Actress: ಸೂಪರ್ ಹಿಟ್ ‘ಸ್ಪೈಡರ್-ಮ್ಯಾನ್’ ಚಿತ್ರದ ನಟಿ ಇನ್ನಿಲ್ಲ! ಖ್ಯಾತ ನಟಿಯ ನಿಧನಕ್ಕೆ ಅಭಿಮಾನಿಗಳು ಭಾವುಕ | | ACTPnews

ಸ್ಪೈಡರ್ ಮ್ಯಾನ್


Last Updated:

ಸ್ಪೈಡರ್ ಮ್ಯಾನ್ (Spider-Man_ ಸಿನಿಮಾದ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದ ನಟಿ ಮೇರಿ ರಿವೆರಾ ನಿಧನರಾಗಿದ್ದು, ಅವರ ಅಗಲಿಕೆಗೆ ಅಭಿಮಾನಿಗಳು, ಕುಟುಂಬಸ್ಥರು ಹಾಗೂ ಆಪ್ತರು ಕಂಬನಿ ಮಿಡಿದಿದ್ದಾರೆ

ಸ್ಪೈಡರ್ ಮ್ಯಾನ್
ಸ್ಪೈಡರ್ ಮ್ಯಾನ್

ಹಾಲಿವುಡ್ ಚಿತ್ರರಂಗದಿಂದ ದುಃಖದ ಸುದ್ದಿಯೊಂದು ಹೊರಬಿದ್ದಿದೆ. ಸ್ಪೈಡರ್ ಮ್ಯಾನ್ (Spider-Man_ ಸಿನಿಮಾದ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದ ನಟಿ ಮೇರಿ ರಿವೆರಾ ನಿಧನರಾಗಿದ್ದು, ಅವರ ಅಗಲಿಕೆಗೆ ಅಭಿಮಾನಿಗಳು, ಕುಟುಂಬಸ್ಥರು ಹಾಗೂ ಆಪ್ತರು ಕಂಬನಿ ಮಿಡಿದಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ Spider-Man: Brand New Day ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿರುವ ಸಮಯದಲ್ಲೇ ಮೇರಿ ರಿವೆರಾ ಅವರ ನೆನಪುಗಳು ಮತ್ತೆ ಅಭಿಮಾನಿಗಳ ಮನಸ್ಸಿನಲ್ಲಿ ಮೂಡಿವೆ. ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ಮಂದಿ ಅವರಿಗೆ ಭಾವಪೂರ್ಣ ನಮನ ಸಲ್ಲಿಸುತ್ತಿದ್ದಾರೆ.

ಮೇರಿ ರಿವೆರಾ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸಲು ಆರಂಭಿಸಿದ್ದಾರೆ. ಅನೇಕರು ಅವರ ಸಿನಿಮಾಗಳನ್ನು ನೆನಪಿಸಿಕೊಂಡು ಭಾವುಕ ಸಂದೇಶಗಳನ್ನು ಹಂಚಿಕೊಂಡಿದ್ದಾರೆ. ಅವರ ಆಪ್ತರಲ್ಲಿ ಒಬ್ಬರು, ಟಿಟಾ ಮೇರಿ, ನನ್ನ ಮಾರ್ಗದರ್ಶಕಿಯಾಗಿ ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದು, ಈ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮೇರಿ ರಿವೆರಾ ಅವರು 2021ರಲ್ಲಿ ಬಿಡುಗಡೆಯಾದ ‘ಸ್ಪೈಡರ್ ಮ್ಯಾನ್’ ಸಿನಿಮಾದಲ್ಲಿ ಅಭಿನಯಿಸಿದ್ದರು. ಅವರ ಪಾತ್ರ ಹೆಚ್ಚು ಸಮಯ ಕಾಣಿಸಿಕೊಳ್ಳದಿದ್ದರೂ, ಅವರು ಮೂಡಿಸಿದ ಅಭಿನಯ ಪ್ರೇಕ್ಷಕರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿತ್ತು. ಇದೇ ಕಾರಣಕ್ಕೆ ಹೊಸ ತಲೆಮಾರಿನ ಪ್ರೇಕ್ಷಕರಿಗೂ ಅವರ ಪರಿಚಯ ಮುಂದುವರಿದಿದೆ. ಅವರ ನೈಸರ್ಗಿಕ ಅಭಿನಯ ಮತ್ತು ವ್ಯಕ್ತಿತ್ವ ಅನೇಕ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು.

ಇದನ್ನೂ ಓದಿ: Divya Bharti: ನಟಿ ದಿವ್ಯ ಭಾರತಿ ಸಾವಿಗೂ ಮುನ್ನ ಹೇಳಿದ ಕೊನೆಯ ಮಾತು ಇದು! ವರ್ಷಗಳ ಬಳಿಕ ಹೊರಬಿತ್ತು ಶಾಕಿಂಗ್ ಸಂಗತಿ

ಇತ್ತೀಚೆಗೆ ಬಿಡುಗಡೆಯಾದ Spider-Man: Brand New Day ಸಿನಿಮಾ ವಿಶ್ವದಾದ್ಯಂತ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಚಿತ್ರದ ಯಶಸ್ಸಿನ ನಡುವೆ ಹಿಂದಿನ ‘ಸ್ಪೈಡರ್ ಮ್ಯಾನ್’ ಸಿನಿಮಾಗಳಲ್ಲಿ ಅಭಿನಯಿಸಿದ ಕಲಾವಿದರ ಕುರಿತು ಅಭಿಮಾನಿಗಳು ಮತ್ತೆ ಚರ್ಚೆ ಆರಂಭಿಸಿದ್ದಾರೆ. ಇದೇ ಸಂದರ್ಭದಲ್ಲಿ ಮೇರಿ ರಿವೆರಾ ಅವರ ನಿಧನದ ಸುದ್ದಿ ಹೊರಬಿದ್ದಿರುವುದು ಅಭಿಮಾನಿಗಳನ್ನು ಮತ್ತಷ್ಟು ಭಾವುಕರನ್ನಾಗಿಸಿದೆ. ಹೊಸ ಸಿನಿಮಾ ನೋಡಿದ ಅನೇಕರು ಅವರ ಹಿಂದಿನ ಅಭಿನಯವನ್ನು ನೆನಪಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಗೌರವ ಸಲ್ಲಿಸುತ್ತಿದ್ದಾರೆ.

ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಮೇರಿ ರಿವೆರಾ ಅವರ ಅಗಲಿಕೆ ಹಾಲಿವುಡ್‌ಗೆ ದೊಡ್ಡ ನಷ್ಟವೆಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಅವರು ನಟಿಸಿದ ಪಾತ್ರಗಳ ಸಂಖ್ಯೆ ಕಡಿಮೆಯಿದ್ದರೂ, ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬುವ ಕಲಾವಿದೆಯಾಗಿ ಹೆಸರು ಗಳಿಸಿದ್ದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed