Last Updated:
ಭಕ್ತ ಕುಂಬಾರ ಚಿತ್ರ ಅದ್ಭುತ ಚಿತ್ರವೇ ಆಗಿದೆ. ಈ ಸಿನಿಮಾ ಬಂದು 52 ವರ್ಷ ಕಳೆದಿವೆ. ಶಿವರಾಜ್ ಕುಮಾರ್ ಅವರು ಈ ಚಿತ್ರವನ್ನ ಮತ್ತೆ ಮಾಡೋಕೆ ಯೋಚನೆ ಮಾಡಿದ್ದರು ಅನ್ನೋದು ಇದೆ. ಆದರೆ, ಯಾಕೆ ಆಗ್ಲಿಲ್ಲ ಅನ್ನೋದು ಇಲ್ಲಿದೆ ಓದಿ.
ರಾಜಕುಮಾರ್ (Rajkumar) ಅವರ ಚಿತ್ರಗಳನ್ನ ರೀಮೇಕ್ (Remake) ಮಾಡೋ ಸಾಹಸ ಯಾರೂ ಮಾಡೋದಿಲ್ಲ. ಅಭಿನಯಿಸಿರೋ ಅಷ್ಟು ಚಿತ್ರಗಳೂ ಕ್ಲಾಸಿಕ್ ಚಿತ್ರಗಳೇ ಆಗಿವೆ. ಗಂಧದಗುಡಿ-2 ಚಿತ್ರದಲ್ಲಿ ಅಣ್ಣಾವ್ರು ಕೂಡ ಅಭಿನಯಿಸಿದ್ದರು. ಆದರೆ, ಈ ಸಿನಿಮಾ ಅಣ್ಣಾವ್ರ ಸಿನಿಮಾ (Annavra Cinema) ತರವೇ ರೀಚ್ ಆಗ್ಲಿಲ್ಲ ಅನ್ನುವ ಮಾತು ಇದೆ. ರಾಜಕುಮಾರ್ ಅವರ ಕ್ಲಾಸಿಕ್ ಭಕ್ತ ಕುಂಬಾರ ಚಿತ್ರವನ್ನ ಮತ್ತೆ ಮಾಡ್ಬೇಕು ಅಂತಲೂ ಪ್ಲಾನ್ ಇತ್ತು. ಶಿವರಾಜ್ ಕುಮಾರ್ (Shiva Rajkumar) ಅವರೇ ಈ ಚಿತ್ರವನ್ನ ಮಾಡ್ತಾರೆ ಅಂತಲೂ ಇತ್ತು. ಆದರೆ, ಮುಂದೆ ಏನೆಲ್ಲ ಆಯಿತು ಅನ್ನೋದು ಇಲ್ಲಿದೆ ಓದಿ.
ಭಕ್ತ ಕುಂಬಾರ ಬಂದು 52 ವರ್ಷ ಆಗಿದೆ. ಇಷ್ಟು ವರ್ಷ ಆದ್ಮೇಲೂ ಈ ಚಿತ್ರದ ಬಗ್ಗೆ ಮಾತುಕತೆ ಇದೆ. ಅಣ್ಣಾವ್ರ ಅಭಿನಯವನ್ನ ಇಂದಿಗೂ ಜನ ನೆನಪು ಮಾಡಿಕೊಳ್ಳುತ್ತಾರೆ.
52 ವರ್ಷ ಆಯಿತು
ಭಕ್ತ ಕುಂಬಾರ ಚಿತ್ರ ಆಗುತ್ತಿದೆ. ಭಕ್ತ ಕುಂಬಾರ ಪಾತ್ರವನ್ನ ಶಿವರಾಜ್ ಕುಮಾರ್ ಮಾಡ್ತಾರೆ. ಹೀಗೆ ಸುದ್ದಿ ಗೊತ್ತಾಗಿದ್ದೇ ತಡ, ಸಿನಿಮಾ ಪತ್ರಕರ್ತರು ಈ ಬಗ್ಗೆ ಯೋಚನೆ ಮಾಡಿದರು.
