Actor: ಚಿತ್ರರಂಗಕ್ಕೆ ದೊಡ್ಡ ಆಘಾತ! ಖ್ಯಾತ ಬಾಲಿವುಡ್ ನಟ ಇನ್ನಿಲ್ಲ | | ACTPnews

ರಮಾಕಾಂತ್ ಡೇಮಾ


Last Updated:

ಭಾರತೀಯ ಚಿತ್ರರಂಗ ಹಿರಿಯ ನಟ ರಮಾಕಾಂತ್ ಡೇಮಾ (Ramakatn Dayma) ನಿಧನರಾಗಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಸೋಮವಾರ ಬೆಳಗ್ಗೆ (ಮೇ 26, 2026) ಕೊನೆಯುಸಿರೆಳೆದರು.

ರಮಾಕಾಂತ್ ಡೇಮಾ
ರಮಾಕಾಂತ್ ಡೇಮಾ

ಭಾರತೀಯ ಚಿತ್ರರಂಗ ಹಿರಿಯ ನಟ ರಮಾಕಾಂತ್ ಡೇಮಾ (Ramakatn Dayma) ನಿಧನರಾಗಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಸೋಮವಾರ ಬೆಳಗ್ಗೆ (ಮೇ 26, 2026) ಕೊನೆಯುಸಿರೆಳೆದರು. ನಟ ರಮಾಕಾಂತ್ ನಿಧನಕ್ಕೆ ಸ್ಪಷ್ಟ ಕಾರಣವೇನು ಎಂಬುದು ಇನ್ನು ತಿಳಿದು ಬಂದಿಲ್ಲ.

ಇನ್ನು ನಟ ರಮಾಕಾಂತ್ ಡೇಮಾ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು, ಕುಟುಂಬ ಸದಸ್ಯರು ಸಂತಾಪ ಸೂಚಿಸಿದ್ದಾರೆ. ಇನ್ನು ರಮಾಕಾಂತ್ ಅವರ ಆಪ್ತರಾಗಿರುವ ನಟಿ ಶುಂಭಾಗಿ ಲಟ್ಕರ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ಸಾವಿನ ಸುದ್ದಿಯನ್ನು ಸ್ಪಷ್ಟಪಡಿಸಿದ್ದಾರೆ. ಜೊತೆಗೆ ನಟನ ಹಳೆಯ ವೀಡಿಯೊವನ್ನು ಸಹ ಹಂಚಿಕೊಂಡಿದ್ದಾರೆ.

ಅನೇಕ ಚಿತ್ರಗಳಲ್ಲಿ ನಟಿಸಿರುವ ಹಿರಿಯ ನಟ ರಮಾಕಾಂತ್ ಡೈಮಾ. ಶಾರುಖ್ ಖಾನ್ ಅವರ ಚಕ್ ದೇ ಇಂಡಿಯಾ ಚಿತ್ರದಲ್ಲೂ ನಟಿಸಿದ್ದರು. ಕಳೆದ ಕೆಲವು ತಿಂಗಳುಗಳಿಂದ ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ.

ಇದನ್ನೂ ಓದಿ: Nagarjuna: ಅಂದು ಎಲ್ಲರೂ ನನ್ನನ್ನು ನೋಡಿ ಜೋರಾಗಿ ನಕ್ಕರು! ಅವಮಾನಗೊಂಡ ನಟ ನಾಗಾರ್ಜುನ ಮಾಡಿದ್ದೇನು ಗೊತ್ತಾ?

ಇನ್ನು ನಟಿ ಶುಂಭಾಗಿ ಲಟ್ಕರ್ ಹಂಚಿಕೊಂಡ ಪೋಸ್ಟ್ ನಲ್ಲಿ ನಾವು ಒಬ್ಬ ಅದ್ಭುತ ಮತ್ತು ಪವರ್ ಫುಲ್ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ. ನನ್ನ ದುಃಖವನ್ನು ವ್ಯಕ್ತಪಡಿಸಲು ನನ್ನಲ್ಲಿ ಪದಗಳಿಲ್ಲ. ರಮಾಕಾಂತ್‌ಜಿ ಕೇವಲ ಆಪ್ತ ಸ್ನೇಹಿತ ಅಥವಾ ಕುಟುಂಬ ಸದಸ್ಯರಾಗಿರಲಿಲ್ಲ, ಆದರೆ ನಾನು ಅಪಾರ ಗೌರವವನ್ನು ಹೊಂದಿದ್ದ ವ್ಯಕ್ತಿಯಾಗಿದ್ದರು. ಅವರು ತಮ್ಮ ಜೀವನದ ಪ್ರತಿಯೊಂದು ಸವಾಲನ್ನು ನಗುವಿನೊಂದಿಗೆ ಎದುರಿಸಿದರು” ಎಂದು ಹೇಳಿದ್ದಾರೆ.

ಹಾಗೆಯೇ ನಮ್ಮ ಹಲವು ಕನಸುಗಳು ನನಸಾಗದೆ ಉಳಿದಿದ್ದವು. ಹಲವು ವರ್ಷಗಳ ನಂತರ, ನಾನು ಅವರೊಂದಿಗೆ ಮತ್ತೆ ಕೆಲಸ ಮಾಡಲು ಬಯಸಿದ್ದೆ. ನಾವು ಒಟ್ಟಿಗೆ ಒಂದು ಸುಂದರವಾದ ಹಿಂದಿ ಸಿನಿಮಾವನ್ನು ಮಾಡಲು ನಿರ್ಧರಿಸಿದ್ದೆವು. ನಾನು ಇದನ್ನು ಅವರಿಗೆ ಹೇಳಿದಾಗ, ಅವರು ಮುಗುಳ್ನಗುತ್ತಾ, ‘ನಾನು ಬೇಗ ಗುಣಮುಖನಾಗಲಿ’ ಎಂದು ಹೇಳಿದರು. ಆದರೆ ಆ ಕನಸು ಕೂಡ ನನಸಾಗಲಿಲ್ಲ” ಎಂದು ಶುಭಾಂಗಿ ಹೇಳಿಕೊಂಡಿದ್ದಾರೆ.

“ಕೆಲವರು ಪದಗಳಲ್ಲಿ ವರ್ಣಿಸಲಾಗದ ಶಾಂತಿಯನ್ನು ಬಿಟ್ಟು ಹೋಗುತ್ತಾರೆ. ಇಂದು ಅಂತಹ ಒಂದು ದಿನ. ರಮಾಕಾಂತ್‌ಜಿ, ನಿಮ್ಮನ್ನು ಯಾವಾಗಲೂ ಸ್ಮರಿಸಲಾಗುವುದು. ನಿಮ್ಮ ಪ್ರೀತಿ, ಧೈರ್ಯ, ಕಲಾತ್ಮಕತೆ ಮತ್ತು ಸುಂದರ ವ್ಯಕ್ತಿತ್ವ ಯಾವಾಗಲೂ ನಮ್ಮ ಹೃದಯದಲ್ಲಿ ನೆಲೆಸಿರುತ್ತದೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಶುಭಾಂಗಿ ತಮ್ಮ ಪೋಸ್ಟ್ ನಲ್ಲಿ ಬಹಳಷ್ಟು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed