Karavali Movie: ಕರಾವಳಿ ಸಿನಿಮಾ ಹೊಸ ನ್ಯೂಸ್; ಈ ಶುಕ್ರವಾರವೇ ವಿದೇಶದಲ್ಲಿ ಅಬ್ಬರ ಶುರು! | | ACTPnews

ಕರಾವಳಿ ಸಿನಿಮಾ ಹೊಸ ನ್ಯೂಸ್; ಈ ಶುಕ್ರವಾರವೇ ವಿದೇಶದಲ್ಲಿ ಅಬ್ಬರ ಶುರು!


Last Updated:

ಕರಾವಳಿ ಚಿತ್ರ ವಿದೇಶದಲ್ಲೂ ರಿಲೀಸ್ ಆಗುತ್ತಿದೆ. ಈ ಶುಕ್ರವಾರವೇ ತೆರೆ ಕಾಣುತ್ತಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ಕರಾವಳಿ ಸಿನಿಮಾ ಹೊಸ ನ್ಯೂಸ್; ಈ ಶುಕ್ರವಾರವೇ ವಿದೇಶದಲ್ಲಿ ಅಬ್ಬರ ಶುರು!
ಕರಾವಳಿ ಸಿನಿಮಾ ಹೊಸ ನ್ಯೂಸ್; ಈ ಶುಕ್ರವಾರವೇ ವಿದೇಶದಲ್ಲಿ ಅಬ್ಬರ ಶುರು!

ಕರಾವಳಿ ಚಿತ್ರ (Karavali Movie) ಗಲ್ಫ್ ಕಂಟ್ರಿಯಲ್ಲೂ ರಿಲೀಸ್ ಆಗುತ್ತಿದೆ. ರಿಲೀಸ್ ಆದ 5 ದಿನಗಳಲ್ಲಿ ಈ ಚಿತ್ರ 6 ಕೋಟಿ ಕಲೆಕ್ಷನ್ (Collection) ಮಾಡಿದೆ. ಈ ಮೂಲಕ ರಿಲೀಸ್ ಆದ 5 ದಿನಕ್ಕೇನೆ ಈ ಚಿತ್ರ ಹೊರ ದೇಶದಲ್ಲೂ (Out of Country) ರಿಲೀಸ್ ಆಗುತ್ತಿದೆ. ಹೆಸರಾಂತ ಸಂಸ್ಥೆ ಈ ಚಿತ್ರದ ಓವರ್‌ ಸೀಸ್ (Overseas) ಹಕ್ಕು ಖರೀದಿಸಿದೆ. ಚಿತ್ರ ತಂಡವೇ ಈ ವಿಷಯವನ್ನ ಅಧಿಕೃತವಾಗಿಯೇ ಹೇಳಿಕೊಂಡಿದೆ. ಇದರ ವಿವರ ಮುಂದೆ ಇದೆ ಓದಿ.

ಕರಾವಳಿ ಹೊಸ ನ್ಯೂಸ್

ಕರಾವಳಿ ಚಿತ್ರ ಈ ಶುಕ್ರವಾರದಿಂದ ದುಬೈ ಮತ್ತು ಅಬುದಾಬಿಯಲ್ಲಿ ತೆರೆ ಕಾಣುತ್ತಿದೆ. ರಿಲೀಸ್ ಆದ ಐದು ದಿನಕ್ಕೇನೆ ಇದರ ಬೇಡಿಕೆನೂ ಹೆಚ್ಚಾಗಿದೆ.
prajwal devaraj raj b shetty karavali movie release soon on gulf country

ಮಹಾಬಲ-ಮಹಾವೀರನ ಅಬ್ಬರ

ದುಬೈಯಲ್ಲಿರೋ ಕನ್ನಡಿಗರು ಈ ಚಿತ್ರವನ್ನ ನೋಡಬಹುದಾಗಿದೆ. ಈ ಒಂದು ವಿಷಯ ಅಧಿಕೃತವಾಗಿಯೇ ಹೊರ ಬಂದಿದೆ. ಚಿತ್ರ ತಂಡವೇ ಇದನ್ನ ಹೇಳಿಕೊಂಡಿದೆ.

5 ದಿನಕ್ಕೆ 6 ಕೋಟಿ ಕಲೆಕ್ಷನ್

ಕರಾವಳಿ ಚಿತ್ರ ಜುಲೈ-24 ರಂದು ರಿಲೀಸ್ ಆಗಿದೆ. ರಾಜ್ಯದೆಲ್ಲೆಡೆ ಈ ಚಿತ್ರ ತೆರೆಗೆ ಬಂದಿದೆ. ಮೊದಲ ದಿನ 1 ಕೋಟಿ ಕಲೆಕ್ಷನ್ ಮಾಡಿದೆ. 5 ದಿನಗಳ ಹೊತ್ತಿಗೆ ಈ ಚಿತ್ರ 6 ಕೋಟಿ ಕಲೆಕ್ಷನ್ ಮಾಡಿದೆ.

