Last Updated:
ತಮ್ಮನ್ನು ಭೇಟಿ ಮಾಡುವ ಸಂದರ್ಭದಲ್ಲಿ ಯಾರು ಹೂಗುಚ್ಛ ಹಾಗೂ ಶಾಲು ತರಬಾರದು ಎಂದು ಸೂಚನೆ ನೀಡಿರುವ ಸಿಎಂ ವಿಜಯ್ ಅವರ ನಡೆಗೆ ಮೆಚ್ಚುಗೆ ಸೂಚಿಸಿರುವ ನಟ ವಿಶಾಲ್, ಈ ಹಣವನ್ನು ಮೂವರು ಬಡ ಬಾಲಕಿಯರ ಶಿಕ್ಷಣಕ್ಕೆ ದೇಣಿಗೆಯಾಗಿ ನೀಡಿದ್ದಾರೆ.
ಮುಖ್ಯಮಂತ್ರಿ ವಿಜಯ್ (Tamil Nadu CM Vijay) ಅವರು ಹೂಗುಚ್ಛ ಮತ್ತು ಶಾಲು ನಿರಾಕರಿಸಿದ ನಂತರ, ಹೂಗುಚ್ಛ ಮತ್ತು ಶಾಲು ಹೊದಿಸಲು ಉದ್ದೇಶಿಸಿದ್ದ ಹಣವನ್ನು ತಮಿಳುನಾಡಿನ ಮೂವರು ಬಡ ಹುಡುಗಿಯರ ಶಿಕ್ಷಣಕ್ಕಾಗಿ (Girls Education) ಬಳಸಿದ್ದೇನೆ ಎಂದು ನಟ ವಿಶಾಲ್ (Actor Vishal) ಹೇಳಿದ್ದಾರೆ. ಎಕ್ಸ್‌ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ, ಮುಖ್ಯಮಂತ್ರಿಯವರೊಂದಿಗೆ ನಡೆದ ಭೇಟಿ ತುಂಬಾ ಆತ್ಮೀಯ ಮತ್ತು ವೈಯಕ್ತಿಕವಾಗಿತ್ತು ಎಂದು ತಿಳಿಸಿದ ಅವರು, ಮುಖ್ಯಮಂತ್ರಿ ತಮ್ಮನ್ನು ‘ಡಾರ್ಲಿಂಗ್’ (Darling CM) ಎಂದು ಕರೆದ ಕ್ಷಣ ವಿಶೇಷವಾಗಿ ನೆನಪಿನಲ್ಲಿ ಉಳಿದಿದೆ ಎಂದು ಹೇಳಿದ್ದಾರೆ.
ಅದೇ ಆತ್ಮೀಯತೆ, ಡಾರ್ಲಿಂಗ್ ಸಿಎಂ ಎಂಬ ವಿಶಾಲ್!
ಇಷ್ಟಲ್ಲದೇ ನಟ ವಿಶಾಲ್ ಅವರು ಕಲೈನಾರ್ ಅಯ್ಯ ಅವರಿಂದ ಹಿಡಿದು ಜಯಲಲಿತಾ ಅಮ್ಮ ನಿಂದ ಸ್ಟಾಲಿನ್ ಅಂಕಲ್‌ನಿಂದ ನನ್ನ ಪ್ರೀತಿಯ ಉದಯ ವರೆಗೆ ಎಲ್ಲರನ್ನು ಪ್ರೀತಿಸುತ್ತಾರೆ. ಇದೀಗ ನಮ್ಮ ರಾಜ್ಯದ ಮುಖ್ಯಮಂತ್ರಿಗೆ ಡಾರ್ಲಿಂಗ್ ಎಂದು ಹೇಳುವುದಕ್ಕೆ ಸಂತೋಷವಾಯಿತು. ಅವರು ನನ್ನಲ್ಲಿರುವ ಅಭಿಮಾನದ ಕ್ಷಣ ಯಾವಾಗಲೂ ಉಳಿದಿರುತ್ತವೆ ಎಂದು ಸಹ ಬರೆದುಕೊಂಡಿದ್ದಾರೆ.
ವಿಶಾಲ್ ಅವರು ಮುಖ್ಯಮಂತ್ರಿ ಅವರ ಸರಳತೆ ಮತ್ತು ಸಾಮಾಜಿಕ ಕಾಳಜಿಯನ್ನು ಮೆಚ್ಚಿ, ಕಡ್ಡಾಯವಾಗಿ ನೀಡಬೇಕಿದ್ದ ಹೂಗುಚ್ಛ ಹಾಗೂ ಶಾಲನ್ನು ಸ್ವೀಕರಿಸದೇ ಇದ್ದುದಕ್ಕಾಗಿ ಧನ್ಯವಾದ ತಿಳಿಸಿದರು. ಆ ಹಣವನ್ನು ಮುಖ್ಯಮಂತ್ರಿ ಅವರ ಹೆಸರಿನಲ್ಲಿ ತಮಿಳುನಾಡಿನ ಆರ್ಥಿಕವಾಗಿ ಹಿಂದುಳಿದ ಮೂವರು ಅರ್ಹ ಬಾಲಕಿಯರ ಶಿಕ್ಷಣಕ್ಕಾಗಿ ಬಳಸಿರುವುದಾಗಿ ತಿಳಿಸಿದ ಅವರು, ಈ ನೆರವಿನಿಂದ ಆ ಬಾಲಕಿಯರು ಉತ್ತಮ ಭವಿಷ್ಯ ಕಟ್ಟಿಕೊಳ್ಳಲಿದ್ದು, ಮುಖ್ಯಮಂತ್ರಿ ಅವರ ಈ ಸಹಾಯವನ್ನು ಜೀವನಪೂರ್ತಿ ಕೃತಜ್ಞತೆಯಿಂದ ನೆನಪಿಸಿಕೊಳ್ಳಲಿದ್ದಾರೆ ಎಂದು ಹೇಳಿದರು.
