Commonwealth Games 2026: ಗ್ಲಾಸ್ಗೋದಲ್ಲಿ ಪದಕದ ಖಾತೆ ತೆರೆದ ಭಾರತ! 190 ಕೆ.ಜಿ ಎತ್ತಿ ಪ್ಯಾರಾ ಪವರ್‌ಲಿಫ್ಟರ್ ಐತಿಹಾಸಿಕ ಸಾಧನೆ | ಕ್ರೀಡಾ ಸುದ್ದಿ | ACTPnews

ಝಂಡು ಕುಮಾರ್


Last Updated:

2026ರ ಕಾಮನ್‌ವೆಲ್ತ್ ಕ್ರೀಡಾಕೂಟದ ಎರಡನೇ ದಿನದಂದು ಭಾರತ ತನ್ನ ಪದಕಗಳ ಖಾತೆಯನ್ನು ತೆರೆದಿದೆ. ಬಿಹಾರದ ಪ್ಯಾರಾ ಅಥ್ಲೀಟ್ ಝಂಡು ಕುಮಾರ್ ಭಾರತಕ್ಕೆ ಮೊದಲ ಪದಕವನ್ನು ತಂದುಕೊಟ್ಟಿದ್ದಾರೆ.

ಝಂಡು ಕುಮಾರ್
ಝಂಡು ಕುಮಾರ್

ಸ್ಕಾಟ್ಲೆಂಡ್‌(Scotland)ನ ಗ್ಲಾಸ್ಗೋ(Glasgow)ದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ (Commonwealth) ಕ್ರೀಡಾಕೂಟ 2026 ರ ಎರಡನೇ ದಿನದಂದು, ಬಿಹಾರದ ಪ್ಯಾರಾ ಪವರ್‌ಲಿಫ್ಟರ್ (Para Powerlifter) ಝಂಡು ಕುಮಾರ್ (Jhandu Kumar) ಭಾರತಕ್ಕೆ ಮೊದಲ ಪದಕ ತಂದರು. ಅವರು ಪುರುಷರ ಹೆವಿವೇಯ್ಟ್ ಪ್ಯಾರಾ ಪವರ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ (Bronze Medal) ಗೆದ್ದು ಐತಿಹಾಸಿ ಸಾಧನೆ ಮಾಡಿದ್ದಾರೆ. ಈ ಸಾಧನೆಗಾಗಿ ಇಡೀ ದೇಶ ಅವರನ್ನು ಅಭಿನಂದಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಕೂಡ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ, ಝಂಡು ಕುಮಾರ್ ದೇಶಕ್ಕೆ ಗೌರವ ತಂದಿದ್ದಾರೆ ಎಂದು ಹೇಳಿ ಅಭಿನಂದಿಸಿದ್ದಾರೆ.

2026ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಹೆವಿವೇಟ್ ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಝಂಡು ಕುಮಾರ್ ಕಂಚಿನ ಪದಕ ಗೆದ್ದಿದ್ದಾರೆ. ಅವರ ಈ ಸಾಧನೆ ತುಂಬಾ ಅದ್ಭುತವಾಗಿತ್ತು. ನಾನು ಅವರಿಗೆ ಹೃದಯದಿಂದ ಅಭಿನಂದನೆ ಹೇಳುತ್ತೇನೆ. ಈ ಗೆಲುವು ಅವರ ಬಲವಾದ ಶಕ್ತಿ, ದೃಢ ನಿಶ್ಚಯ ಮತ್ತು ಅನೇಕ ವರ್ಷಗಳ ಕಠಿಣ ಅಭ್ಯಾಸಕ್ಕೆ ಸಾಕ್ಷಿಯಾಗಿದೆ.

ಝಂಡು ಕುಮಾರ್ ಅವರು ಎಲ್ಲಾ ಕಷ್ಟಗಳನ್ನು ಜಯಿಸಿ ಅಂತಾರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಗೌರವವನ್ನು ಹೆಚ್ಚಿಸಿದ್ದಾರೆ. ಅವರ ಗೆಲುವು ಕೋಟಿ ಕೋಟಿ ಭಾರತೀಯರಿಗೆ ಸ್ಫೂರ್ತಿ ನೀಡುತ್ತದೆ ಎಂದು ಪ್ರಧಾನಿ ಮೋದಿ ತಮ್ಮ ಟ್ವೀಟ್‌ನಲ್ಲಿ ಹೇಳಿದ್ದಾರೆ.

ಬೆಳ್ಳಿ ಪದಕ ಜಸ್ಟ್ ಮಿಸ್!

ಈ ಸ್ಪರ್ಧೆಯಲ್ಲಿ ಝಂಡು 190 ಕೆಜಿ ಭಾರ ಎತ್ತಿದರು. ಅವರಿಗೆ 130.9 ಅಂಕಗಳು ಬಂದು ಮೂರನೇ ಸ್ಥಾನ ಸಿಕ್ಕಿತು. ಫೈನಲ್‌ನಲ್ಲಿ ಮೊದಲ ಪ್ರಯತ್ನದಲ್ಲಿ 181 ಕೆಜಿ ಎತ್ತಿದರು. ಎರಡನೇ ಪ್ರಯತ್ನದಲ್ಲಿ 190 ಕೆಜಿ ಎತ್ತಿದರು. ಕೊನೆಯ ಪ್ರಯತ್ನದಲ್ಲಿ 196 ಕೆಜಿ ಎತ್ತಲು ಪ್ರಯತ್ನಿಸಿ ವಿಫಲರಾದರು. ಆದ್ದರಿಂದ ಅವರಿಗೆ ಕಂಚಿನ ಪದಕ ಮಾತ್ರ ಸಿಕ್ಕಿತು. ನೈಜೀರಿಯಾದ ರಿಲ್ವಾನ್ ಇದ್ರಿಸ್ 132.8 ಅಂಕಗಳೊಂದಿಗೆ ಚಿನ್ನದ ಪದಕ ಗೆದ್ದರು. ಇಂಗ್ಲೆಂಡ್‌ನ ಮ್ಯಾಥ್ಯೂ ಹಾರ್ಡಿಂಗ್ 131.0 ಅಂಕಗಳೊಂದಿಗೆ ಬೆಳ್ಳಿ ಪದಕ ಪಡೆದರು. ಝಂಡು ಕೇವಲ 0.1 ಕೆಜಿ ಅಂತರದಲ್ಲಿ ಬೆಳ್ಳಿ ಪದಕದಿಂದ ವಂಚಿತರಾದರು.

ಪದಕ ಗೆಲುವಿನ ಬಳಿಕ ಹೇಳಿದ್ದೇನು?

2026ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ನಂತರ ಝಂಡು ಕುಮಾರ್ ಅವರು ಎಎನ್​​ಐ ಜೊತೆಗೆ ಮಾತನಾಡಿದರು. ಇದು ನನ್ನ ಮೊದಲ ಪದಕ. ನನ್ನ ಮನಸ್ಸಿನಲ್ಲಿ ಪದಕ ಗೆಲ್ಲುವುದು ಒಂದೇ ಗುರಿಯಾಗಿತ್ತು. ಈಗ ನಾನು ಗಾಳಿಯಲ್ಲಿ ಹಾರುತ್ತಿರುವಂತೆ ಅನಿಸುತ್ತಿದೆ. ನನಗೆ ತುಂಬಾ ಅಭ್ಯಾಸ ಮತ್ತು ಪ್ರೀತಿ ಕೊಟ್ಟ ಎಲ್ಲಾ ತರಬೇತುದಾರರಿಗೆ ಧನ್ಯವಾದಗಳು. ಮುಂದೆ ಇನ್ನೂ ಚೆನ್ನಾಗಿ ಮಾಡಲು ನಾನು ಶ್ರಮಿಸುತ್ತೇನೆ ಎಂದು ಹೇಳಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports