ಶಿವನ ಪರಮ ಭಕ್ತ ರಾವಣ
(ಚಿತ್ರ ಕೃಪೆ: ಯಶ್ ಫ್ಯಾನ್ ಪೇಜ್ ಇನ್ಸ್ಟಾಗ್ರಾಮ್)
ಇನ್ನೇನು ಈ ದೀಪಾವಳಿಗೆ ಈ ಚಿತ್ರ ರಿಲೀಸ್ ಆಗುತ್ತದೆ. ಅದಕ್ಕೂ ಮೊದಲೇ ಚಿತ್ರದ ಪ್ರಚಾರ ಜೋರಾಗಿದೆ. ಅಮೆರಿಕಾದ ಕಾಮಿಕ್ ಕಾನ್ ಅಲ್ಲೂ ಈ ರಾಮಾಯಣದ ಪ್ರಚಾರ ಮಾಡಲಾಗಿದೆ. ಚಿತ್ರದ ಒಂದು ಟ್ರೈಲರ್ ಕೂಡ ಪ್ರದರ್ಶನ ಮಾಡಲಾಗಿದೆ.
ರಾಕಿಂಗ್ ಸ್ಟಾರ್ ಯಶ್, ನಾಯಕ ನಟ ರಣಬೀರ್ ಕಪೂರ್, ನಮಿತ್ ಮಲ್ಹೋತ್ರಾ, ಡೈರೆಕ್ಟರ್ ನಿತೇಶ್ ತಿವಾರಿ ಈ ಚಿತ್ರವನ್ನ ಪ್ರಮೋಟ್ ಮಾಡಿದ್ದಾರೆ. ಇವರೆಲ್ಲ ಈ ಚಿತ್ರವನ್ನ ಪ್ರಮೋಟ್ ಮಾಡಲೆಂದೇ ಅಮೆರಿಕಾದ ಕಾಮಿಕ್ ಕಾನ್ -2026ಕ್ಕೆ ಹೋಗಿದ್ದರು.
ಇಲ್ಲಿ ಎಲ್ಲರೂ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಯಶ್ ಕೂಡ ಮಾತನಾಡಿದರು. ಚಿತ್ರದ ಹಲವು ವಿಷಯಗಳನ್ನು ಹೇಳಿಕೊಂಡರು. ಇದರ ನಡುವೆ ಮಹಾದೇವನ ಹಾಡುಗಳ ಬಗ್ಗೆನೂ ಹೇಳಿಕೊಂಡರು ನೋಡಿ.
ರಾವಣನ ಪಾತ್ರದ ಒಳಗೆ ಹೋಗಲು ಸೆಟ್ ಅಲ್ಲಿ ಮಹಾದೇವನ ಹಾಡುಗಳನ್ನ ಪ್ಲೇ ಮಾಡುತ್ತಿದ್ದೆ. ಇದನ್ನ ಹಾಗೆ ಸುಮ್ನೆ ಪ್ಲೇ ಏನು ಮಾಡ್ತಾ ಇರಲಿಲ್ಲ. ಬದಲಾಗಿ ಎತ್ತರದ ಸೌಂಡ್ ಅಲ್ಲಿಯೇ ಹಚ್ಚುತ್ತಿದ್ದರು.
ಅಜ್ಜ ಹೇಳಿದ ರಾವಣನ ಕತೆ
(ಚಿತ್ರ ಕೃಪೆ: ಯಶ್ ಫ್ಯಾನ್ ಇನ್ಸ್ಟಾಗ್ರಾಮ್)
ಮಹಾದೇವನ ಹಾಡುಗಳನ್ನ ಕೇಳ್ತಾನೇ ರಾವಣನ ಪಾತ್ರದ ಒಳಗೆ ಹೋಗ್ತಾ ಇದ್ದೆ ಅನ್ನುವ ಅರ್ಥದಲ್ಲಿಯೇ ಯಶ್ ಇಲ್ಲಿ ಹೇಳಿಕೊಂಡಿದ್ದಾರೆ. ಶಿವನ ಹಾಡುಗಳನ್ನ ಕೇಳ್ತಾನೇ ರಾವಣನಾಗಿಯೇ ಯಶ್ ಬದಲಾಗುತ್ತಿದ್ದರು ಅಂತಲೂ ಹೇಳಬಹುದು.
ಆ ರೀತಿನೇ ಯಶ್ ಈ ಒಂದು ಪಾತ್ರದ ಒಳಗೆ ಹೋಗಲು ತಯಾರಿ ಮಾಡಿಕೊಳ್ಳುತ್ತಿದ್ದರು ಅನ್ನೋದನ್ನು ಇಲ್ಲಿ ತಮ್ಮದೇ ಶೈಲಿಯಲ್ಲಿಯೇ ಹೇಳಿಕೊಂಡಿದ್ದಾರೆ.
ಯಶ್ ತಮ್ಮ ಅಜ್ಜನಿಂದಲೇ ರಾವಣನ ಕತೆ ಕೇಳಿದ್ದಾರೆ. ಅಜ್ಜ ಹೇಳಿದ ಕತೆಗಳಲ್ಲಿ ರಾಮಾಯಣವು ಇರ್ತಾ ಇತ್ತು. ಹಾಗೆ ಅಜ್ಜ ಹೇಳಿದ ಕತೆಯಲ್ಲಿ ರಾವಣನ ಪಾತ್ರ ಮತ್ತು ರಾವಣನ ಕತೆಯನ್ನ ಕೇಳಿದ್ದಾರೆ.
ಈ ವಿಷಯವನ್ನು ಯಶ್ ಇದೇ ಕಾಮಿಕ್ ಕಾನ್-2026 ರಲ್ಲಿಯೇ ಯಶ್ ಹಂಚಿಕೊಂಡಿದ್ದಾರೆ. ಈ ಮೂಲಕ ರಾವಣನ ಬಗ್ಗೆ ಬಾಲ್ಯದಲ್ಲಿಯೇ ತಿಳಿದುಕೊಂಡಿರೋದಾಗಿಯೇ ಯಶ್ ಹೇಳಿಕೊಂಡಿದ್ದಾರೆ.
ಮಹಾದೇವನ ಹಾಡುಗಳು ಪ್ಲೇ
(ಚಿತ್ರ ಕೃಪೆ: ಯಶ್ ಫ್ಯಾನ್ ಇನ್ಸ್ಟಾಗ್ರಾಮ್)
ರಾಮಾಯಣ ಚಿತ್ರದ 2026 ರ ದೀಪಾವಳಿ ಹಬ್ಬಕ್ಕೆ ರಿಲೀಸ್ ಆಗುತ್ತಿದೆ. ಚಿತ್ರದ ಡೈರೆಕ್ಟರ್ ನಿತೇಶ್ ತಿವಾರಿ ಅವರು ಈ ಕತೆಯನ್ನ ಎರಡು ಭಾಗದಲ್ಲಿ ಹೇಳುತ್ತಿದ್ದಾರೆ. ಮೊದಲ ಭಾಗ ಈ ವರ್ಷ ದೀಪಾವಳಿಗೆ ಬರ್ತಿದೆ. ಎರಡನೇ ಭಾಗ ಮುಂದಿನ ವರ್ಷ 2027 ರಂದು ರಿಲೀಸ್ ಆಗುತ್ತಿದೆ.
ರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ನಟಿಸಿದ್ದಾರೆ. ಸಾಯಿ ಪಲ್ಲವಿ ಸೀತೆಯ ರೋಲ್ ಮಾಡಿದ್ದಾರೆ. ರಾವಣನಾಗಿಯೇ ಯಶ್ ಇಲ್ಲಿ ಅಬ್ಬರಿಸಿದ್ದಾರೆ. ದೊಡ್ಡಮಟ್ಟದಲ್ಲಿಯೇ ಈ ಚಿತ್ರದ ಟ್ರೈಲರ್ ರಿಲೀಸ್ ಕೂಡ ಆಗುತ್ತಿದೆ ಅಂತಲೇ ಹೇಳಬಹುದು.













