Last Updated:
ಪರೀಕ್ಷಿತ್ ಸಾಹ್ನಿ 3 ಈಡಿಯಟ್ಸ್ ಸಿನಿಮಾದಲ್ಲಿನ ಸಲೀಂ ಖುರೇಷಿ ಪಾತ್ರ ವಿಶೇಷ ಜನಪ್ರಿಯತೆ ತಂದುಕೊಟ್ಟಿತ್ತು. ಸಿನಿಮಾದಲ್ಲಿ ಆಮಿರ್ ಖಾನ್, ಆರ್. ಮಾಧವನ್ ಮತ್ತು ಶರ್ಮನ್ ಜೋಶಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.
ಬಾಲಿವುಡ್ನ ಹಿರಿಯ ನಟ ಪರೀಕ್ಷಿತ್ ಸಾಹ್ನಿ (Actor Parikshit Sahni) ತಮ್ಮ ದಶಕಗಳ ಸಿನಿ ವೃತ್ತಿಜೀವನದಲ್ಲಿ ಹಲವು ಜನಪ್ರಿಯ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ. 3 ಈಡಿಯಟ್ಸ್, ಪಿಕೆ, ‘ಸುಲ್ತಾನ್ ಸೇರಿದಂತೆ ಹಲವು ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ನಟ ಇದೀಗ ವಯೋಸಹಜ ಕಾರಣಗಳಿಂದ ನಿಧಾನವಾಗಿ ನಡೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೆಚ್ಚಿನ ನಟನನ್ನು ಈ ಸ್ಥಿತಿಯಲ್ಲಿ ಕಂಡ ಅಭಿಮಾನಿಗಳು ಭಾವುಕರಾಗಿದ್ದಾರೆ.














