Last Updated:
31 ಸಿಎಂಗಳು ಒಟ್ಟು 3,660 ಕೋಟಿ ರೂ ಆಸ್ತಿ ಹೊಂದಿದ್ದು, ನಾಲ್ವರು ಶತಕೋಟ್ಯಾಧಿಪತಿಗಳಾಗಿದ್ದಾರೆ. ಡಿಕೆ ಶಿವಕುಮಾರ್ ಅವ್ರು 1,413 ಕೋಟಿ ಆಸ್ತಿಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.
ಬೆಂಗಳೂರು (ಜು.31): ನಮ್ಮ ದೇಶದ ರಾಜಕಾರಣಿಗಳು ಯಾವ ಉದ್ಯಮಿಗಳಿಗೂ ಕಡಿಮೆ ಇಲ್ಲ. ಟಾಪ್ ಶ್ರೀಮಂತರ ಪಟ್ಟಿಗಳಲ್ಲಿ ಪೊಲಿಟಿಷಿಯನ್ಗಳು (Politicians) ಕೂಡ ಟಾಪ್ನಲ್ಲೇ ಇರ್ತಾರೆ. ಆಗ ಒಂದು ಕಾಲ ಇತ್ತು. ಖಾದಿ ತೊಟ್ಟು, ಸರಳ ಜೀವನ ಮಾಡ್ತಾ, ಜನ ಸೇವೆ ಮಾಡೋರೆ ರಾಜಕಾರಣಿಗಳಾಗ್ತಿದ್ರು. ಆದ್ರೆ ಈಗ ಕಾಲ ಬದಲಾಗಿದೆ. ಸೂಟುಬೂಟು ಹಾಕಿ, ಕಾಂಚಾಣದ ಖಜಾನೆ ಹೊಂದಿದವರೇ ಈ ರಾಜಕೀಯಕ್ಕೆ ಕಾಲಿಡೋದು ಅನ್ನೋ ಮಾತು ಇದೆ. ಇದೀಗ ನಮ್ಮ ದೇಶದಲ್ಲೇ ಅತ್ಯಂತ ಶ್ರೀಮಂತ ಹಾಗೂ ಬಡ ಮುಖ್ಯಮಂತ್ರಿ ಯಾರು ಗೊತ್ತಾ?
ದೇಶದ 31 ಮುಖ್ಯಮಂತ್ರಿಗಳ ಆಸ್ತಿ ವಿವರವನ್ನ ಅಸೋಸಿಯೇಷನ್ ಫಾರ್ ಡಿ ‘ಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸಂಸ್ಥೆ ಬಹಿರಂಗ ಪಡಿಸಿದೆ. ಈ ವರದಿ ಮಾಹಿತಿ ಪ್ರಕಾರ ದೇಶದಲ್ಲೇ ಅತ್ಯಂತ ಶ್ರೀಮಂತ ಸಿಎಂ ಅಂದ್ರೆ ಅವರೇ ನಮ್ಮ ಕರ್ನಾಟಕದ ಮುಖ್ಯಮಂತ್ರಿ ಡಿಕೆ ಶಿವಕುಮಾರ್.
ಹೌದು ಕರ್ನಾಟಕದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ದೇಶ ಶ್ರೀಮಂತ ಮುಖ್ಯಮಂತ್ರಿಗಳ ಪೈಕಿ ಮೊದಲ ಸ್ಥಾನದಲ್ಲಿದ್ದಾರೆ. ಡಿಕೆ ಶಿವಕುಮಾರ್ ಅವರಿಗೆ ಒಟ್ಟು 1,413 ಕೋಟಿ ಆಸ್ತಿ ಹೊಂದಿದ್ದು, ಅತಿ ಸಿರಿವಂತ ಸಿಎಂ ಎನಿಸಿಕೊಂಡಿದ್ದಾರೆ.
31 ಸಿಎಂಗಳು ಒಟ್ಟು 3,660 ಕೋಟಿ ರೂ ಆಸ್ತಿ ಹೊಂದಿದ್ದು, ನಾಲ್ವರು ಶತಕೋಟ್ಯಾಧಿಪತಿಗಳಾಗಿದ್ದಾರೆ. ಡಿಕೆ ಶಿವಕುಮಾರ್ ಅವ್ರು 1,413 ಕೋಟಿ ಆಸ್ತಿಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನಗಳಲ್ಲಿ ಆಂಧ್ರಪ್ರದೇಶದ ಚಂದ್ರ ಬಾಬು ನಾಯ್ಡು (931 ಕೋಟಿ ರು.)
ಈ ಸಿರಿವಂತ ಸಿಎಂಗಳ ಪಟ್ಟಿಯಲ್ಲಿ ತಮಿಳುನಾಡಿನ ಸಿಎಂ ವಿಜಯ್ ಅವರು ಮೂರನೇ ಸ್ಥಾನದಲ್ಲಿದ್ದಾರೆ. ವಿಜಯ್ ಆಸ್ತಿ ಮೌಲ್ಯ 648 ಕೋಟಿ ಇದೆ. ನಂತರದ ಸ್ಥಾನದಲ್ಲಿ ಅರುಣಾಚಲ ಪ್ರದೇಶದ ಪೇಮಾ ಖಂಡು (332 ಕೋಟಿ ರು.) ಇದ್ದಾರೆ.
ಎಡಿಆರ್ ಅಂಕಿ ಅಂಶಗಳ ಪ್ರಕಾರ, ಕಾಶ್ಮೀರದ ಒಮರ್ ಅಬ್ದುಲ್ಲಾ ಅವರು ದೇಶದ ಅತ್ಯಂತ ಬಡ ಮುಖ್ಯಮಂತ್ರಿ ಅನಿಸಿಕೊಂಡಿದ್ದಾರೆ. ಇವರ ಬಳಿಕ ಕೇವಲ 55.24 ಲಕ್ಷ ಆಸ್ತಿ ಇದೆ ಎಂದು ವರದಿ ಆಗಿದೆ. ಇವರು ಘೋಷಿತ ಆಸ್ತಿಯನ್ನು ಹೊಂದಿದ್ದು, ದೇಶದ ಅತಿ ಬಡ ಮುಖ್ಯಮಂತ್ರಿ ಎನಿಸಿಕೊಂಡಿದ್ದಾರೆ.
ವಿಜಯ್ ನಂತರದ ಸ್ಥಾನ ಗಳಲ್ಲಿ ಪಶ್ಚಿಮ ಬಂಗಾಳ ಸಿಎಂ ಸುವೇಂದು ಅಧಿಕಾರಿ (85.87 ಲಕ್ಷ ರು.), ರಾಜಸ್ಥಾನದ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ (1.46 ಕೋಟಿ ರು.+) ಇದ್ದಾರೆ.
ಎಡಿಆರ್ ಮಾಹಿತಿ ಪ್ರಕಾರ, 31 ಮುಖ್ಯಮಂತ್ರಿಗಳ ಪೈಕಿ. ಶೇ.45ರಷ್ಟು ಅಂದರೆ 14 ಸಿಎಂಗಳು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣ ಇರುವುದಾಗಿ ಕೊಂಡಿದ್ದಾರೆ. ಈ ಪೈಕಿ 11 ಸಿಎಂಗಳ ವಿರುದ್ಧ ಗಂಭೀರ ಪ್ರಕರಣಗಳಿವೆ ಎಂದು ಕನ್ನಡ ಪ್ರಭ ವರದಿ ಮಾಡಿದೆ.














