Last Updated:
Vijay: ಖ್ಯಾತ ತಮಿಳು ನಟನಿಗೆ ವಿಜಯ್ ಅಂದ್ರೆ ತುಂಬಾನೆ ಇಷ್ಟ. ವಿಜುಯ್ ಅವರನ್ನು ಭೇಟಿಯಾದಾಗೆಲ್ಲ ಈ ನಟ ಅವರನ್ನು ತುಂಬಾ ಹೊತ್ತು ಅಪ್ಪಿಕೊಳ್ತಾರಂತೆ.
ತಮಿಳುನಾಡಿನ (Tamil Nadu) ಸಿಎಂ ವಿಜಯ್ (CM Vijay) ಅವರು ನಟನಾಗಿ ಇಂಡಸ್ಟ್ರಿಯಲ್ಲಿ ಒಳ್ಳೆಯ ಹೆಸರಷ್ಟೇ ಅಲ್ಲ ಬಹಳಷ್ಟು ಸಂಬಂಧಗಳನ್ನು ಸುಂದರವಾಗಿ ಉಳಿಸಿಕೊಂಡಿದ್ದಾರೆ. ಹಿರಿಯ ನಟರಿಂದ ತೊಡಗಿ ಕಿರಿಯ ಕಲಾವಿದರ ತನಕ ವಿಜಯ್ ಅವರ ಸ್ನೇಹದ ಬಗ್ಗೆ ಎಲ್ಲರೂ ಬಾಯ್ತುಂಬ ಮಾತಾಡೋದನ್ನು ನೀವು ಸಾಕಷ್ಟು ಸಂದರ್ಶನಗಳಲ್ಲಿ ನೋಡಿರ್ತೀರಿ.
ಆದರೆ ಇಲ್ಲೊಬ್ಬರು ನಟ ವಿಜಯ್ ಅವರನ್ನು ಎಷ್ಟು ಇಷ್ಟಪಡ್ತಾರೆ ಎಂದರೆ ದಳಪತಿ ಎಂದರೆ ಅವರಿಗೆ ತುಂಬಾನೆ ಇಷ್ಟವಂತೆ. ಹೌದು, ವಿಜಯ್ ಅವರನ್ನು ಕ್ಯೂಟ್ ಎಂದು ಕರೆಯೋ ಆ ನಟ ವಿಜಯ್ ಅವರನ್ನು ತಬ್ಬಿಕೊಂಡ್ರೆ ನಾನು ಬಿಡೋದೇ ಇಲ್ಲ ಎಂದಿದ್ದಾರೆ.
ಗಲಾಟ್ಟಾ.ಕಾಮ್ ಜೊತೆ ಮಾತನಾಡಿದ ತಮಿಳಿನ ಖ್ಯಾತ ನಟರೊಬ್ಬರು ವಿಜಯ್ ಜೊತೆಗಿನ ತಮ್ಮ ಸ್ನೇಹದ ಬಗ್ಗೆ ಮಾತನಾಡಿದ್ದಾರೆ. ಅವರು ಏನಂದಿದ್ದಾರೆ? ಇಲ್ಲಿ ಓದಿ.
ನಾನು ಅವರನ್ನು ವಿಜಯ್ ಎಂದೇ ಕರೆಯುತ್ತೇನೆ. ಈಗ ನಾನು ಅವರನ್ನು ವಿಜಯ್ ಎಂದು ಕರೆದರೆ ಯಾರಾದರೂ ಬಂದು ಹಾಗೆ ಕರೆಯಬೇಡಿ, ಹೀಗೆ ಕರೆಯಿರಿ, ಗೌರವದಿಂದ ಕರೆಯಿರಿ ಅಂತ ಹೇಳಬಹುದು. ಈಗ ಜಗತ್ತು ಬದಲಾಗಿದೆ ಎಂದಿದ್ದಾರೆ.
ಆದರೆ ವಿಜಯ್ ಹಾಗೆ ಅಲ್ಲವೇ ಅಲ್ಲ. ಅವರು ತುಂಬಾ ನಾರ್ಮಲ್, ಸಿಂಪಲ್, ಕ್ಯೂಟ್ ಆದ ಒರಿಜಿನಲ್ ವ್ಯಕ್ತಿ. ವಿಜಯ್ ಅವರು ಬೊಮ್ಮರಿಲ್ಲು ಸಿನಿಮಾ ನೋಡಿ ಈ ಸೀನ್ ಹೇಗೆ ಮಾಡೋದು ಅಂತ ಕೇಳಿದ್ರು. ಹಾಡಿನಲ್ಲಿ ಒಂದು ಶಾಟ್. ಆಗ ಮೊಬೈಲ್ನಲ್ಲಿ ವಿಡಿಯೋ ಇರಲಿಲ್ಲ. ಅದನ್ನು ಮಾಡಿ ತೋರಿಸಬೇಕು. ಆಗ ಅವರು ಮಾಡಿ ತೋರಿಸಿದರು. ನಟಿಸಿ ತೋರಿಸಿದರು. ನಾನು ಸೂಪರ್ ಆಗಿದೆ. ನಾನು ಹಾಗೆ ಮಾಡಿಲ್ವಲ್ಲ ಎಂದು ಹೇಳಿದೆ. ಅವರು ಹೇ ಮಾಡಿ ತೋರಿಸು ಎಂದರು.
ಅವರು ತುಂಬಾ ಪ್ರೀತಿ ಇರುವಂತಹ ವ್ಯಕ್ತಿ. ಅವರು ತುಂಬಾ ಪ್ರೀತಿ ತೋರಿಸುತ್ತಾರೆ. ಆ ಪ್ರೀತಿ ಯಾರಿಂದಲೂ ತೋರಿಸಲು ಸಾಧ್ಯವಿಲ್ಲ. ನಾನು ಅವರನ್ನು ಭೇಟಿಯಾದಾಗ ತುಂಬಾ ಗಟ್ಟಿಯಾಗಿ ಅಪ್ಪಿಕೊಳ್ಳುತ್ತೇನೆ. ನನಗವರು ತುಂಬಾ ಇಷ್ಟ. ಅಪ್ಪಿಕೊಂಡು ಬಿಡುವುದೇ ಇಲ್ಲ ಎಂದು ನಟ ಸಿದ್ಧಾರ್ಥ್ ಹೇಳಿದ್ದಾರೆ.
ತಮಿಳಿನ ಖ್ಯಾತ ನಟನಾಗಿರುವ, ನಟಿ ಅದಿತಿ ರಾವ್ ಹೈದರಿ ಅವರ ಪತಿಯಾಗಿರುವ ಸಿದ್ಧಾರ್ಥ್ ಅವರು ವಿಜಯ್ ಕುರಿತು ಬಾಯ್ತುಂಬ ಮಾತನಾಡಿದ್ದಾರೆ. ತಮ್ಮ ನೆಚ್ಚಿನ ಸ್ನೇಹಿತನ ಬಗ್ಗೆ ಅವರು ಹೇಳಿದ್ದು ವೈರಲ್ ಆಗಿದೆ.
Bangalore,Karnataka