ಮುಂದಿನ ವಾರ…

ಕರಾವಳಿ ಚಿತ್ರ ಮುಂದಿನ ವಾರ ಪರ ಭಾಷೆಯಲ್ಲೂ ರಿಲೀಸ್ ಆಗುತ್ತಿದೆ. ತೆಲುಗು, ತಮಿಳು, ಮಲೆಯಾಳಂ ಭಾಷೆಯಲ್ಲೂ ಈ ಚಿತ್ರ ತೆರೆ ಕಾಣುವ ಸುದ್ದಿನೂ ಇದೆ.

ಇದರ ಹೊರತಾಗಿ ಈ ಚಿತ್ರವನ್ನ ಹೆಸರಾಂತ ಸಂಸ್ಥೆಯಾದ ‘ಫಾರಾಸ್ ಸಿನಿಮಾಸ್’ ವಿದೇಶದಲ್ಲಿ ರಿಲೀಸ್ ಮಾಡುತ್ತಿದೆ. ಹಾಗೆ ಈ ಸಿನಿಮಾದ ವಿಚಾರಕ್ಕೆ ಬಂದ್ರೆ, ಈ ಚಿತ್ರವನ್ನ ಗುರುದತ್ತ ಗಾಣಿಗ ಡೈರೆಕ್ಷನ್ ಮಾಡಿದ್ದಾರೆ.

prajwal devaraj raj b shetty karavali movie release soon on gulf country

ಕರಾವಳಿ ಹೊಸ ನ್ಯೂಸ್
ಮಹಾಬಲ-ಮಹಾವೀರನ ಅಬ್ಬರ

ಕರಾವಳಿ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಅಭಿನಯಿಸಿದ್ದಾರೆ. ಇವರ ಪಾತ್ರವನ್ನ ಕೂಡ ಜನ ಮೆಚ್ಚಿಕೊಂಡಿದ್ದಾರೆ. ಆದರೆ, ಮಹಾಬಲ ಮತ್ತು ಮಹಾವೀರ ಪಾತ್ರಗಳೇ ಹೆಚ್ಚು ಹೈಲೈಟ್ ಆಗಿವೆ.

ಮಹಾಬಲ ಪಾತ್ರವನ್ನ ಹಾಸ್ಯ ನಟ ಮಿತ್ರ ನಿರ್ವಹಿಸಿದ್ದಾರೆ. ಇದು ಜನರನ್ನ ನಗಿಸೋ ಬದಲು ಎಮೋಷನಲ್ ಮಾಡಿದೆ. ಆದರೂ ಜನಕ್ಕೆ ಈ ಪಾತ್ರ ಇಷ್ಟ ಆಗಿದೆ. ಚಿತ್ರದ ಮಹಾವೀರ ಪಾತ್ರವನ್ನ ರಾಜ್ ಬಿ ಶೆಟ್ಟಿ ಮಾಡಿದ್ದಾರೆ. ಇದನ್ನೂ ಜನ ಹೆಚ್ಚು ಮೆಚ್ಚಿಕೊಂಡಿದ್ದಾರೆ.

ರಾಜ್ ಬಿ ಶೆಟ್ಟಿ ಹವಾ

ರಾಜ್ ಬಿ ಶೆಟ್ಟಿ ಅವರು ತೆರೆ ಮೇಲೆ ಬಂದ್ರೆ ಆಯಿತು. ಇಡೀ ಚಿತ್ರಕ್ಕೆ ಬೇರೆಯದ್ದೇ ಖದರ್ ಬರುತ್ತದೆ. ಈ ವಿಚಾರವನ್ನ ಚಿತ್ರ ನೋಡಿದ ಅನೇಕರು ಹೇಳಿದ್ದಾರೆ.

ರಾಜ್ ಬಿ ಶೆಟ್ಟಿ ಕೂಡ ಮಿಡ್ ನೈಟ್ ಶೋಗಳಿಗೂ ಹೋಗಿ ಜನರನ್ನ ಮೀಟ್ ಆಗಿದ್ದಾರೆ. ಅವರ ಅಭಿಪ್ರಾಯವನ್ನು ಕೇಳಿದ್ದಾರೆ. ಹಾಗೆ ಮಿತ್ರಾ ಕೂಡ ಈ ಕೆಲಸ ಮಾಡಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports