Actress Ramya: ‘ನಾನು ಮಂಡ್ಯದವಳು’! ಕಾವೇರಿ ನದಿ ನೀರಿನ ವಿಚಾರವಾಗಿ ನಟಿ ರಮ್ಯಾ ಹೇಳಿದ್ದೇನು? | | ACTPnews

ನಟಿ ರಮ್ಯಾ


Last Updated:

ಮಹಿಳಾ ಆರೋಗ್ಯದ ಬಗ್ಗೆ ನಡೆದ ಸಭೆಯಲ್ಲಿ ಭಾಗಿಯಾಗಿದ್ದ ನಟಿ ರಮ್ಯಾ ಅವರು, ಕಾವೇರಿ ನದಿ ನೀರಿನ ವಿಚಾರಕ್ಕೆ ಸಂಬಂಧಪಟ್ಟ ಪ್ರತಿಕ್ರಿಯೆ ನೀಡಿದ್ರು.

ನಟಿ ರಮ್ಯಾ
ನಟಿ ರಮ್ಯಾ

ಬೆಂಗಳೂರು: ತಮಿಳುನಾಡಿಗೆ (Tamil Nadu) ಕಾವೇರಿ (Cauvery River) ಹರಿಸಬೇಕು ಅನ್ನೋ ಆದೇಶ ಹೊರಬಿದ್ದ ಬೆನ್ನಲ್ಲೇ ರೈತರು (Farmer) ಅಕ್ಷರಶಃ ಕೆರಳಿ ಕೆಂಡವಾಗಿದ್ದರು. ಊರೂರಲ್ಲೂ ಹೋರಾಟ ಶುರು ಮಾಡಿದ್ರು. ಇನ್ನೊಂದೆಡೆ ಕರ್ನಾಟಕ ಬಂದ್‌ಗೂ (Karnataka Bandh) ಕರೆ ನೀಡಲಾಗಿದೆ. ಜೊತೆಗೆ ಸರ್ಕಾರ ಕೂಡ ಕಾನೂನು ಹೋರಾಟದ ಹಾದಿ ಹಿಡಿದಿದೆ. ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಕಾವೇರಿ ಕಿಚ್ಚು ಜೋರಾಗಿತ್ತು. ಮಂಡ್ಯ, ಬೆಂಗಳೂರು (Bengaluru) ಸೇರಿದಂತೆ ರೈತರು, ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ರು. CWRC ಆದೇಶದ ವಿರುದ್ಧ ಆಕ್ರೋಶ ಹೊರಹಾಕಿದ್ರು. ಇದೀಗ ಕಾವೇರಿ ನದಿ ನೀರಿನ ವಿಚಾರವಾಗಿ ನಟಿ ರಮ್ಯಾ ಅವರು ರಿಯಾಕ್ಟ್​ ಮಾಡಿದ್ದಾರೆ.

ರಮ್ಯಾ ಹೇಳಿದ್ದೇನು?

ಕಾವೇರಿ ವಿಚಾರದ ಬಗ್ಗೆ ನಟಿ ರಮ್ಯಾ ಅವರು ಮಾತನಾಡಿದ್ದಾರೆ. ಇಂದು ಬೆಂಗಳೂರಿನಲ್ಲಿ ನಡೆದ ಋತುಚಕ್ರ ಹಾಗೂ ಮಹಿಳಾ ಆರೋಗ್ಯದ ಬಗ್ಗೆ ನಡೆದ ಸಭೆಯಲ್ಲಿ ಭಾಗಿಯಾಗಿದ್ದ ನಟಿ ರಮ್ಯಾ ಅವರು, ಕಾವೇರಿ ನದಿ ನೀರಿನ ವಿಚಾರಕ್ಕೆ ಸಂಬಂಧಪಟ್ಟ ಪ್ರತಿಕ್ರಿಯೆ ನೀಡಿದ್ರು. ನಾನು ಮಂಡ್ಯದವಳು, ಹೀಗಾಗಿ ರೈತರಿಗೆ ನನ್ನ ಸಪೋರ್ಟ್ ಮಾಡ್ತೇನೆ ಎಂದು ಹೇಳಿದರು. ಇನ್ನು ಇದೇ ವೇಳೆ ಕ್ಯಾಬಿನೆಟ್​ನಲ್ಲಿ ಮಹಿಳಾ ಮೀಸಲಾತಿ ವಿಚಾರದ ಬಗ್ಗೆ ಮಾತನಾಡಿದ ಅವರು, ಮಹಿಳೆಯರಿಗೆ ಒಂದೆರಡು ಸ್ಥಾನ ಕೊಡ್ಬೇಕಿತ್ತು, ಇದು ನನ್ನ ಅಭಿಪ್ರಾಯ ಎಂದು ಉತ್ತರಿಸಿದರು.
ಇದನ್ನೂ ಓದಿ: Crime News: ಬರ್ತ್​ಡೇ ಪಾರ್ಟಿಗೆ ಹೋದವಳು ದುರಂತ ಅಂತ್ಯ! ಹೆಣ್ಮಗಳ ಸಾವು ನಿಗೂಢ, ನಿರ್ಜನ ಪ್ರದೇಶದಲ್ಲಿ ಆಗಿದ್ದೇನು?