Dearest darling CM Vijay @CMOTamilnadu
The word “darling “ hasn’t changed which I used to call u for the last so many years since i knew u from Loyola college. It all started wen I got to know you as a budding star and then seeing u rise up the ladder as the SUPERSTAR facing… pic.twitter.com/iTLAeCZ3cp
— Vishal (@VishalKOfficial) June 16, 2026
ನಟ ವಿಶಾಲ್ ಅವರು ತಮ್ಮ ಪೋಸ್ಟ್‌ನಲ್ಲಿ ತಮ್ಮ ಕುಟುಂಬದಲ್ಲಿ ಮೊದಲ ಪದವೀಧರರಾಗಲು ಮುಂದಾಗಿರುವ ಮೂವರು ವಿದ್ಯಾರ್ಥಿನಿಯರ ಹೆಸರುಗಳು ಹಾಗೂ ಅವರು ವ್ಯಾಸಂಗ ಮಾಡುತ್ತಿರುವ ಕೋರ್ಸ್‌ಗಳ ವಿವರಗಳನ್ನು ಹಂಚಿಕೊಂಡಿದ್ದಾರೆ. ಮುಖ್ಯಮಂತ್ರಿಯವರ ಪರವಾಗಿ ಮತ್ತು ಅವರ ಹೆಸರಿನಲ್ಲಿ ಈ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ನೆರವು ನೀಡಿರುವುದಾಗಿ ತಿಳಿಸಿದ ಅವರು, ಮತ್ತೊಮ್ಮೆ ಮುಖ್ಯಮಂತ್ರಿಗೆ ಕೃತಜ್ಞತೆ ಸಲ್ಲಿಸಿದರು. ಅವರ ಆಡಳಿತಾವಧಿಯಲ್ಲಿ ತಮಿಳುನಾಡು ಇನ್ನಷ್ಟು ಅಭಿವೃದ್ಧಿ ಹೊಂದಿ ಉತ್ತಮ ಸಾಧನೆ ಮಾಡಲಿ ಎಂದು ಹಾರೈಸಿದ ವಿಶಾಲ್, ರಾಜ್ಯದ ಅತ್ಯುತ್ತಮ ಬೆಳವಣಿಗೆಯನ್ನು ನೋಡಲು ತಾವು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ.
ಟಿವಿಕೆ ಪಕ್ಷದ ಮುಖ್ಯ ಕಚೇರಿಯಲ್ಲಿ ವಿಜಯ್ ಅವರನ್ನು ಭೇಟಿಯಾದ ನಟಿ ಸಿಮ್ರಾನ್ ಮತ್ತು ನಟ ಸಿಂಬು ತಮಿಳುನಾಡಿನ ಮುಖ್ಯಮಂತ್ರಿ ಆಗಿ ಮೇ 10ರಂದು ಪ್ರಮಾಣವಚನ ಸ್ವೀಕರಿಸಿದ ಬಳಿಕ, ತಮ್ಮ ಮೊದಲ ಚುನಾವಣೆಯಲ್ಲೇ ಐತಿಹಾಸಿಕ ಗೆಲುವು ಸಾಧಿಸಿದ ಟಿವಿಕೆ ಪಕ್ಷದ ನಾಯಕ ವಿಜಯ್ ಅವರನ್ನು ಅಭಿನಂದಿಸಲು ಚಿತ್ರರಂಗದ ಅನೇಕ ನಟರು, ನಿರ್ದೇಶಕರು, ನಿರ್ಮಾಪಕರು ಹಾಗೂ ಸಹೋದ್ಯೋಗಿಗಳು ಭೇಟಿ ನೀಡುತ್ತಿದ್ದಾರೆ. ಇದೇ ಹಿನ್ನೆಲೆಯಲ್ಲಿ ಸೋಮವಾರ ನಟಿ ಸಿಮ್ರಾನ್ ಮತ್ತು ನಟ ಸಿಂಬು ಅವರು ಚೆನ್ನೈನಲ್ಲಿರುವ ಪಕ್ಷದ ಮುಖ್ಯ ಕಚೇರಿಯಲ್ಲಿ ವಿಜಯ್ ಅವರನ್ನು ಭೇಟಿಯಾಗಿ ಶುಭಾಶಯ ಕೋರಿದರು. ವಿಜಯ್ ಅವರ ರಾಜಕೀಯ ಯಶಸ್ಸು ಮತ್ತು ನಾಯಕತ್ವಕ್ಕೆ ಚಿತ್ರರಂಗದಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿರುವುದು ಈ ಭೇಟಿಗಳ ಮೂಲಕ ಮತ್ತೊಮ್ಮೆ ಸ್ಪಷ್ಟವಾಗಿದೆ.