ಕನ್ನಡದ ಅದ್ಭುತ ಮತ್ತು ಕ್ಲಾಸಿಕ್ ಚಿತ್ರ ಇದಾಗಿದೆ. ಭಕ್ತ ಕುಂಬಾರ ಪಾತ್ರವನ್ನ ರಾಜಕುಮಾರ್ ಬಿಟ್ರೆ ಮತ್ತೆ ಯಾರಿಗೂ ಮಾಡೋಕೆ ಆಗೋದೇ ಇಲ್ಲ. ಆ ರೀತಿಯ ಪಾತ್ರ ಇದಾಗಿದೆ. ಆದರೆ, ಈ ಚಿತ್ರವನ್ನ ಮತ್ತೆ ಮಾಡಿದರೆ ಮುಗಿತು ಅಂತಲೇ ಯೋಚನೆ ಮಾಡಿದರು.
ಕನ್ನಡ ಸಿನಿಮಾ ಪತ್ರಕರ್ತರು ಒಂದು ಕೆಲಸ ಮಾಡಿದರು. ಅದರಲ್ಲಿ ಹಿರಿಯ ಪತ್ರಕರ್ತರಾದ ಸುಬ್ಬಣ್ಣ, ಬಿ. ಗಣಪತಿ, ಪ್ರೇಮ್ನಾಥ್ ಅವರು ನೇರವಾಗಿ ಪಾರ್ವತಮ್ಮನವರನ್ನ ಭೇಟಿ ಆದರು ನೋಡಿ.
ಯಾಕ್ ಮಾಡ್ಲಿಲ್ಲ
ಭೇಟಿ ಆಗಿ ಈ ಚಿತ್ರಕ್ಕೆ ಒಂದು ತೂಕ ಇದೆ. ರಾಜಕುಮಾರ್ ಅವರ ಅಭಿನಯ ಎತ್ತರದಲ್ಲಿದೆ. ಈ ಒಂದು ಪಾತ್ರವನ್ನ ಯಾರೂ ಮಾಡೋಕೆ ಆಗೋದಿಲ್ಲ.
ಶಿವಣ್ಣ ಅಷ್ಟೆ ಅಲ್ಲ, ಯಾರೂ ಮಾಡೋಕೆ ಆಗೋದಿಲ್ಲ. ಹಾಗಾಗಿಯೇ ಈ ಚಿತ್ರ ಮತ್ತೆ ಮಾಡ್ಬೇಡಿ ಅಂತಲೇ ಹೇಳಿದರು. ಈ ಕಾರಣಕ್ಕೇನೆ ಭಕ್ತ ಕುಂಬಾರ ಚಿತ್ರವನ್ನ ಶಿವಣ್ಣ ಮಾಡ್ಲಿಲ್ಲ ಅನ್ನುವ ಮಾತು ಇದೆ.
ಲೀಲಮ್ಮ ನಿನ್ನ ಗಂಡ ಯಾರಮ್ಮ ಅನ್ನುವ ಪುಸ್ತಕ ಬಿಡುಗಡೆ ಆಗಿದೆ. ಎನ್.ಆರ್.ರಮೇಶ್ ಅವರು ಈ ಪುಸ್ತಕ ಬರೆದಿದ್ದಾರೆ. ಈ ಪುಸ್ತಕ ಬಿಡುಗಡೆಯ ಕಾರ್ಯಕ್ರಮದಲ್ಲಿಯೇ ಹಿರಿಯ ಪತ್ರಕರ್ತ ಬಿ.ಗಣಪತಿ ಅವರು ಭಕ್ತ ಕುಂಬಾರ ಚಿತ್ರದ ಬಗ್ಗೆ ಮಾತನಾಡಿದ್ದಾರೆ.
ರಾಜಕುಮಾರ್ ಅದೆಷ್ಟು ಶ್ರೇಷ್ಠ ಕಲಾವಿದರು ಅನ್ನುವುದನ್ನ ಹೇಳಿಕೊಂಡಿದ್ದಾರೆ. ಭಕ್ತಕುಂಬಾರ ಚಿತ್ರ ಅದೆಂತಹ ಅದ್ಭುತ ಮತ್ತು ಕ್ಲಾಸಿಕ್ ಚಿತ್ರ ಅಂತಲೂ ಹೇಳಿದ್ದಾರೆ ಅಂತಲೇ ಹೇಳಬಹುದು.
Bangalore [Bangalore],Bangalore,Karnataka