ಇನ್ನು, ರಾಜ್ಯ ಸರ್ಕಾರ ಋತುತಾರೆ ಎಂಬ ಯೋಜನೆಯನ್ನು ಜಾರಿ ತಂದಿದ್ದು, ಈ ಯೋಜನೆಗೆ ನಟಿ ರಮ್ಯಾ ಅವರು ಅಂಬಾಸಿಡರ್ ಆಗಿ ನೇಮಕವಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಾತನಾಡಿರುವ ನಟಿ ರಮ್ಯಾ, ಬೇರೆ ದೇಶಗಳಿಗೆ ಹೋಲಿಸಿದ್ರೆ ಭಾರತದಲ್ಲಿ ಮೆನೋಪಾಸ್ ಬೇಗ ಕಾಣಿಸಿಕೊಳ್ಳುತ್ತೆ. ಸಿಟಿಯಲ್ಲಿ ಅತಿ ಹೆಚ್ಚಿನ ಮಹಿಳೆಯರು ಮೆನೋಪಾಸ್‌ ಸಮಯದಲ್ಲಿ ಸಮಸ್ಯೆಯಿಂದ ಬಳಲುತ್ತಾರೆ. ಯಾವೆಲ್ಲಾ ಸಮಸ್ಯೆಗಳು ಕಾಣಿಸಿಕೊಳ್ಳುತ್ತೆ. ಟ್ರೀಟ್‌ಮೆಂಟ್‌ ಬಗ್ಗೆ ಸಿಟಿ ಭಾಗದವರಿಗೆ ಹೆಚ್ಚಾಗಿ ಗೊತ್ತಿಲ್ಲ, ಗ್ರಾಮೀಣ ಭಾಗದವರಿಗೆ ಇದರ ಬಗ್ಗೆ ಮಾಹಿತಿ ಅತಿ ಕಡಿಮೆ ಇದೆ. ಹೀಗಾಗಿ ಇದರ ಬಗ್ಗೆ ಗೃಹಾರೋಗ್ಯ ಪುಸ್ತಕದಲ್ಲಿ ಸೇರಿಸಿ ಅಂತ ಮನವಿ ಇಟ್ಟುಕೊಂಡು ಬಂದ್ವಿ, ಆದ್ರೆ ಈಗ ನನ್ನನ್ನೇ ಬ್ರ್ಯಾಂಡ್ ಅಂಬಾಸಿಡರ್ ಮಾಡಿದ್ದಾರೆ. ಖುಷಿ ಇದೆ ಎಂದು ಹೇಳಿದರು.

ಮುಂದುವರಿದು ಮಾತನಾಡಿರುವ ನಟಿ ರಮ್ಯಾ, ಪೋಸ್ಟ್ ಹಾಗೂ ಪ್ರೀ ಮೆನೋಪಾಸ್ ‌ಬಗ್ಗೆ ಕೆಲವೊಂದಿಷ್ಟು ಪ್ರಶ್ನೆಗಳು ಇರುವ ಫಾರಂ ರೆಡಿ ಮಾಡಿ ಅದನ್ನ ಮಹಿಳೆಯರಿಗೆ ಕೊಟ್ಟು ಮಾಹಿತಿ ಪಡೆದುಕೊಳ್ಳಲಾಗುತ್ತೆ. ಅದರಲ್ಲಿ ಸಮಸ್ಯೆ ಇದ್ದವರಿಗೆ ಸ್ಕ್ಯಾನಿಂಗ್ ಮಾಡಿ ನಂತರ ಟ್ರೀಟ್‌ಮೆಂಟ್ ಕೊಡಲಾಗುತ್ತೆ. ನಾವು ಈ ವಿಚಾರವಾಗಿ ಸಿಟಿ ಹಾಗೂ ಗ್ರಾಮೀಣ ಭಾಗದಲ್ಲಿ ಅವೆರ್ನೆಸ್ ಕ್ರಿಯೆಟ್ ಮಾಡಲಿದ್ದೇವೆ. ಮೆನೋಪಾಸ್ ಸಮಯದಲ್ಲಿ ಸಾಕಷ್ಟು ಲಕ್ಷಣಗಳು ಕಾಣಿಸಿಕೊಳ್ಳುತ್ತೆ. ಇದರ ಬಗ್ಗೆ ಮಾಹಿತಿ ಇರಲ್ಲ. ಹೀಗಾಗಿ ಇದರ ಬಗ್ಗೆ ಅರಿವು ಮೂಡಿಸುತ್ತೇವೆ ಎಂದು ಹೇಳಿದರು.

(ವರದಿ: ಹಂಸ ಶ್ಯಾಮಲ, ನ್ಯೂಸ್​18 ಕನ್ನಡ, ಬೆಂಗಳೂರು)



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed