Last Updated:
ಶ್ರೀದೇವಿ ಜನ್ಮದಿನದ ಹಿನ್ನೆಲೆಯಲ್ಲಿ ಜಾಗತಿಕ ನಟಿ ಪ್ರಿಯಾಂಕಾ ಚೋಪ್ರಾ (Actress Priyanka Chopra) ವಿಶೇಷ ಗೌರವ ಸಲ್ಲಿಸಿದ್ದು, ಶ್ರೀದೇವಿ ಜೀವನ ಆಧಾರಿತ ಮುಂಬರುವ ಜೀವನಚರಿತ್ರೆ ಪುಸ್ತಕ ಎಂಪ್ರೆಸ್: ದಿ ಡೆಫಿನಿಟಿವ್ ಬಯಾಗ್ರಫಿ ಆಫ್ ಶ್ರೀದೇವಿಯ ಮೊದಲ ಲುಕ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಭಾರತೀಯ ಚಿತ್ರರಂಗದಲ್ಲಿ ತಮ್ಮ ಅಭಿನಯ, ಸೌಂದರ್ಯ ಮತ್ತು ವಿಭಿನ್ನ ಪಾತ್ರಗಳ ಮೂಲಕ ಅಚ್ಚಳಿಯದ ಛಾಪು ಮೂಡಿಸಿರುವ ದಿವಂಗತ ನಟಿ ಶ್ರೀದೇವಿ (Actress Sridevi) ಇಂದಿಗೂ ಕೋಟ್ಯಂತರ ಅಭಿಮಾನಿಗಳ ಮನಸ್ಸಿನಲ್ಲಿ ಜೀವಂತವಾಗಿದ್ದಾರೆ. ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿ ಭಾರತದ ಮೊದಲ ಮಹಿಳಾ ಸೂಪರ್‌ಸ್ಟಾರ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ಅವರ ಜೀವನ ಮತ್ತು ಸಿನಿ ಪಯಣ ಇದೀಗ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಶ್ರೀದೇವಿ ಜನ್ಮದಿನದ ಹಿನ್ನೆಲೆಯಲ್ಲಿ ಜಾಗತಿಕ ನಟಿ ಪ್ರಿಯಾಂಕಾ ಚೋಪ್ರಾ (Actress Priyanka Chopra) ವಿಶೇಷ ಗೌರವ ಸಲ್ಲಿಸಿದ್ದು, ಶ್ರೀದೇವಿ ಜೀವನ ಆಧಾರಿತ ಮುಂಬರುವ ಜೀವನಚರಿತ್ರೆ ಪುಸ್ತಕ ಎಂಪ್ರೆಸ್: ದಿ ಡೆಫಿನಿಟಿವ್ ಬಯಾಗ್ರಫಿ ಆಫ್ ಶ್ರೀದೇವಿಯ ಮೊದಲ ಲುಕ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.














