Last Updated:
ಬಹು ಭಾಷಾ ನಟಿ ಊರ್ವಶಿ ಕನ್ನಡಕ್ಕೆ ಮತ್ತೆ ಬಂದಿದ್ದಾರೆ.10 ವರ್ಷದ ಬಳಿಕ ಕನ್ನಡ ಸಿನಿಮಾ ಮಾಡ್ತಿದ್ದಾರೆ. ಮಗಳೂ ಈ ಚಿತ್ರದ ನಾಯಕಿ ಆಗಿದ್ದಾರೆ. ಈ ಸಿನಿಮಾದ ಇನ್ನಷ್ಟು ಅಧಿಕೃತ ಮಾಹಿತಿ ಇಲ್ಲಿದೆ ಓದಿ.
ಬಹುಭಾಷಾ ನಟಿ ಊರ್ವಶಿ (Urvashi) ಅವರು ಕನ್ನಡಕ್ಕೆ ಮರಳಿ ಬಂದಿದ್ದಾರೆ. 10 ವರ್ಷದ ಬಳಿಕ ಕನ್ನಡಕ್ಕೆ ಕಾಲಿಟ್ಟಿದ್ದಾರೆ. ಕೊನೆಯದಾಗಿ ರಾಮ ಶಾಮ ಭಾಮ ಚಿತ್ರದಲ್ಲಿ ಇವರು ನಟಿಸಿದ್ದರು. ಅದೆಷ್ಟೂ ಆಫರ್ಗಳು ಇವರನ್ನ ಹುಡುಕಿಕೊಂಡು ಹೋಗಿವೆ. ಆದರೆ, ಇವರು ಯಾವುದನ್ನು ಒಪ್ಪಿರಲಿಲ್ಲ. ನಟ ಭುವನ್ ಪೊನ್ನಣ್ಣ (Bhuvan Ponnanna) ಹಾಗೂ ನಟಿ ಹರ್ಷಿಕಾ ಪೂಣಚ್ಚ (Harshika Poonachha) ಅವರು ಕತೆ ಹೇಳಿದ್ಮೇಲೆ ಇವರಿಗೆ ಇಷ್ಟಾನೂ ಆಗಿದೆ. ಇಡೀ ತಂಡದ ಐಡಿಯಾ ಹಿಡಿಸಿದೆ. ಈ ಕಾರಣಕ್ಕೇನೆ ಕನ್ನಡ ಚಿತ್ರ (Kannada Movie) ಮಾಡೋಕೆ ಊರ್ವಶಿ ಅವರು ಒಪ್ಪಿದ್ದಾರೆ. ಜೊತೆಗೆ ಇನ್ನೂ ಒಂದು ವಿಷಯವೂ ಇದೆ. ಅದು ಏನು ಅನ್ನೋದು ಇಲ್ಲಿದೆ ಓದಿ.
ಬುಲ್ಲಿ ಚಿತ್ರದಲ್ಲಿ ಊರ್ವಶಿ ಮಹತ್ವದ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ನಾಯಕಿ ಪಾತ್ರವೂ ಇದೆ. ಇದನ್ನ ಊರ್ವಶಿ ಅವರ ಮಗಳು ತೇಜ್ ಊರ್ವಶಿ ನಾಯರ್ ಮಾಡುತ್ತಿದ್ದಾರೆ.
ಬುಲ್ಲಿ ಸಿನಿಮಾ
ಈ ಮೂಲಕ ತಾಯಿ ಮತ್ತು ಮಗಳು ಒಂದೇ ಚಿತ್ರದಲ್ಲಿ ಬರ್ತಿದ್ದಾರೆ. ಬೇರೆ ಭಾಷೆಯಲ್ಲಿ ಒಳ್ಳೆ ಅವಕಾಶಗಳು ಇವೆ. ಆದರೆ, ತೇಜ್ ಕನ್ನಡ ಚಿತ್ರದ ಮೂಲಕವೇ ನಾಯಕಿ ಆಗುತ್ತಿದ್ದಾರೆ. ಊರ್ವಶಿ 10 ವರ್ಷ ಆದ್ಮೇಲೆ ಕನ್ನಡಕ್ಕೆ ಕಾಲಿಟ್ಟಿದ್ದಾರೆ. ವಿಶೇಷವೆಂದ್ರೆ ಈ ಸಲವು ಮಗಳು ಬರ್ತಿದ್ದಾರೆ.
ಬುಲ್ಲಿ ಅನ್ನುವ ಪದದ ಅರ್ಥ ಏನು ಗೊತ್ತಾ? ಇದು ನಾಯಕನ ಹೆಸರೇ ಆಗಿದೆ. ಪೂರ್ತಿ ಹೆಸರು ಬಲರಾಮ ಅಂತಲೇ ಇದೆ. ಇದನ್ನೆ ಚಿಕ್ಕದಾಗಿ ಬುಲ್ಲಿ ಅಂತಲೇ ಕರೀತಾರೆ. ಅದನ್ನ ಚಿತ್ರದ ಟೈಟಲ್ ಆಗಿ ಮಾಡಿಕೊಂಡಿದ್ದಾರೆ.
ಈ ಚಿತ್ರದಲ್ಲಿ ಭುವನ್ ಪೊನ್ನಣ್ಣ ನಾಯಕರಾಗಿದ್ದಾರೆ. ಬಲರಾಮನ ಪಾತ್ರ ಮಾಡಿದ್ದಾರೆ. ಈ ಒಂದು ಚಿತ್ರ ಪಕ್ಕಾ ಕಾಮಿಡಿ ಚಿತ್ರವೇ ಆಗಿದೆ. ಫಸ್ಟ್ ಟೈಮ್ ಈ ರೀತಿಯ ಚಿತ್ರ ಮಾಡ್ತಿದ್ದಾರೆ. ಇವರ ಕೆಲಸ ನೋಡಿ ನಟಿ ಊವರ್ಶಿ ತುಂಬಾನೆ ಖುಷಿಪಟ್ಟಿದ್ದಾರೆ. ಭುವನ್ ಒಳ್ಳೆ ನಟ ಆಗ್ತಾರೆ ಅಂತಲೂ ಹರೆಸಿದ್ದಾರೆ.
ಬುಲ್ಲಿ ಚಿತ್ರದ ಮೊದಲ ಹಂತದ ಶೂಟಿಂಗ್ ಕಂಪ್ಲೀಟ್ ಆಗಿದೆ. ಈ ಒಂದು ಹಂತದಲ್ಲಿ ಊರ್ವಶಿ ಅವರ ಪಾತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ.
ಬುಲ್ಲಿ ಸಿನಿಮಾ
ಇನ್ನು ಈ ಚಿತ್ರದ ನಾಯಕಿಯ ಪಾತ್ರ ಹೆಚ್ಚಿನ ಮಾಹಿತಿ ಏನು ರಿವೀಲ್ ಆಗಿಲ್ಲ. ಆದರೆ, ಚಿತ್ರದ ಟೈಟಲ್ ರಿವೀಲ್ ಆಗಿದೆ. ರಾಮ ಶಾಮ ಭಾಮ ಆದ್ಮೇಲೆ ಊರ್ವಶಿ ಅವರು ಕನ್ನಡಕ್ಕೆ ಬಂದಿದ್ದಾರೆ ಅನ್ನುವುದನ್ನ ಚಿತ್ರ ತಂಡ ಹೇಳಿಕೊಂಡಿದೆ.
ಊರ್ವಶಿ ಅವರ ದೊಡ್ಡ ಅಭಿಮಾನಿ ಕೂಡ ಆಗಿದ್ದೇನೆ. ಇವರ ಜೊತೆಗೆ ನಟಿಸಿರೋದು ಖುಷಿಕೊಟ್ಟಿದೆ. ನಟನಾ ಜೀವನದಲ್ಲಿ ಇದು ನನಗೆ ಅತ್ಯಂತ ಖುಷಿ ಕೊಟ್ಟ ಚಿತ್ರವೂ ಆಗಿದೆ. ಇದನ್ನ ಜನ ಕೂಡ ಮೆಚ್ಚಿಕೊಳ್ಳುತ್ತಾರೆ ಅಂತಲೇ ಓಂ ಪ್ರಕಾಶ್ ರಾವ್ ಹೇಳಿಕೊಂಡಿದ್ದಾರೆ.
Bangalore,Karnataka
Jul 29, 2026 11:20 PM IST














