Last Updated:
ಕರ್ನಾಟಕದಲ್ಲಿ ಮುಂಗಾರು ಚುರುಕು, ಜಲಾಶಯಗಳಿಗೆ ನೀರಿನ ಒಳಹರಿವು ಹೆಚ್ಚಳ. ಹಾರಂಗಿ, ಆಲಮಟ್ಟಿ, ನಾರಾಯಣಪುರ ಡ್ಯಾಮ್ಗಳು ಭರ್ತಿ ಹಂತದಲ್ಲಿವೆ.
ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು ಮಳೆ (Rain) ಮತ್ತೆ ಚುರುಕುಗೊಂಡಿದ್ದು, ರಾಜ್ಯದ ಜೀವನಾಡಿಗಳಾದ ಪ್ರಮುಖ ಜಲಾಶಯಗಳಿಗೆ (Reservoirs) ನೀರಿನ ಒಳಹರಿವು ಭರ್ತಿಯಾಗುತ್ತಿದೆ. ಕೆಲವು ಡ್ಯಾಮ್ಗಳು (Dam) ಭರ್ತಿಯಾಗುವ ಹಂತ ತಲುಪಿದ್ದರೆ, ಇನ್ನು ಕೆಲವು ಜಲಾಶಯಗಳು ಅರ್ಧಕ್ಕಿಂತ ಹೆಚ್ಚು ಭರ್ತಿಯಾಗಿ ರೈತರ (Farmer) ಮೊಗದಲ್ಲಿ ಮಂದಹಾಸ ಮೂಡಿಸಿವೆ.ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಪ್ರಸ್ತುತ ನೀರಿನ ಮಟ್ಟ ಎಷ್ಟಿದೆ? ಯಾವ ಅಣೆಕಟ್ಟಿಗೆ ಎಷ್ಟು ಒಳಹರಿವು ಬರುತ್ತಿದೆ? ಇಲ್ಲಿದೆ ಸಂಪೂರ್ಣ ವಿವರವಾದ ಲೆಕ್ಕಾಚಾರ.
ಹೇಮಾವತಿ ಅಣೆಕಟ್ಟು: ಶೇಕಡಾ 66.291ರಷ್ಟು ಭರ್ತಿಯಾಗಿದ್ದು, ಪ್ರಸ್ತುತ 2907.160 ಅಡಿ ನೀರು ಸಂಗ್ರಹವಾಗಿದೆ.
ಕೆ.ಆರ್.ಸಾಗರ ಅಣೆಕಟ್ಟು: ಮಂಡ್ಯದ ಜೀವನಾಡಿ ಕೆಆರ್ಎಸ್ ಡ್ಯಾಮ್ನಲ್ಲಿ ಪ್ರಸ್ತುತ ಶೇಕಡಾ 34.632ರಷ್ಟು (17.126 ಟಿಎಂಸಿ) ನೀರು ಸಂಗ್ರಹವಿದ್ದು, ಗರಿಷ್ಠ ಮಟ್ಟ 2468.800 ಅಡಿಗಳ ಪೈಕಿ ಪ್ರಸ್ತುತ 2435.940 ಅಡಿಗೆ ತಲುಪಿದೆ.
ಕಬಿನಿ ಅಣೆಕಟ್ಟು: ಶೇಕಡಾ 75.343ರಷ್ಟು ಭರ್ತಿಯಾಗಿದ್ದು, ಉತ್ತಮ ನೀರಿನ ಸಂಗ್ರಹವನ್ನು ಹೊಂದಿದೆ.
ನಾರಾಯಣಪುರ ಅಣೆಕಟ್ಟು: ಶೇಕಡಾ 94.300ರಷ್ಟು ಭರ್ತಿಯಾಗಿದ್ದು, 62,171 ಕ್ಯೂಸೆಕ್ ಒಳಹರಿವು ದಾಖಲಾಗಿದೆ.
ತುಂಗಭದ್ರಾ ಅಣೆಕಟ್ಟು: ಶೇಕಡಾ 33.167ರಷ್ಟು ಭರ್ತಿಯಾಗಿದ್ದು, 35.087 ಟಿಎಂಸಿ ನೀರು ಸಂಗ್ರಹವಿದೆ.
ಭದ್ರಾ ಅಣೆಕಟ್ಟು: ಶೇಕಡಾ 53.033ರಷ್ಟು ಭರ್ತಿಯಾಗಿದ್ದು, 37.937 ಟಿಎಂಸಿ ನೀರು ಲಭ್ಯವಿದೆ.
ಹಿಡಕಲ್ ಅಣೆಕಟ್ಟು: ಶೇಕಡಾ 61.675ರಷ್ಟು ಭರ್ತಿಯಾಗಿದ್ದು, 31.454 ಟಿಎಂಸಿ ನೀರು ಸಂಗ್ರಹವಾಗಿದೆ.
ಮಲಪ್ರಭಾ ಅಣೆಕಟ್ಟು: ಶೇಕಡಾ 40.379ರಷ್ಟು ಭರ್ತಿಯಾಗಿದೆ.
ವಾಣಿವಿಲಾಸ ಸಾಗರ ಅಣೆಕಟ್ಟು: ಶೇಕಡಾ 78.233ರಷ್ಟು ಭರ್ತಿಯಾಗಿ ಗಮನ ಸೆಳೆದಿದೆ.
ಜಲಾಶಯಗಳಿಗೆ ನೀರಿನ ಒಳಹರಿವು ನಿರಂತರವಾಗಿ ಮುಂದುವರಿದಿರುವುದರಿಂದ ಮುಂಗಾರು ಹಾಗೂ ಹಂಗಾಮಿನ ಬೆಳೆಗಳಿಗೆ ನೀರಿನ ಕೊರತೆ ನೀಗುವ ವಿಶ್ವಾಸ ಮೂಡಿದೆ. ಕೆಲವೆಡೆ ಹೊರಹರಿವು ಕೂಡ ಹೆಚ್ಚಿಸಲಾಗಿದ್ದು, ನದಿ ಪಾತ್ರದ ಜನರಿಗೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ನಿಮ್ಮೂರಿನ ಹತ್ತಿರದ ಜಲಾಶಯದ ಸ್ಥಿತಿ ಹೇಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ವರದಿ ನಿಮಗೆ ಸಹಕಾರಿಯಾಗಿದೆ. ಮಳೆಯ ಅಬ್ಬರ ಹೀಗೆಯೇ ಮುಂದುವರೆದರೆ ಬಹುತೇಕ ಜಲಾಶಯಗಳು ಕೆಲವೇ ದಿನಗಳಲ್ಲಿ ಸಂಪೂರ್ಣ ಭರ್ತಿಯಾಗುವ ನಿರೀಕ್ಷೆಯಿದೆ.
Bangalore,Karnataka














