಟಿ ಸುನೈನಾ ಕಳೆದ ಎರಡು ವರ್ಷಗಳ ಹಿಂದೆ,  ದುಬೈನಲ್ಲಿ ಅಪಾರ ಜನಪ್ರಿಯತೆ ಹೊಂದಿರುವ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಹಾಗೂ ಯೂಟ್ಯೂಬರ್ ಖಾಲಿದ್ ಅಲ್ ಅಮೇರಿ ಅವರೊಂದಿಗೆ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಎಂಬ ಸುದ್ದಿ ಎಲ್ಲೆಡೆ ವೈರಲ್ ಆಗಿತ್ತು, ಆದ್ರೆ ಇದೀಗ ಆ ನಿಶ್ಚಿತಾರ್ಥ ಮುರಿದು ಬಿದ್ದ ಬಗ್ಗೆ ವರದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಮುರಿದು ಬಿತ್ತಾ 'ಗಂಗೆ ಬಾರೆ ತುಂಗೆ ಬಾರೆ' ನಟಿ ನಿಶ್ಚಿತಾರ್ಥ?
ಮುರಿದು ಬಿತ್ತಾ ‘ಗಂಗೆ ಬಾರೆ ತುಂಗೆ ಬಾರೆ’ ನಟಿ ನಿಶ್ಚಿತಾರ್ಥ?

ಸೌತ್ ಸಿನಿರಂಗದ ಜನಪ್ರಿಯ ನಟಿ ಸುನೈನಾ (Actress Sunaina) ಇದೀಗ ಸುದ್ದಿಯಲ್ಲಿದ್ದಾರೆ. ಕನ್ನಡದ ‘ಗಂಗೆ ಬಾರೆ ತುಂಗೆ ಬಾರೆ’ (Gange Baare Tunge Baare) ಚಿತ್ರದ ಮೂಲಕ ಕನ್ನಡ ಪ್ರೇಕ್ಷಕರಿಗೆ ಪರಿಚಿತರಾದ ನಟಿ , ಕಳೆದ ಕೆಲವು ವರ್ಷಗಳಿಂದ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಹಾಗೆಯೇ ನಟಿ ಸುನೈನಾ ಕಳೆದ ಎರಡು ವರ್ಷಗಳ ಹಿಂದೆ,  ದುಬೈನಲ್ಲಿ ಅಪಾರ ಜನಪ್ರಿಯತೆ ಹೊಂದಿರುವ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಹಾಗೂ ಯೂಟ್ಯೂಬರ್ ಖಾಲಿದ್ ಅಲ್ ಅಮೇರಿ ಅವರೊಂದಿಗೆ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಎಂಬ ಸುದ್ದಿ ಎಲ್ಲೆಡೆ ವೈರಲ್ ಆಗಿತ್ತು, ಆದ್ರೆ ಇದೀಗ ಆ ನಿಶ್ಚಿತಾರ್ಥ ಮುರಿದು ಬಿದ್ದ ಬಗೆಗಿನ ವರದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

2024ರ ಜುಲೈನಲ್ಲಿ ನಟಿ ಸುನೈನಾ ಸೌದಿ ಅರೇಬಿಯಾ ಮತ್ತು ದುಬೈನ ಪ್ರಸಿದ್ಧ ಯೂಟ್ಯೂಬರ್ ಖಾಲಿದ್ ಅಲ್ ಅಮೇರಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸಂಗತಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು .ಆ ಬಳಿಕ ಸುನೈನಾ ಕೂಡ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಎಂಗ್ಮೆಂಟ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು . ನಿಶ್ಚಿತಾರ್ಥ ನಡೆದು ಎರಡು ವರ್ಷಗಳೇ ಕಳೆದ್ರು ಕೂಡಾ ಮದುವೆ ವಿಷಯ ಹೊರ ಬಿದ್ದಿರಲಿಲ್ಲ. ಹೀಗಿರುವಾಗಲೇ ಆ ನಿಶ್ಚಿತಾರ್ಥ ಮುರಿದುಬಿದ್ದಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಹಾಗೆಯೇ ಇಬ್ಬರೂ ಪರಸ್ಪರ ಸಾಮಾಜಿಕ ಜಾಲತಾಣಗಳಲ್ಲಿ ಅನ್‌ಫಾಲೋ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದ್ದು, ಇದು ಅವರ ಸಂಬಂಧದ ಬಗ್ಗೆ ಹೊಸ ಅನುಮಾನಗಳಿಗೆ ಕಾರಣವಾಗಿದೆ. ಬ್ರೇಕಪ್ ವದಂತಿಗಳಿಗೆ ಮತ್ತಷ್ಟು ಬಲ ನೀಡಿರುವ ಮತ್ತೊಂದು ಬೆಳವಣಿಗೆ ಎಂದರೆ, ಖಾಲಿದ್ ಅಲ್ ಅಮೇರಿ ಅವರು ಕಳೆದ ವರ್ಷದ ಡಿಸೆಂಬರ್‌ನಲ್ಲಿ ಸುನೈನಾ ಜೊತೆ ಹಂಚಿಕೊಂಡಿದ್ದ ಪೋಸ್ಟ್ ಅನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಿಂದ ತೆಗೆದುಹಾಕಿದ್ದಾರೆ.

ಖಾಲಿದ್ ಅಲ್ ಅಮೇರಿ ಯಾರು?

ಯುಎಇ ಮೂಲದ ಖಾಲಿದ್ ಅಲ್ ಅಮೇರಿ ಮಧ್ಯಪ್ರಾಚ್ಯದ ಅತ್ಯಂತ ಜನಪ್ರಿಯ ಡಿಜಿಟಲ್ ಕಂಟೆಂಟ್ ಕ್ರಿಯೇಟರ್‌ಗಳಲ್ಲಿ ಒಬ್ಬರಾಗಿದ್ದಾರೆ. ಕುಟುಂಬ ಜೀವನ, ಸಾಮಾಜಿಕ ಸಮಸ್ಯೆಗಳು ಹಾಗೂ ಸಾಂಸ್ಕೃತಿಕ ವಿಚಾರಗಳನ್ನು ಹಾಸ್ಯಮಯವಾಗಿ ಪ್ರಸ್ತುತಪಡಿಸುವ ಮೂಲಕ ಅವರು ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಹೊಂದಿರುವ ಖಾಲಿದ್, ಮಧ್ಯಪ್ರಾಚ್ಯದಲ್ಲಿ ಪ್ರಭಾವಿ ಡಿಜಿಟಲ್ ವ್ಯಕ್ತಿತ್ವವಾಗಿ ಗುರುತಿಸಿಕೊಂಡಿದ್ದಾರೆ.

ಖಾಲಿದ್ ಅಲ್ ಅಮೇರಿ ಈ ಹಿಂದೆ ಸಲಾಮಾ ಮೊಹಮ್ಮದ್ ಅವರನ್ನು ವಿವಾಹವಾಗಿದ್ದರು. ಹಲವು ವರ್ಷಗಳ ದಾಂಪತ್ಯ ಜೀವನದ ಬಳಿಕ ಇಬ್ಬರೂ ಫೆಬ್ರವರಿ 2024ರಲ್ಲಿ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದರು. ಈ ದಂಪತಿಗೆ ಇಬ್ಬರು ಪುತ್ರರು ಇದ್ದಾರೆ.

ಸುನೈನಾ ಕನ್ನಡ ಚಿತ್ರರಂಗಕ್ಕೆ 2008ರಲ್ಲಿ ಬಿಡುಗಡೆಯಾದ ‘ಗಂಗೆ ಬಾರೆ ತುಂಗೆ ಬಾರೆ’ ಚಿತ್ರದ ಮೂಲಕ ಪರಿಚಯವಾದರು. ಪ್ರಜ್ವಲ್ ದೇವರಾಜ್ ನಾಯಕನಾಗಿ ನಟಿಸಿದ್ದ ಈ ಚಿತ್ರದಲ್ಲಿ ಸುನೈನಾ ಅಭಿನಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ನಂತರ ಅವರು ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗಗಳಲ್ಲಿ ಹಲವು ಯಶಸ್ವಿ ಸಿನಿಮಾಗಳಲ್ಲಿ ನಟಿಸಿ ತಮ್ಮದೇ ಆದ ಸ್ಥಾನವನ್ನು ನಿರ್ಮಿಸಿಕೊಂಡರು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports