ಕರಾವಳಿ ಚಿತ್ರದ ಮಿತ್ರ ಪಾತ್ರ ನೋಡಿದವರೆಲ್ಲ ಪ್ರಶಂಸೆಗಳ ಸುರಿಮಳೆಗೈಯುತ್ತಿದ್ದಾರೆ. ಇವರು ತಮ್ಮ ಪಾತ್ರವನ್ನ ಆ ರೀತಿನೇ ಮಾಡಿದ್ದಾರೆ. ಚಿತ್ರದಲ್ಲಿ ಮಿತ್ರ ನಮಗೆ ಎಲ್ಲೂ ಸಿಗೋದೇ ಇಲ್ಲ, ಎಲ್ಲೂ ಕಾಣಿಸೋದು ಇಲ್ಲ. ಎಲ್ಲೂ ಇಣುಕಿ ನೋಡಿರೋದು ಇಲ್ಲ.
“ಪ್ರಶಂಸೆಗಳ ಸುರಿಮಳೆ, ಒಳ್ಳೆ ಪಾತ್ರಗಳಾಗಿ ಕನ್ವರ್ಟ್ ಆದ್ರೆ ಅದ್ಭುತ”
(ಚಿತ್ರ ಕೃಪೆ: ಮಿತ್ರಾ ಇನ್ಸ್ಟಾಗ್ರಾಮ್)
ಕೋಣಗಳನ್ನ ಓಡಿಸೋ ಕಂಬಳ ಕರಾವಳಿ ಭಾಗದಲ್ಲಿಯೇ ಹೆಚ್ಚಿದೆ. ಮಿತ್ರ ಅವರು ಮಂಗಳೂರಿನಲ್ಲಿಯೇ ಬೆಳೆದವರು. ಇವರಿಗೆ ಆ ಕಡೆಯ ಭಾಷೆ ಮತ್ತು ಅಲ್ಲಿಯ ಸಂಸ್ಕೃತಿ ಪರಿಚಯ ಇದೆ.
ಕರಾವಳಿ ಚಿತ್ರದ ಮಹಾಬಲ ಪಾತ್ರಕ್ಕೆ ಪ್ರಶಂಸೆಗಳು ಸುರಿಮಳೆ ಆಗುತ್ತಿದೆ. ಇದು ತುಂಬಾನೆ ಖುಷಿನೂ ಕೊಡುತ್ತಿದೆ. ಹಾಗೆ ಎಲ್ಲರೂ ಫೋನ್ ಮಾಡಿಯೇ ಪ್ರಶಂಸೆ ಮಾಡುತ್ತಾನೆ ಇದ್ದಾರೆ.
ಮಹಾಬಲ ಮಿತ್ರ Exclusive ಮಾತುಕತೆ
(ಚಿತ್ರ ಕೃಪೆ: ಮಿತ್ರಾ ಇನ್ಸ್ಟಾಗ್ರಾಮ್)
ಈ ಒಂದು ಪ್ರಶಂಸೆ ಒಳ್ಳೆ ಒಳ್ಳೆ ಪಾತ್ರಗಳಾಗಿಯೇ ಕನ್ವರ್ಟ್ ಆದರೆ ಅದ್ಭುತವೇ ನೋಡಿ. ಈ ಒಂದು ಚಿತ್ರ ತುಂಬಾನೆ ಖುಷಿಕೊಟ್ಟಿದೆ. ಮಹಾಬಲ ಪಾತ್ರದ ಸುತ್ತವೆ ಕತೆ ಇದೆ ಅಂದಾಗ ಖುಷಿನೂ ಆಯಿತು. ಆದರೆ, ಇಷ್ಟು ದೊಡ್ಡಮಟ್ಟಕ್ಕೆ ಪ್ರಶಂಸೆ ಸಿಗುತ್ತದೆ ಅಂತ ಅಂದುಕೊಂಡಿರಲಿಲ್ಲ.
ಮಕ್ಕಳನ್ನ ಕೈಗೆ ಕೊಡ್ತಾರೆ
ನನ್ನ ಪಾತ್ರದ ಬಗ್ಗೆ ಜನಕ್ಕೆ ವಿಶೇಷ ಪ್ರೀತಿ ಬೆಳೆದಿದೆ. ನನ್ನ ಯಾರೂ ಮಿತ್ರ ಅಂತ ನೋಡ್ತಾನೇ ಇಲ್ಲ. ಎಲ್ಲರೂ ಮಹಾಬಲ ಅಂತಲೇ ನೋಡ್ತಿದ್ದಾರೆ.
ಥಿಯೇಟರ್ ವಿಸಿಟ್ಗೆ ಹೋದಾಗ ಜನ ಬಂದು ಮಾತನಾಡಿಸುತ್ತಾರೆ. ಅಷ್ಟೆ ಪ್ರೀತಿಯಿಂದಲೆ ನಮ್ಮ ಮಕ್ಕಳನ್ನ ಎತ್ತಿಕೊಳ್ಳಿ ಅಂತಲೂ ಕೊಡ್ತಾರೆ. ಜನ ಹೋದಲ್ಲಿ ಬಂದಲ್ಲಿ ಇಷ್ಟೊಂದು ಪ್ರೀತಿ ತೋರಿಸುತ್ತಿದ್ದಾರೆ ಅಂತಲೇ ಮಿತ್ರ ಹೇಳಿಕೊಂಡಿದ್ದಾರೆ.
ಈ ಚಿತ್ರದಲ್ಲಿ ನನ್ನ ಪಾತ್ರ ಟ್ರೈನರ್ ಅಲ್ಲವೇ? ಹಾಗಾಗಿಯೇ ಇಲ್ಲಿ ನಾನು ದೇಹದ ತೂಕ ಇಳಿಸಿಕೊಳ್ಳುವ ಅವಶ್ಯಕತೆ ಇರಲಿಲ್ಲ. ಆದರೆ, ಸೆಕೆಂಡ್ ಹಾಫ್ ಅಲ್ಲಿ ಬರುವ ಯಂಗ್ ಲುಕ್ಗೆ ಒಂದಷ್ಟು ಸಣ್ಣ ಆಗಿದ್ದೇನೆ.
ಒಂದು ವೇಳೆ ಈ ಚಿತ್ರದಲ್ಲಿ ಸಣ್ಣ ಹಾಗಿ ಸಿಕ್ಸ್ಪ್ಯಾಕ್ ಮಾಡಿಕೊಳ್ಳುವ ಅವಶ್ಯಕತೆ ಇದ್ದರೆ ಪಕ್ಕಾ ಮಾಡುತ್ತಿದ್ದೆ. ಹಾಗೆ ಈ ಚಿತ್ರ ಬಂದ್ಮೇಲೆ ಒಂದು ಹೊಸ ಹೋಪ್ ಹುಟ್ಟಿಕೊಳ್ಳುತ್ತಿದೆ.
ನನಗಾಗಿಯೇ ಪಾತ್ರಗಳನ್ನ ಬರೆಯುತ್ತಾರೆ ಅನ್ನುವ ನಂಬಿಕೆ ಇದೆ. ಆ ಒಂದು ನಂಬಿಕೆಯನ್ನ ಕರಾವಳಿ ಚಿತ್ರ ಹುಟ್ಟಿಸಿದೆ ಅಂತಲೂ ಮಿತ್ರ ನ್ಯೂಸ್-18 ಕನ್ನಡ ಡಿಜಿಟಲ್ Exclusive ಸಂದರ್ಶನದಲ್ಲಿಯೇ ಹೇಳಿಕೊಂಡಿದ್ದಾರೆ.













